India vs Pakistan: ಪಾಕ್ ತಂಡಕ್ಕೆ ಕಿಂಗ್ ಕೊಹ್ಲಿಯ ಭಯ ಶುರು..!
T20 World Cup 2022: ಈ ಬಾರಿ ಕೂಡ ಆಸೀಸ್ ನೆಲದಲ್ಲೂ ಕಿಂಗ್ ಕೊಹ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುವ ನಿರೀಕ್ಷೆಯಿದೆ. ಏಕೆಂದರೆ ಭರ್ಜರಿ ಫಾರ್ಮ್ನಲ್ಲಿರುವ ಕೊಹ್ಲಿಯನ್ನು ಕಟ್ಟಿಹಾಕುವುದು ಅಂದುಕೊಂಡಷ್ಟು ಸುಲಭವಲ್ಲ.
T20 World Cup 2022: ಟಿ20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯಕ್ಕಾಗಿ ಕೌಂಟ್ ಡೌನ್ ಶುರುವಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆ (ಅ.23) ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳ ಕದನದಲ್ಲಿ ಭಾರತ-ಪಾಕಿಸ್ತಾನ್ (India vs Pakistan) ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಪಾಕ್ ತಂಡಕ್ಕೆ ವಿರಾಟ್ ಕೊಹ್ಲಿಯ (Virat Kohli) ಚಿಂತೆ ಶುರುವಾಗಿದೆ. ಏಕೆಂದರೆ ಕಿಂಗ್ ಕೊಹ್ಲಿಯನ್ನು ಕಟ್ಟಿಹಾಕಿದ್ರೆ ಅರ್ಧ ಪಂದ್ಯ ಗೆದ್ದಂತೆ ಎಂಬುದು ಪಾಕಿಸ್ತಾನ ತಂಡಕ್ಕೆ ಚೆನ್ನಾಗಿ ಗೊತ್ತಿದೆ. ಇದಕ್ಕೆ ಸಾಕ್ಷಿಯೇ ಪಾಕ್ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯ ಭರ್ಜರಿ ಪ್ರದರ್ಶನ.
ಕೇವಲ ಟಿ20 ಪಂದ್ಯಗಳ ಅಂಕಿ ಅಂಶಗಳನ್ನೇ ತೆಗೆದುಕೊಂಡರೆ, ಪಾಕಿಸ್ತಾನ್ ವಿರುದ್ದ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬ್ಯಾಟರ್ಗಳಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಂದರೆ ಪಾಕ್ ಬೌಲರ್ಗಳನ್ನು ಬೆಂಡೆತ್ತುವಲ್ಲಿ ಕಿಂಗ್ ಕೊಹ್ಲಿ ಎತ್ತಿದ ಕೈ. ಹೀಗಾಗಿಯೇ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕುವುದು ಬಾಬರ್ ಪಡೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಏಕೆಂದರೆ….
- – ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿಯ ರನ್ ಸರಾಸರಿ 67.66 ರಷ್ಟಿದೆ. ಅಂದರೆ ಪಾಕ್ ವಿರುದ್ಧ ಆಡಿದ 9 ಟಿ20 ಪಂದ್ಯಗಳಲ್ಲಿ ಕೊಹ್ಲಿ 4 ಅರ್ಧಶತಕಗಳೊಂದಿಗೆ ಬರೋಬ್ಬರಿ 406 ರನ್ ಚಚ್ಚಿದ್ದಾರೆ.
- – ವಿಶೇಷ ಎಂದರೆ ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಬಾರಿಸಿರುವ 4 ಅರ್ಧಶತಕಗಳಲ್ಲಿ ಮೂರು ಹಾಫ್ ಸೆಂಚುರಿ ಮೂಡಿಬಂದಿರುವುದು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ. ಅಷ್ಟೇ ಯಾಕೆ ಕಳೆದ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ಗಳು ವಿಫಲವಾದರೂ ಕಿಂಗ್ ಕೊಹ್ಲಿ 57 ರನ್ ಬಾರಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
- – ಇನ್ನು ಪಾಕಿಸ್ತಾನ್ ವಿರುದ್ಧ ವಿರಾಟ್ ಕೊಹ್ಲಿ 9 ಇನಿಂಗ್ಸ್ಗಳಲ್ಲಿ ಔಟ್ ಆಗಿರುವುದು ಒಮ್ಮೆ ಮಾತ್ರ. ಅಂದರೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವುದು ಕೂಡ ಪಾಕ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
- – ಈ ಬಾರಿ ಪಾಕ್ ತಂಡ ಚಿಂತೆ ಹೆಚ್ಚಾಗಲು ಮುಖ್ಯ ಕಾರಣ ಆಸ್ಟ್ರೇಲಿಯಾ ಪಿಚ್ಗಳಲ್ಲಿ ಕೊಹ್ಲಿಯ ಪ್ರದರ್ಶನ. ಅಂದರೆ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ಕ್ರಿಕೆಟ್ನಲ್ಲಿ 8 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ 794 ರನ್ ಕಲೆಹಾಕಿದ್ದಾರೆ.
ಈ ಬಾರಿ ಕೂಡ ಆಸೀಸ್ ನೆಲದಲ್ಲೂ ಕಿಂಗ್ ಕೊಹ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುವ ನಿರೀಕ್ಷೆಯಿದೆ. ಏಕೆಂದರೆ ಭರ್ಜರಿ ಫಾರ್ಮ್ನಲ್ಲಿರುವ ಕೊಹ್ಲಿಯನ್ನು ಕಟ್ಟಿಹಾಕುವುದು ಅಂದುಕೊಂಡಷ್ಟು ಸುಲಭವಲ್ಲ. ಇದೇ ಕಾರಣದಿಂದಾಗಿ ಇದೀಗ ಪಾಕ್ ಬೌಲರ್ಗಳು ಕೊಹ್ಲಿಗಾಗಿ ವಿಶೇಷ ತಂತ್ರಗಳನ್ನು ಹಣೆಯುತ್ತಿದ್ದಾರೆ. ಇತ್ತ ತಂತ್ರಕ್ಕೆ ಪ್ರತಿತಂತ್ರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಕೊಹ್ಲಿ ಪಾಕ್ ಬೌಲರ್ಗಳನ್ನು ಧೂಳೀಪಟ ಮಾಡಲಿದ್ದಾರಾ ಕಾದು ನೋಡಬೇಕಿದೆ.
Published On - 6:04 pm, Sat, 22 October 22