AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC ಫೈನಲ್‌ಗೇರಲು ಟೀಮ್ ಇಂಡಿಯಾ ಮುಂದಿದೆ 4 ಹಾದಿಗಳಿವು!

ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ರೇಸ್‌ನಲ್ಲಿದೆ. ಭಾರತ ತಂಡವು ಯಾವುದೇ ಆತಂಕವಿಲ್ಲದೆ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಬೇಕಿದ್ದರೆ, ಮುಂಬರುವ ಪಂದ್ಯಗಳ ಪೈಕಿ ಕನಿಷ್ಠ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅತ್ಯಂತ ಅನಿವಾರ್ಯವಾಗಿದೆ. ಅದು ಸಹ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿಯೇ ಆಗಬೇಕಿದೆ. ಈ ಹೈ-ವೋಲ್ಟೇಜ್ ಸರಣಿಗಳ ಮೂಲಕವೇ ಟೀಮ್ ಇಂಡಿಯಾದ WTC ಫೈನಲ್ ಭವಿಷ್ಯ ನಿರ್ಧಾರವಾಗಲಿದೆ.

WTC ಫೈನಲ್‌ಗೇರಲು ಟೀಮ್ ಇಂಡಿಯಾ ಮುಂದಿದೆ 4 ಹಾದಿಗಳಿವು!
Team India
ಝಾಹಿರ್ ಯೂಸುಫ್
|

Updated on:Aug 29, 2026 | 8:17 AM

Share

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ಫೈನಲ್ ರೇಸ್ ರೋಮಾಂಚಕ ಘಟ್ಟಕ್ಕೆ ತಲುಪಿದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಕೊಲೊಂಬೊ ಟೆಸ್ಟ್ ಪಂದ್ಯ ಡ್ರಾ ಆದ ಬೆನ್ನಲ್ಲೇ, ಟೀಮ್ ಇಂಡಿಯಾದ ಫೈನಲ್ ಹಾದಿ ಕೊಂಚ ಕಠಿಣಗೊಂಡಿದೆ. ಪ್ರಸ್ತುತ ಭಾರತ ತಂಡದ ಪಾಯಿಂಟ್ಸ್ ಶೇಕಡಾವಾರು (PCT) ಶೇ. 51.52 ರಷ್ಟಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಆದಾಗ್ಯೂ, ಟೀಮ್ ಇಂಡಿಯಾ ಫೈನಲ್ ರೇಸ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿಲ್ಲ.

ಭಾರತ ತಂಡವು ಫೈನಲ್​ಗೇರಬೇಕಿದ್ದರೆ ಇನ್ನುಳಿದಿರುವ ಒಟ್ಟು 7 ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಬೇಕಿದೆ. ಇದರಲ್ಲಿ ನ್ಯೂಝಿಲೆಂಡ್ ವಿರುದ್ಧದ 2 ವಿದೇಶಿ ಟೆಸ್ಟ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ 5 ಪಂದ್ಯಗಳ ಹೈ-ವೋಲ್ಟೇಜ್ ಬಾರ್ಡರ್-ಗಾವಾಸ್ಕರ್ ಟ್ರೋಫಿ (BGT) ಸರಣಿ ಒಳಗೊಂಡಿದೆ.

ಈ ಏಳು ಪಂದ್ಯಗಳಲ್ಲಿ ಮೊದಲಿಗೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಎರಡೂ ಪಂದ್ಯಗಳನ್ನು ಗೆಲ್ಲುವುದು ಅತ್ಯಂತ ಅನಿವಾರ್ಯವಾಗಿದೆ. ಒಂದು ವೇಳೆ ಭಾರತ ತಂಡವು 1-0 ಅಂತರದಿಂದ ಸರಣಿ ಜಯಿಸಿದರೆ, ಮುಂದೆ ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ 5 ಪಂದ್ಯಗಳನ್ನು ಗೆಲ್ಲಬೇಕಾದ ಕಠಿಣ ಸವಾಲು ಎದುರಾಗಲಿದೆ.

ಈ ಗೆಲುವುಗಳ ಲೆಕ್ಕಾಚಾರದೊಂದಿಗೆ ಟೀಮ್ ಇಂಡಿಯಾ ಮುಂದೆ ಫೈನಲ್‌ಗೇರಲು ಪ್ರಮುಖವಾಗಿ 4 ಹಾದಿಗಳಿವೆ. ಆ ಹಾದಿಗಳೆಂದರೆ…

  1. ನೇರ ಅರ್ಹತೆ: ಭಾರತ ತಂಡವು ಯಾವುದೇ ಇತರೆ ತಂಡದ ಫಲಿತಾಂಶದ ಮೇಲೆ ಅವಲಂಬಿತವಾಗದೆ ನೇರವಾಗಿ ಫೈನಲ್ ತಲುಪಬೇಕಾದರೆ, ನ್ಯೂಝಿಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಬೇಕಾಗುತ್ತದೆ. ಇದರೊಂದಿಗೆ ತವರಿನಲ್ಲಿ ನಡೆಯಲಿರುವ ಬಾರ್ಡರ್-ಗಾವಾಸ್ಕರ್ ಟ್ರೋಫಿ ಸರಣಿಯನ್ನು ಕನಿಷ್ಠ 4-1 ಅಥವಾ 3-1 ಅಂತರದಿಂದ ಜಯಿಸಿದರೆ ಸಾಕು. ಈ ಭರ್ಜರಿ ಪ್ರದರ್ಶನದ ಮೂಲಕ ಟೀಮ್ ಇಂಡಿಯಾ ನೇರವಾಗಿ ಫೈನಲ್‌ಗೇರಬಹುದು.
  2. ಶ್ರೀಲಂಕಾದ ನೆರವು: ಒಂದು ವೇಳೆ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 2-0 ಅಂತರದಿಂದ ಸರಣಿ ಜಯಿಸಿ, ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 3-2 ರಿಂದ ಗೆದ್ದರೆ ಭಾರತದ PCT ತಕ್ಕಮಟ್ಟಿಗೆ ಸುಧಾರಿಸಲಿದೆ. ಆದರೆ ಈ ಪರಿಸ್ಥಿತಿಯಲ್ಲಿ ಭಾರತದ ಫೈನಲ್ ಹಾದಿ ಸುಗಮಗೊಳ್ಳಬೇಕಾದರೆ, ಶ್ರೀಲಂಕಾ ತಂಡವು ತನ್ನ ಮುಂಬರುವ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ ಒಂದು ಟೆಸ್ಟ್ ಪಂದ್ಯವನ್ನಾದರೂ ಗೆಲ್ಲಬೇಕಾಗುತ್ತದೆ.
  3. ಕ್ಲೀನ್‌ಸ್ವೀಪ್‌ನತ್ತ ಚಿತ್ತ: ಭಾರತ ತಂಡವು ನ್ಯೂಝಿಲೆಂಡ್ ತಂಡವನ್ನು 2-0 ಅಂತರದಿಂದ ಮಣಿಸಿ, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಾಸ್ಕರ್ ಟ್ರೋಫಿ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಂಡರೆ ಭಾರತ ಸಂಪೂರ್ಣವಾಗಿ ಶ್ರೀಲಂಕಾದ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಅಂದರೆ, ಶ್ರೀಲಂಕಾ ತಂಡವು ತನ್ನ ಮುಂಬರುವ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದರೆ ಮಾತ್ರ ಭಾರತಕ್ಕೆ ಫೈನಲ್ ಟಿಕೆಟ್ ಸಿಗಲಿದೆ.
  4. ಎರಡು ತಂಡಗಳ ಕೈಯಲ್ಲಿ ಭವಿಷ್ಯ: ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದು, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 2-3 ಅಂತರದಿಂದ ಸರಣಿ ಸೋತರೂ ಸಹ ಫೈನಲ್‌ಗೇರಲು ಒಂದು ಸಣ್ಣ ಅದೃಷ್ಟದ ಅವಕಾಶವಿರುತ್ತದೆ. ಆದರೆ ಈ ಪವಾಡ ನಡೆಯಬೇಕಾದರೆ, ಪಾಕಿಸ್ತಾನ್ ತಂಡವು ಸೌತ್ ಆಫ್ರಿಕಾವನ್ನು 2-0 ಅಂತರದಿಂದ ಸೋಲಿಸಬೇಕು.ಹಾಗೆಯೇ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧದ ಕನಿಷ್ಠ ಒಂದು ಟೆಸ್ಟ್ ಪಂದ್ಯದಲ್ಲಾದರೂ ಕಡ್ಡಾಯವಾಗಿ ಜಯಗಳಿಸಬೇಕಾಗುತ್ತದೆ. ಇನ್ನು ನ್ಯೂಝಿಲೆಂಡ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸೋಲಬೇಕು. ಹೀಗಾದಲ್ಲಿ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬಹುದು.

ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ?

ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾ ಮುಂದಿನ 7 ಅಥವಾ 6 ಪಂದ್ಯಗಳಲ್ಲಿ ಗೆದ್ದರೆ ನೇರವಾಗಿ ಫೈನಲ್‌ಗೇರಲಿದೆ. ಒಂದು ವೇಳೆ ಈ ಗೆಲುವುಗಳು ಸಾಧ್ಯವಾಗದೇ ಇದ್ದರೆ ಮುಂದಿನ 3 ಹಾದಿಗಳ ಮೂಲಕ ಫೈನಲ್‌ಗೆ ಅರ್ಹತೆ ಪಡೆಯಬಹುದು. ಅದರಂತೆ 2027 ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Published On - 8:17 am, Sat, 29 August 26

Follow Us
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ಕರ್ನಾಟಕ ಪೊಲೀಸರ ಭದ್ರತಾ ಸಾಮರ್ಥ್ಯ ಹೆಚ್ಚಿಸಲು ಬಿಗ್ ಪ್ಲಾನ್
ಕರ್ನಾಟಕ ಪೊಲೀಸರ ಭದ್ರತಾ ಸಾಮರ್ಥ್ಯ ಹೆಚ್ಚಿಸಲು ಬಿಗ್ ಪ್ಲಾನ್
ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ನಾಗೇಂದ್ರ: ಮನಸಿಗೆ ನೋವಾಗಿದೆ; ಡಿಕೆಶಿ
ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ನಾಗೇಂದ್ರ: ಮನಸಿಗೆ ನೋವಾಗಿದೆ; ಡಿಕೆಶಿ
ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋ ವೈರಲ್
ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋ ವೈರಲ್
ನೇಪಾಳದಿಂದ ರಕ್ಷಿಸಲ್ಪಟ್ಟ 21 ಯಾತ್ರಿಕರನ್ನು ಸ್ವಾಗತಿಸಿದ ಸಚಿವ ಜೈಶಂಕರ್
ನೇಪಾಳದಿಂದ ರಕ್ಷಿಸಲ್ಪಟ್ಟ 21 ಯಾತ್ರಿಕರನ್ನು ಸ್ವಾಗತಿಸಿದ ಸಚಿವ ಜೈಶಂಕರ್
ಮಂಡ್ಯದಲ್ಲಿ ಭಿಕ್ಷುಕರ ಬಳಿ ಕಂತೆ ಕಂತೆ ಹಣ ಪತ್ತೆ
ಮಂಡ್ಯದಲ್ಲಿ ಭಿಕ್ಷುಕರ ಬಳಿ ಕಂತೆ ಕಂತೆ ಹಣ ಪತ್ತೆ
ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ
ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ
ಬಿಗ್​​ಬಾಸ್ ಅಗ್ನಿಪರೀಕ್ಷೆ: ಗೋಲ್ಡಲ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ
ಬಿಗ್​​ಬಾಸ್ ಅಗ್ನಿಪರೀಕ್ಷೆ: ಗೋಲ್ಡಲ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ
Live: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ
Live: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ