AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂದ್ಯಕ್ಕೆ ಕರೆದಿಲ್ಲವೆಂದು ಕ್ರಿಕೆಟ್ ಪಿಚ್ ಅನ್ನೇ ಉಳುಮೆ ಮಾಡಿದ ಭೂಪ!

Viral Video: ಮಹಾರಾಷ್ಟ್ರದ ಜಳಗಾಂವ್ ಜಿಲ್ಲೆಯ ಧರಣಗಾಂವ್‌ನಲ್ಲಿ ಕ್ರಿಕೆಟ್ ಕ್ರೀಡಾ ಸ್ಫೂರ್ತಿಗೆ ಮಸಿ ಬಳಿಯುವ ಅಹಿತಕರ ಘಟನೆ ನಡೆದಿದೆ. ಟೂರ್ನಮೆಂಟ್‌ಗೆ ಆಹ್ವಾನ ನೀಡದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಪಂದ್ಯದ ನಡುವೆಯೇ ಟ್ರ್ಯಾಕ್ಟರ್‌ನೊಂದಿಗೆ ನುಗ್ಗಿ, ಪಿಚ್ ಅನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾನೆ. ಅಲ್ಲದೆ ಫೈನಲ್ ಪಂದ್ಯ ರದ್ದಾಗುವಂತೆ ಮಾಡಿದ್ದಾನೆ.

ಪಂದ್ಯಕ್ಕೆ ಕರೆದಿಲ್ಲವೆಂದು ಕ್ರಿಕೆಟ್ ಪಿಚ್ ಅನ್ನೇ ಉಳುಮೆ ಮಾಡಿದ ಭೂಪ!
Tractor On Cricket Pitch
ಝಾಹಿರ್ ಯೂಸುಫ್
|

Updated on:Apr 19, 2026 | 2:38 PM

Share

ಕ್ರಿಕೆಟ್ ಅಂದ್ರೆ ಕ್ರೇಝ್, ಆದರೆ ಇಲ್ಲಿ ನಡೆದಿದ್ದು ಮಾತ್ರ ಕ್ರೇಝ್​ನ ಪರಮಾವಧಿ! ಪಂದ್ಯಕ್ಕೆ ಕರೆದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಯುವಕನೊಬ್ಬ, ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಲಕ್ಷಣ ಕೃತ್ಯ ಎಸಗಿದ್ದಾನೆ. ಇಡೀ ಮೈದಾನ ಫೈನಲ್ ಪಂದ್ಯದ ಸಂಭ್ರಮದಲ್ಲಿದ್ದಾಗ, ದಿಢೀರನೆ ಟ್ರ್ಯಾಕ್ಟರ್‌ನೊಂದಿಗೆ ಎಂಟ್ರಿ ಕೊಟ್ಟ ಈ ಭೂಪ, ಇಡೀ ಪಿಚ್ ಅನ್ನೇ ಉಳುಮೆ ಮಾಡಿ ಆಯೋಜಕರಿಗೆ ಬಿಗ್ ಶಾಕ್ ನೀಡಿದ್ದಾನೆ. ಕ್ರೀಡಾ ಸ್ಫೂರ್ತಿಯೇ ಮರೆತ ಈ ಯುವಕನ ಹಠಕ್ಕೆ ಈಗ ಇಡೀ ಪಂದ್ಯಾವಳಿಯೇ ಬಲಿಯಾಗಿದೆ! ಇಂತಹದೊಂದು ವಿಧ್ವಂಸಕ ಕೃತ್ಯ ನಡೆದಿದ್ದು ಮಹಾರಾಷ್ಟದ ಜಳಗಾಂವ್ ಜಿಲ್ಲೆಯ ಧರಣಗಾಂವ್‌ನಲ್ಲಿ..!

ಘಟನೆಯ ವಿವರ:

ಧರಣಗಾಂವ್‌ನಲ್ಲಿ ‘ಜಳಗಾಂವ್ ರೂರಲ್ ಎಂಎಲ್ಎ ಕಪ್’ (Jalgaon Rural MLA Cup) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿ ಸಾಗುತ್ತಿತ್ತು. ಆಟಗಾರರು ಮತ್ತು ಪ್ರೇಕ್ಷಕರು ಪಂದ್ಯದ ಸಂಭ್ರಮದಲ್ಲಿದ್ದಾಗ, ಇದ್ದಕ್ಕಿದ್ದಂತೆ ಯುವಕನೊಬ್ಬ ಟ್ರ್ಯಾಕ್ಟರ್‌ನೊಂದಿಗೆ ಮೈದಾನಕ್ಕೆ ನುಗ್ಗಿದ್ದಾನೆ.

ಅಲ್ಲದೆ ನೇರವಾಗಿ ಪಿಚ್​ನತ್ತ ಸಾಗಿದ ಯುವಕ, ಟ್ರ್ಯಾಕ್ಟರ್‌ಗೆ ಅಳವಡಿಸಿದ್ದ ನೇಗಿಲಿನಿಂದ ಪಿಚ್ ಅನ್ನು ಪೂರ್ತಿಯಾಗಿ ಉಳುಮೆ ಮಾಡಿ ಹಾಳುಗೆಡವಿದ್ದಾನೆ.

ವರದಿಗಳ ಪ್ರಕಾರ, ಈ ಕೃತ್ಯಕ್ಕೆ ಆಹ್ವಾನದ ವಿಚಾರವೇ ಮುಖ್ಯ ಕಾರಣ ಎನ್ನಲಾಗಿದೆ. ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಆತನನ್ನು ಅಥವಾ ಸ್ಥಳೀಯ ಪ್ರಮುಖ ನಾಯಕರೊಬ್ಬರನ್ನು ಆಹ್ವಾನಿಸದಿದ್ದಕ್ಕೆ ಕೋಪಗೊಂಡ ಯುವಕ ಈ ರೀತಿ ಪ್ರತಿಕ್ರಿಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, ಆಟಗಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸದಿದ್ದಕ್ಕೆ ಅಸಮಾಧಾನಗೊಂಡು ಆತ ಈ ವಿಧ್ವಂಸಕ ಕೃತ್ಯ ಎಸಗಿದ್ದಾನೆ.

ಆಮೇಲೇನಾಯ್ತು?

ಪಿಚ್ ಸಂಪೂರ್ಣವಾಗಿ ಹಾನಿಗೀಡಾದ ಕಾರಣ, ಅಂತಿಮ ಪಂದ್ಯವನ್ನು ತಕ್ಷಣವೇ ರದ್ದುಗೊಳಿಸಲಾಯಿತು. ಇದೀಗ ಪಿಚ್ ಮೇಲೆ ಟ್ರ್ಯಾಕ್ಟರ್ ಓಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಈ ಪಂದ್ಯಾವಳಿಗಾಗಿ  ಮೈದಾನವನ್ನು ಸಿದ್ಧಪಡಿಸಲು ದಿನಗಟ್ಟಲೆ ಶ್ರಮವಹಿಸಿದ್ದ ಆಯೋಜಕರು ಮತ್ತು ಆಟಗಾರರು ಈ ಘಟನೆಯಿಂದ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ‘ದುರಾದೃಷ್ಟ’ದ ದಾಖಲೆ ಬರೆದ ಇಶಾನ್ ಕಿಶನ್

ಸದ್ಯಕ್ಕೆ ಈ ಬಗ್ಗೆ ಅಧಿಕೃತವಾಗಿ ಪೊಲೀಸ್ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲವಾದರೂ, ಸ್ಥಳೀಯರಲ್ಲಿ ಈ ಘಟನೆಯು ತೀವ್ರ ಚರ್ಚೆಗೆ ಕಾರಣವಾಗಿದೆ.

Published On - 2:35 pm, Sun, 19 April 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾದ ಯುವ ಜೋಡಿ!
ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾದ ಯುವ ಜೋಡಿ!