T20 world cup 2021: ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅವಕಾಶ: ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ PNG ಸಿಬ್ಬಂದಿ

T20 world cup 2021: ಪಪುವಾ ನ್ಯೂ ಗಿನಿಯಾ ದೇಶವು ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದೆ. ಪ್ರಸ್ತುತ ತಂಡದಲ್ಲಿರುವ ಕೆಲವು ಆಟಗಾರರು ತಮ್ಮ ಕುಟುಂಬ ಸದಸ್ಯರನ್ನು ಸಹ ಕಳೆದುಕೊಂಡಿದ್ದಾರೆ.

T20 world cup 2021: ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅವಕಾಶ: ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ PNG ಸಿಬ್ಬಂದಿ
png staff

ಐಸಿಸಿ ಟಿ20 ವಿಶ್ವಕಪ್ 2021 ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಓಮನ್ ಮತ್ತು ಪಪುವಾ ನ್ಯೂಗಿನಿಯಾ (PNG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಓಮನ್ ನಾಯಕ ಜೀಶನ್ ಮಸೂದ್ ಮೊದಲು ಬೌಲಿಂಗ್ ಆಯ್ದುಕೊಂಡರು. ಉಭಯ ತಂಡಗಳ ರಾಷ್ಟ್ರಗೀತೆಯ ವೇಳೆ ಕೆಲ ಆಟಗಾರರು ಭಾವುಕರಾದರು. ಅದರಲ್ಲೂ ಪಪುವಾ ನ್ಯೂಗಿನಿಯಾದ ಸಹಾಯಕ ಸಿಬ್ಬಂದಿ ಕಣ್ಣೀರಿಟ್ಟಿದ್ದರು. ಹೌದು, ಪಪುವಾ ನ್ಯೂಗಿನಿಯಾ (PNG) ತಂಡವು ಇದೇ ಮೊದಲ ಬಾರಿ ಮಹತ್ವದ ಟೂರ್ನಿಯನ್ನು ಆಡುತ್ತಿದೆ. ಬಹುತೇಕರಿಗೆ ಅಪರಿಚಿತವಾಗಿರುವ ಈ ತಂಡವು ಕಠಿಣ ಪರಿಶ್ರಮದ ನಂತರ ಐಸಿಸಿ ಟೂರ್ನಿಯ ಮಹತ್ವದ ಘಟ್ಟವನ್ನು ತಲುಪಿದೆ. ಇದೇ ಕಾರಣದಿಂದ ಪಪುವಾ ನ್ಯೂಗಿನಿಯಾ (PNG) ಆಟಗಾರರು ಹಾಗೂ ಸಿಬ್ಬಂದಿಗಳು ರಾಷ್ಟ್ರಗೀತೆಯ ವೇಳೆ ಭಾವುಕರಾಗಿದ್ದರು.

ಈ ಹಿಂದೆ ಭರ್ಜರಿ ಪ್ರದರ್ಶನ ನೀಡಿದ್ದ ಪಪುವಾ ನ್ಯೂ ಗಿನಿಯಾ (PNG) 2019ರಲ್ಲಿ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಅರ್ಹತೆ ಪಡೆದ ಮೊದಲ ತಂಡವಾಗಿ ಹೊರಹೊಮ್ಮಿತ್ತು. ಅಲ್ಲಿಯವರೆಗೆ ಟಿ20 ಕ್ರಿಕೆಟ್​ನಲ್ಲಿ ಇಂತಹದೊಂದು ತಂಡವಿದೆ ಎಂಬುದು ಅನೇಕರಿಗೆ ತಿಳಿದಿರಲಿಲ್ಲ. ಆದರೆ ಆ ಬಳಿಕ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು.

T20 world cup 2021 PNG support staff in tears during their national anthem

png staff

ಪಪುವಾ ನ್ಯೂ ಗಿನಿಯಾ ದೇಶವು ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದೆ. ಪ್ರಸ್ತುತ ತಂಡದಲ್ಲಿರುವ ಕೆಲವು ಆಟಗಾರರು ತಮ್ಮ ಕುಟುಂಬ ಸದಸ್ಯರನ್ನು ಸಹ ಕಳೆದುಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಿದ್ದ ತಂಡವು ಇದೀಗ ಮತ್ತೆ ಟ್ರ್ಯಾಕ್​ಗೆ ಮರಳುತ್ತಿದೆ. ಟಿ20 ವಿಶ್ವಕಪ್​ ಮೂಲಕ ಇಂತಹದೊಂದು ದೇಶವಿದೆ ಎಂದು ಇಡೀ ವಿಶ್ವಕ್ಕೆ ಸಾರಲು ಹೊರಟಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಪುವಾ ನ್ಯೂ ಗಿನಿಯಾ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್​ ಕಲೆಹಾಕಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಓಮಾನ್ ಪರ ಆರಂಭಿಕರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ ಅಕಿಬ್ ಇಲ್ಯಾಸ್ (50) ಹಾಗೂ ಜಿತೆಂದರ್ ಸಿಂಗ್ (73) ಅವರ ಭರ್ಜರಿ ಅರ್ಧಶತಕದೊಂದಿಗೆ ಓಮಾನ್ ತಂಡವು 13.4 ಓವರ್​ನಲ್ಲಿ 131 ರನ್​ ಕಲೆಹಾಕುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್​ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?

ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ

(T20 world cup 2021 PNG support staff in tears during their national anthem)

Click on your DTH Provider to Add TV9 Kannada