ಟೀಂ ಇಂಡಿಯಾ ಪರ 3 ಪಂದ್ಯಗಳನ್ನಾಡಿದ್ದ ಆಟಗಾರನಿಗೆ ಶ್ರೀಲಂಕಾದಲ್ಲಿ ಒಲಿದ ನಾಯಕತ್ವ
Lanka T10 Super League: ಚೊಚ್ಚಲ ಲಂಕಾ ಟಿ10 ಸೂಪರ್ ಲೀಗ್ ಡಿಸೆಂಬರ್ 11 ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಆರು ತಂಡಗಳು ಭಾಗವಹಿಸಲಿದ್ದು, ಭಾರತದ ಮಾಜಿ ಆಟಗಾರ ಸೌರಭ್ ತಿವಾರಿ ನುವಾರಾ ಎಲಿಯಾ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಲೀಗ್‌ನ ಎಲ್ಲಾ ಪಂದ್ಯಗಳು ಕ್ಯಾಂಡಿಯ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಪಂದ್ಯಾವಳಿಯ ಆರಂಭಿಕ ದಿನದಂದು ಮೂರು ಪಂದ್ಯಗಳು ನಡೆಯಲಿವೆ.

ಚೊಚ್ಚಲ ಆವೃತ್ತಿಯ ಲಂಕಾ ಟಿ10 ಸೂಪರ್ ಲೀಗ್ ಡಿಸೆಂಬರ್ 11 ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ ತಲಾ 10 ಓವರ್‌ಗಳ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಈ ಲೀಗ್‌ನ ಎಲ್ಲಾ ಪಂದ್ಯಗಳು ಕ್ಯಾಂಡಿಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಅಚ್ಚರಿಯ ವಿಷಯವೆಂದರೆ ಈ ಆರು ಫ್ರಾಂಚೈಸಿಗಳ ಪೈಕಿ ಒಬ್ಬ ಭಾರತೀಯ ಆಟಗಾರನಿಗೂ ತಂಡದ ನಾಯಕತ್ವ ಸಿಕ್ಕಿದೆ. ಆ ಆಟಗಾರ ಬೇರ್ಯಾರು ಅಲ್ಲ, ಟೀಂ ಇಂಡಿಯಾ ಪರ ಮೂರು ಪಂದ್ಯಗಳನ್ನಾಡಿದ್ದ ಸೌರಭ್ ತಿವಾರಿ. ಈ ವರ್ಷದ ಆರಂಭದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ಸೌರಭ್ ತಿವಾರಿ ಐಪಿಎಲ್‌ನಲ್ಲಿ ಆರ್ಸಿಬಿ ಪರವೂ ಆಡಿದ್ದರು. ಇದೀಗ ಅವರಿಗೆ ಲಂಕಾ ಟಿ10 ಸೂಪರ್ ಲೀಗ್‌ನಲ್ಲಿ ತಂಡದ ನಾಯಕತ್ವ ಸಿಕ್ಕಿದೆ.
ಕಿಂಗ್ಸ್ ತಂಡಕ್ಕೆ ಸೌರಭ್ ನಾಯಕ
ಲಂಕಾ ಟಿ10 ಸೂಪರ್ ಲೀಗ್‌ನಲ್ಲಿ ಆಡುತ್ತಿರುವ ಆರು ತಂಡಗಳಲ್ಲಿ ನುವಾರ ಎಲಿಯಾ ಕಿಂಗ್ಸ್ ಕೂಡ ಒಂದಾಗಿದೆ. ಇದೀಗ ಈ ತಂಡದ ನಾಯಕತ್ವವನ್ನು ಭಾರತದ ಮಾಜಿ ಆಟಗಾರ ಸೌರಭ್ ತಿವಾರಿಗೆ ನೀಡಲಾಗಿದೆ. ಸೌರಭ್ ತಿವಾರಿ ಈ ವರ್ಷದ ಆರಂಭದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಟೀಂ ಇಂಡಿಯಾ ಪರ ಕೇವಲ 3 ಪಂದ್ಯಗಳನ್ನು ಆಡಿದ್ದ ತಿವಾರಿ, 2010ರಲ್ಲಿ ಆಸ್ಟ್ರೇಲಿಯ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ನ್ಯೂಜಿಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಇದಾದ ನಂತರ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ.
ಆರ್ಸಿಬಿ ಪರ ಆಡಿದ್ದ ಸೌರಭ್
ರಾಷ್ಟ್ರೀಯ ತಂಡದಲ್ಲಿ ಸೌರಭ್ ತಿವಾರಿಗೆ ಹೆಚ್ಚಿನ ಅವಕಾಶಗಳು ಸಿಗದಿದ್ದರೂ, ಈ ಆಟಗಾರ 2008 ರಲ್ಲಿ ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಇದಲ್ಲದೇ ಸೌರಭ್ ತಿವಾರಿ ಐಪಿಎಲ್‌ನಲ್ಲಿ 93 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 1494 ರನ್ ಗಳಿಸಿದ್ದಾರೆ. ಇದೀಗ ತಮ್ಮ ನಾಯಕತ್ವದಲ್ಲಿ ನುವಾರಾ ಎಲಿಯಾ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಸೌರಭ್ ತಿವಾರಿ ಮೊದಲ ದಿನವೇ ನಾಯಕನಾಗಿ ಅಖಾಡಕ್ಕಿಳಿಯಲಿದ್ದಾರೆ.
ಪಂದ್ಯಾವಳಿಯ ಆರಂಭಿಕ ದಿನದಂದು ಒಟ್ಟು ಮೂರು ಪಂದ್ಯಗಳು ನಡೆಯಲ್ಲಿವೆ. ಮೊದಲ ಪಂದ್ಯ ಜಾಫ್ನಾ ಟೈಟಾನ್ಸ್ ಟೂರ್ನಮೆಂಟ್ ಮತ್ತು ಹಂಬನ್ತೋಟ ಬಾಂಗ್ಲಾ ಟೈಗರ್ಸ್ ನಡುವೆ ನಡೆಯಲಿದೆ. ಇದರ ನಂತರ ನುವಾರಾ ಎಲಿಯಾ ಕಿಂಗ್ಸ್ ಕೊಲಂಬೊ ಜಾಗ್ವಾರ್ಸ್ ತಂಡವನ್ನು ಎದುರಿಸಲಿದೆ. ದಿನದ ಕೊನೆಯ ಪಂದ್ಯದಲ್ಲಿ ಕ್ಯಾಂಡಿ ಬೋಲ್ಟ್ಸ್ ಮತ್ತು ಗಾಲೆ ಮಾರ್ವೆಲ್ಸ್ ನಡುವೆ ಹಣಾಹಣಿ ನಡೆಯಲಿದೆ.
ಎಲ್ಲಾ 6 ತಂಡಗಳು ಹೀಗಿವೆ
ಕೊಲಂಬೊ ಜಾಗ್ವಾರ್ಸ್: ಏಂಜೆಲೊ ಮ್ಯಾಥ್ಯೂಸ್ (ನಾಯಕ), ಡಾನ್ ಲಾರೆನ್ಸ್, ಮಥೀಶ ಪತಿರಾನ, ಕಮಿಂದು ಮೆಂಡಿಸ್, ಆಸಿಫ್ ಅಲಿ, ಜೇಸನ್ ರಾಯ್, ಅಕಿಲಾ ಧನಂಜಯ್, ಏಂಜೆಲೊ ಪೆರೆರಾ, ನಜಿಬುಲ್ಲಾ ಜದ್ರಾನ್, ಅಲಿ ಖಾನ್, ಇಸಿತಾ ವಿಜೆಸುಂದರ, ರಮೇಶ್ ಮೆಂಡಿಸ್, ರೋನಿ ಕಾಮರಮಥ್ನೆ, ಅಸಿತ ಫರ್ನಾಂಡೋ, ದಿಲ್ಶನ್ ಮಧುಶಂಕರ, ಗರುಕ ಸಿಗ್ನಲ್.
ಗಾಲೆ ಮಾರ್ವೆಲ್ಸ್: ಮಹೇಶ್ ತೀಕ್ಷಣ (ನಾಯಕ), ಶಕೀಬ್ ಅಲ್ ಹಸನ್, ಭಾನುಕಾ ರಾಜಪಕ್ಸೆ, ಬಿನುರಾ ಫೆರ್ನಾಂಡೋ, ಅಲೆಕ್ಸ್ ಹೇಲ್ಸ್, ಲ್ಯೂಕ್ ವುಡ್, ಚಮಿಂದು ವಿಕ್ರಮಸಿಂಘೆ, ಜೆಫ್ರಿ ವಾಂಡರ್ಸೆ, ಆಂಡ್ರೆ ಫ್ಲೆಚರ್, ಜಹೂರ್ ಖಾನ್, ಸಂದುನ್ ವೀರಕ್ಕೋಡಿ, ಪ್ರಭಾತ್ ಜಯಸೂರ್ಯ, ಡುಮಿನ್‌ಸಿಡು ವಿಲ್‌ಶಿವ, ಕೆಸ್ರಿಕ್‌ಡು ವಿಲ್‌ಶಿಯ ರಾಜಪಕ್ಸೆ.
ಹಂಬಂಟೋಟ ಬಾಂಗ್ಲಾ ಟೈಗರ್ಸ್: ದಸುನ್ ಶನಕ, ಶೆವೊನ್ ಡೇನಿಯಲ್, ಕುಸಲ್ ಜೆನಿತ್ ಪೆರೇರಾ, ದುಷ್ಮಂತ ಚಮೀರ, ಹಜರತುಲ್ಲಾ ಝಜೈ, ರಿಚರ್ಡ್ ಗ್ಲೀಸನ್, ಇಸುರು ಉದಾನ, ತರಿಂದು ರತ್ನಾಯಕೆ, ಕರೀಂ ಜನತ್, ಮೊಹಮ್ಮದ್ ಶಹಜಾದ್, ಧನಂಜಯ್ ಲಕ್ಷಣ್, ನಿಶಾನ್ ಪೆರಿಚುಗೆಸ್, ಚಮತ್ ಪೆರಿಚುಗೆಸ್.
ಜಾಫ್ನಾ ಟೈಟಾನ್ಸ್: ಡೇವಿಡ್ ವೈಸ್ (ನಾಯಕ), ವನಿಂದು ಹಸರಂಗ, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಕುಸಾಲ್ ಮೆಂಡಿಸ್, ಚರಿತ್ ಅಸಲಂಕಾ, ಮುಹಮ್ಮದ್ ಅಮೀರ್, ನುವಾನ್ ತುಷಾರ, ದುನಿತ್ ವೆಲಾಲಗೆ, ಡ್ವೇನ್ ಪ್ರಿಟೋರಿಯಸ್, ಟಾಮ್ ಅಬೆಲ್, ಪ್ರಮೋದ್ ಮದುಶನ್, ಪವನ್ ರಥನಾಯಕೆ, ಜಾರ್ಜ್ ಗಾರ್ಟನ್, ಟ್ರೆವಿನ್ ಮ್ಯಾಥ್ಯೂ.
ಕ್ಯಾಂಡಿ ಬೋಲ್ಟ್: ತಿಸಾರ ಪೆರೆರಾ (ನಾಯಕ), ಇಮಾದ್ ವಾಸಿಂ, ದಿನೇಶ್ ಚಾಂಡಿಮಲ್, ಪಾತುಮ್ ನಿಸ್ಸಾಂಕ, ಜಾರ್ಜ್ ಮುನ್ಸಿ, ಮಿಲಿಂದ ಸಿರಿವರ್ದನ, ಚತುರಂಗ ಡಿ ಸಿಲ್ವಾ, ಅಮೀರ್ ಹಮ್ಜಾ ಹೊಟಕ್, ಶೆಹನ್ ಜಯಸೂರ್ಯ, ಚಾಮಿಕಾ ಗುಣಶೇಖರ, ಚಂದ್ರಪಾಲ್ ಹೇಮರಾಜ್, ದನಾಲ್ ಹೇಮಾನಂದ, ಅರ್ನೆಸ್ಟೊ ವೆಜಾಗೆ ಪ್ರಸನ್ನ.
ನುವಾರಾ ಎಲಿಯಾ ಕಿಂಗ್ಸ್: ಸೌರಭ್ ತಿವಾರಿ (ನಾಯಕ), ಅವಿಷ್ಕ ಫೆರ್ನಾಂಡೋ, ಕಸುನ್ ರಜಿತ, ದುಶನ್ ಹೇಮಂತ, ಕೈಲ್ ಮೇಯರ್ಸ್, ಬೆನ್ನಿ ಹೊವೆಲ್, ದನುಷ್ಕ ಗುಣತಿಲಕ, ಲಹಿರು ಮಧುಶಂಕ, ಅಫ್ತಾಬ್ ಆಲಂ, ನಿಮ್ಸರಾ ಅಥರ್ಗಲ್ಲ, ಯಶೋದಾ ಲಂಕಾ, ಉಮರ್ ಅಕ್ಮಲ್, ಚವಲ್ಮಿ ಹಲಂಬಜ್ಕೆ, ಚವಲ್ಮಿ ಹಲಂಬಲರ್ ಕರುಣಾರತ್ನ, ಪುಲಿಂದು ಪೆರೇರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
