AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ vs ಬಾಂಗ್ಲಾದೇಶ್ ಸರಣಿಗೆ ಡೇಟ್ ಫಿಕ್ಸ್​?

India vs Bangladesh Series: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿ ಸೆಪ್ಟೆಂಬರ್​ನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಸರಣಿಯಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಾಗುತ್ತದೆ. ಬಿಸಿಸಿಐ ಈ ಪ್ರವಾಸಕ್ಕೆ ಭಾರತ ಸರ್ಕಾರದ ಅಂತಿಮ ಅನುಮತಿಯನ್ನು ಎದುರು ನೋಡುತ್ತಿದ್ದು, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟವಾಗಲಿದೆ.

ಭಾರತ vs ಬಾಂಗ್ಲಾದೇಶ್ ಸರಣಿಗೆ ಡೇಟ್ ಫಿಕ್ಸ್​?
IND vs BAN
ಝಾಹಿರ್ ಯೂಸುಫ್
|

Updated on: Apr 04, 2026 | 1:26 PM

Share

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಬಹುನಿರೀಕ್ಷಿತ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯು  ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ಮೊದಲು 2025ರ ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಈ ಸರಣಿಯನ್ನು ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯ ಕಾರಣದಿಂದಾಗಿ ರದ್ದು ಮಾಡಲಾಗಿತ್ತು. ಇದೀಗ ಸರಣಿಯನ್ನು ಮರು ಆಯೋಜಿಸಲು ಉಭಯ ದೇಶಗಳ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸರಣಿ ರದ್ದು ಮಾಡಿದ್ದೇಕೆ?

ಸುರಕ್ಷತಾ ಕಾಳಜಿ ಮತ್ತು ರಾಜಕೀಯ ಅಸ್ಥಿರತೆ: 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಆಂತರಿಕ ನಾಗರಿಕ ಕಲಹ ಮತ್ತು ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರದ ಪರಿಸ್ಥಿತಿಯಿಂದಾಗಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ರಾಜತಾಂತ್ರಿಕ ಉದ್ವಿಗ್ನತೆ: ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವುದು ಮತ್ತು ಭಾರತ ಸರ್ಕಾರವು ಈ ಪ್ರವಾಸಕ್ಕೆ ಇನ್ನೂ ಹಸಿರು ನಿಶಾನೆ ನೀಡದಿರುವುದು ಸರಣಿ ವಿಳಂಬಕ್ಕೆ ಕಾರಣವಾಗಿದೆ.

ವೇಳಾಪಟ್ಟಿಯ ಒತ್ತಡ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರಣಿಗಳ ಒತ್ತಡ ಹೆಚ್ಚಿರುವುದರಿಂದ, ಎರಡೂ ಮಂಡಳಿಗಳು ಪರಸ್ಪರ ಚರ್ಚಿಸಿ ಸರಣಿಯನ್ನು 2026ಕ್ಕೆ ಮರುನಿಗದಿಗೊಳಿಸಲು ಒಪ್ಪಿಕೊಂಡವು.

ಸ್ಥಿರ ಸರ್ಕಾರದ ನಿರೀಕ್ಷೆ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು ಸ್ಥಿರ ಸರ್ಕಾರ ಬಂದ ನಂತರವಷ್ಟೇ ಸರಣಿ ನಡೆಸುವುದು ಸೂಕ್ತ ಎಂದು ಬಿಸಿಸಿಐ ಭಾವಿಸಿದ್ದೆವು. ಇದೀಗ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾಗಿದೆ.

ಸರಣಿಯ ಮುಖ್ಯಾಂಶಗಳು:

ಈ ಪ್ರವಾಸದಲ್ಲಿ ಭಾರತ ತಂಡವು 3 ಏಕದಿನ (ODI) ಮತ್ತು 3 ಟಿ20 (T20I) ಪಂದ್ಯಗಳನ್ನು ಆಡಲಿದೆ. ವಿಶೇಷವೆಂದರೆ, ಬಾಂಗ್ಲಾದೇಶದ ನೆಲದಲ್ಲಿ ಭಾರತ ತಂಡವು ಆಡಲಿರುವ ಮೊದಲ ದ್ವಿಪಕ್ಷೀಯ ಟಿ20 ಸರಣಿ ಇದಾಗಿದೆ.

ಸರಣಿಯ ಸಂಭಾವ್ಯ ವೇಳಾಪಟ್ಟಿ:

  • ಸೆಪ್ಟೆಂಬರ್ 1: 1ನೇ ಏಕದಿನ ಪಂದ್ಯ (ಮೀರ್‌ಪುರ)
  • ಸೆಪ್ಟೆಂಬರ್ 3: 2ನೇ ಏಕದಿನ ಪಂದ್ಯ (ಮೀರ್‌ಪುರ)
  • ಸೆಪ್ಟೆಂಬರ್ 6: 3ನೇ ಏಕದಿನ ಪಂದ್ಯ (ಚಟ್ಟೋಗ್ರಾಮ್)
  • ಸೆಪ್ಟೆಂಬರ್ 9: 1ನೇ ಟಿ20 ಪಂದ್ಯ (ಚಟ್ಟೋಗ್ರಾಮ್)
  • ಸೆಪ್ಟೆಂಬರ್ 12: 2ನೇ ಟಿ20 ಪಂದ್ಯ (ಮೀರ್‌ಪುರ)
  • ಸೆಪ್ಟೆಂಬರ್ 13: 3ನೇ ಟಿ20 ಪಂದ್ಯ (ಮೀರ್‌ಪುರ)

ಇದನ್ನೂ ಓದಿ: ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ

ಪ್ರಮುಖ ಮಾಹಿತಿ:

ಭಾರತ ತಂಡವು ಆಗಸ್ಟ್ 28, 2026 ರಂದು ಬಾಂಗ್ಲಾದೇಶಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಸರಣಿಗಾಗಿ ಬಾಂಗ್ಲಾದೇಶವು ತನ್ನ ಐರ್ಲೆಂಡ್ ಪ್ರವಾಸವನ್ನೇ ಮುಂದೂಡಿ ಭಾರತಕ್ಕೆ ಆತಿಥ್ಯ ವಹಿಸಲು ಆದ್ಯತೆ ನೀಡಿದೆ. ಸದ್ಯದ ವರದಿಗಳ ಪ್ರಕಾರ, ಬಿಸಿಸಿಐ ಈ ಪ್ರವಾಸಕ್ಕೆ ಭಾರತ ಸರ್ಕಾರದ ಅಂತಿಮ ಅನುಮತಿಯನ್ನು ಎದುರು ನೋಡುತ್ತಿದೆ.

Follow Us
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ
Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ