Asian Games 2026: ಟೀಮ್ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

Asian Games: ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026 ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಕಣಕ್ಕಿಳಿಯಲಿದೆ. ಕಳೆದ ಬಾರಿ ಚಿನ್ನದ ಪದಕ ಗೆದ್ದಿದ್ದ ಟೀಮ್ ಇಂಡಿಯಾ ಈ ಬಾರಿ ಕೂಡ ಗೋಲ್ಡನ್ ಮೆಡಲ್​ಗೆ ಕೊರೊಳೊಡ್ಡುವ ವಿಶ್ವಾಸದಲ್ಲಿದೆ. 

Asian Games 2026: ಟೀಮ್ ಇಂಡಿಯಾ ವೇಳಾಪಟ್ಟಿ ಇಲ್ಲಿದೆ
Shreyas Iyer - Harmanpreet singh

Updated on: Aug 29, 2026 | 10:07 AM

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಕ್ರಿಕೆಟ್ ಟೂರ್ನಿ ಕೂಡ ಜರುಗಲಿದೆ. ಕಳೆದ ಬಾರಿ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​​ನಲ್ಲಿ ಪುರುಷರ ಮತ್ತು ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದ ಭಾರತ ತಂಡ, ಈ ಬಾರಿಯೂ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಫೇವರಿಟ್ ತಂಡವಾಗಿ ಕಣಕ್ಕಿಳಿಯುತ್ತಿದೆ.

ಐಚಿ ಪ್ರಾಂತ್ಯದ ನಿಸ್ಶಿನ್‌ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ ಮಹಿಳಾ ತಂಡದ ವೇಳಾಪಟ್ಟಿ:

ಮಹಿಳೆಯರ ಟಿ20 ಕ್ರಿಕೆಟ್ ಪಂದ್ಯಾವಳಿಗಳು ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22 ರವರೆಗೆ ಜರುಗಲಿವೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ನೇರವಾಗಿ ಕ್ವಾರ್ಟರ್‌ಫೈನಲ್ ಹಂತದಲ್ಲೇ ತನ್ನ ಅಭಿಯಾನ ಆರಂಭಿಸಲಿದೆ. ವಿಶೇಷವೆಂದರೆ, ಭಾರತ ಮಹಿಳಾ ತಂಡವು ಇತಿಹಾಸದಲ್ಲೇ ಮೊದಲ ಬಾರಿಗೆ ಜಪಾನ್ ವಿರುದ್ಧ ಕ್ರಿಕೆಟ್ ಪಂದ್ಯ ಆಡುತ್ತಿದೆ. ಟೀಮ್ ಇಂಡಿಯಾದ ವೇಳಾಪಟ್ಟಿ ಈ ಕೆಳಗಿನಂತಿದೆ…

  • ಸೆಪ್ಟೆಂಬರ್ 18, 2026 (ಕ್ವಾರ್ಟರ್‌ಫೈನಲ್): ಭಾರತ vs ಜಪಾನ್ (ಬೆಳಗ್ಗೆ 10:30 IST)
  • ಸೆಪ್ಟೆಂಬರ್ 20, 2026: ಸೆಮಿಫೈನಲ್ ಪಂದ್ಯಗಳು (ಅರ್ಹತೆ ಪಡೆದರೆ – ಬೆಳಗ್ಗೆ 5:30 / 10:30 IST)
  • ಸೆಪ್ಟೆಂಬರ್ 22, 2026: ಪದಕದ ಪಂದ್ಯಗಳು (ಚಿನ್ನದ ಪದಕದ ಫೈನಲ್ ಪಂದ್ಯ ಬೆಳಗ್ಗೆ 10:30 IST)

ಇದನ್ನೂ ಓದಿ: WTC ಫೈನಲ್‌ಗೇರಲು ಟೀಮ್ ಇಂಡಿಯಾ ಮುಂದಿದೆ 4 ಹಾದಿಗಳಿವು!

ಭಾರತ ಪುರುಷರ ತಂಡದ ವೇಳಾಪಟ್ಟಿ:

ಪುರುಷರ ಟಿ20 ಕ್ರಿಕೆಟ್ ಪಂದ್ಯಾವಳಿಗಳು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿವೆ. ಶ್ರೇಯಸ್ ಅಯ್ಯರ್ ನಾಯಕತ್ವದ ಬಲಿಷ್ಠ ಭಾರತ ತಂಡವು ಸಹ ನೇರವಾಗಿ ಕ್ವಾರ್ಟರ್‌ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದು, ಗ್ರೂಪ್-A ನಲ್ಲಿ (ಅಫ್ಘಾನಿಸ್ತಾನf, ನೇಪಾಳ, ಜಪಾನ್ ಒಳಗೊಂಡ ಗ್ರೂಪ್) ಎರಡನೇ ಸ್ಥಾನ ಪಡೆಯುವ ತಂಡದ ವಿರುದ್ಧ ಸೆಣಸಲಿದೆ. ಶ್ರೇಯಸ್ ಅಯ್ಯರ್ ಮುಂದಾಳತ್ವದ ಟೀಮ್ ಇಂಡಿಯಾದ ವೇಳಾಪಟ್ಟಿ ಈ ಕೆಳಗಿನಂತಿದೆ…

  • ಸೆಪ್ಟೆಂಬರ್ 28, 2026 (ಕ್ವಾರ್ಟರ್‌ಫೈನಲ್): ಭಾರತ vs ಗ್ರೂಪ್-A ರ ರನ್ನರ್ ಅಪ್ ತಂಡ (ಬೆಳಗ್ಗೆ 10:30 IST)
  • ಅಕ್ಟೋಬರ್ 1, 2026: ಸೆಮಿಫೈನಲ್ ಪಂದ್ಯಗಳು (ಅರ್ಹತೆ ಪಡೆದರೆ – ಬೆಳಗ್ಗೆ 5:30 / 10:30 IST)
  • ಅಕ್ಟೋಬರ್ 3, 2026: ಪದಕದ ಪಂದ್ಯಗಳು (ಚಿನ್ನದ ಪದಕದ ಫೈನಲ್ ಪಂದ್ಯ ಬೆಳಗ್ಗೆ 10:30 IST)

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us