AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs BAN: ಭಾರತ- ಬಾಂಗ್ಲಾ ಸೂಪರ್ 8 ಪಂದ್ಯಕ್ಕೆ ಶುಭಹಾರೈಸಿದ ಪ್ರಧಾನಿ ಮೋದಿ

PM Narendra Modi: ಎರಡೂ ತಂಡಗಳನ್ನು ಅಭಿನಂದಿಸಿರುವ ಪ್ರಧಾನಿ ಮೋದಿ, "ಇಂದು ರಾತ್ರಿಯ ವಿಶ್ವಕಪ್ ಪಂದ್ಯಕ್ಕಾಗಿ ನಾನು ಎರಡೂ ತಂಡಗಳಿಗೆ ಶುಭ ಹಾರೈಸುತ್ತೇನೆ. ಬಾಂಗ್ಲಾದೇಶ ಭಾರತದ ಅತಿದೊಡ್ಡ ಅಭಿವೃದ್ಧಿ ಪಾಲುದಾರ ಮತ್ತು ನಾವು ಬಾಂಗ್ಲಾದೇಶದೊಂದಿಗಿನ ನಮ್ಮ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ" ಎಂದು ಹೇಳಿದರು.

IND vs BAN: ಭಾರತ- ಬಾಂಗ್ಲಾ ಸೂಪರ್ 8 ಪಂದ್ಯಕ್ಕೆ ಶುಭಹಾರೈಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ
ಪೃಥ್ವಿಶಂಕರ
|

Updated on:Jun 22, 2024 | 8:17 PM

Share

ಆ್ಯಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ (IND vs BAN) ನಡುವೆ ಟಿ20 ವಿಶ್ವಕಪ್​ನ (T20 World Cup 2024) ಸೂಪರ್ 8 ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉಭಯ ತಂಡಗಳಿಗೆ ಶುಭ ಹಾರೈಸಿದ್ದಾರೆ. ಇಂದು ಎರಡೂ ತಂಡಗಳು ಸೂಪರ್ 8 ರಲ್ಲಿ ತಮ್ಮ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದ್ದು, ಸೆಮಿಫೈನಲ್‌ಗೆ ತಲುಪಲು ಭಾರತ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಮತ್ತೊಂದೆಡೆ ಬಾಂಗ್ಲಾದೇಶಕ್ಕೆ ಟೂರ್ನಿಯಲ್ಲಿ ಉಳಿಯಲು ಗೆಲುವಿನ ಅಗತ್ಯವಿದೆ.

ಭಾರತದ್ದೇ ಮೇಲುಗೈ

ಬಾಂಗ್ಲಾದೇಶ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ದಾಖಲೆ ಅತ್ಯುತ್ತಮವಾಗಿದೆ. ಉಭಯ ತಂಡಗಳ ನಡುವೆ ಆಡಿದ 13 ಪಂದ್ಯಗಳಲ್ಲಿ ಭಾರತ 12ರಲ್ಲಿ ಜಯ ಸಾಧಿಸಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಐದು ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಅದೇ ಸಮಯದಲ್ಲಿ, 2016 ರಲ್ಲಿ ಬೆಂಗಳೂರಿನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ ಒಂದು ರನ್‌ನಿಂದ ಗೆದ್ದಿತ್ತು.

IND vs BAN Playing XI: ಟಾಸ್ ಗೆದ್ದ ಬಾಂಗ್ಲಾ; ಮಹತ್ವದ ಪಂದ್ಯಕ್ಕೆ ಭಾರತ ತಂಡ ಹೀಗಿದೆ

ಶುಭ ಹಾರೈಸಿದ ಪ್ರಧಾನಿ ಮೋದಿ

ಎರಡೂ ತಂಡಗಳನ್ನು ಅಭಿನಂದಿಸಿರುವ ಪ್ರಧಾನಿ ಮೋದಿ, “ಇಂದು ರಾತ್ರಿಯ ವಿಶ್ವಕಪ್ ಪಂದ್ಯಕ್ಕಾಗಿ ನಾನು ಎರಡೂ ತಂಡಗಳಿಗೆ ಶುಭ ಹಾರೈಸುತ್ತೇನೆ. ಬಾಂಗ್ಲಾದೇಶ ಭಾರತದ ಅತಿದೊಡ್ಡ ಅಭಿವೃದ್ಧಿ ಪಾಲುದಾರ ಮತ್ತು ನಾವು ಬಾಂಗ್ಲಾದೇಶದೊಂದಿಗಿನ ನಮ್ಮ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ” ಎಂದು ಹೇಳಿದರು.

View this post on Instagram

A post shared by ABP News (@abpnewstv)

ಟಾಸ್ ಗೆದ್ದ ಬಾಂಗ್ಲಾದೇಶ

ಈ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಇನ್ನು ಈ ಪಂದ್ಯಕ್ಕೆ ಭಾರತದ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್-11 ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಬಾಂಗ್ಲಾದೇಶದ ಈ ಪಂದ್ಯದಿಂದ ತಸ್ಕಿನ್ ಅಹ್ಮದ್ ಹೊರಗುಳಿದಿದ್ದಾರೆ.

ಉಭಯ ತಂಡಗಳು

ಬಾಂಗ್ಲಾದೇಶ: ತಂಝಿದ್ ಹಸನ್, ಲಿಟನ್ ದಾಸ್ (ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹೀದ್ ಹೃದೋಯ್, ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಜಾಕಿರ್ ಅಲಿ, ರಶೀದ್ ಹೊಸೈನ್, ಮೆಹದಿ ಹಸನ್, ತಂಝೀಮ್ ಹಸನ್ ಶಕೀಬ್, ಮುಸ್ತಫಿಜುರ್ ರಹಮಾನ್.

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Sat, 22 June 24