AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB Women: ಕೊಹ್ಲಿ, ಸಚಿನ್, ಸೆಹ್ವಾಗ್… ಇನ್ನೂ ಅನೇಕರು: ಆರ್​ಸಿಬಿ ಗೆಲುವಿನ ಬಗ್ಗೆ ಯಾರೆಲ್ಲ ಏನಂದ್ರು ನೋಡಿ

WPL 2024 Final: ಆರ್​ಸಿಬಿ ವಿಜಯವು ಬೆಂಗಳೂರಿನ ಬೀದಿಗಳಲ್ಲಿ ಭಾರಿ ಸಂಭ್ರಮಾಚರಣೆಗೆ ಕಾರಣವಾಯಿತು. ಇದರೊಂದಿಗೆ ಸ್ಟಾರ್ ಕ್ರಿಕೆಟಿಗರು ಕೂಡ ತಮ್ಮ ಶುಭಾಶಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಕೋರಿದ್ದಾರೆ. ವಿರಾಟ್ ಕೊಹ್ಲಿ , ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಇತರರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಇಲ್ಲಿದೆ.

RCB Women: ಕೊಹ್ಲಿ, ಸಚಿನ್, ಸೆಹ್ವಾಗ್... ಇನ್ನೂ ಅನೇಕರು: ಆರ್​ಸಿಬಿ ಗೆಲುವಿನ ಬಗ್ಗೆ ಯಾರೆಲ್ಲ ಏನಂದ್ರು ನೋಡಿ
Virat Kohli RCB and Sachin
Vinay Bhat
|

Updated on: Mar 18, 2024 | 11:34 AM

Share

ಸ್ಮೃತಿ ಮಂಧಾನ (Smriti Mandhana) ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್​ಸಿಬಿ 8 ವಿಕೆಟ್​ಗಳ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು. ಆರ್​ಸಿಬಿಗೆ ಗೆದ್ದ ತಕ್ಷಣ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತಮ್ಮ 16 ವರ್ಷಗಳ ಆಸೆಯನ್ನು ಮಹಿಳಾ ತಂಡ ಈಡೇರಿಸಿದ ಖುಷಿ ಅಭಿಮಾನಿಗಳಲ್ಲಿ ಕಂಡುಬಂತು. ಬೆಂಗಳೂರಿನ ಬೀದಿಗಳಲ್ಲಿ ಕೂಡ ಸೆಲೆಬ್ರೇಷನ್ ಜೋರಾಗಿ ನಡೆಯಿತು.

ಸಾಮಾನ್ಯವಾಗಿ ಯೂರೋಪ್ ದೇಶಗಳಲ್ಲಿ ಫುಟ್ ಬಾಲ್ ಪಂದ್ಯ ಗೆದ್ದ ನಂತರ ಕಾಣುವ ಹಾಗೆ ಕ್ರೀಡಾಂಗಣದಲ್ಲಿ ಆರ್​ಸಿಬಿ ಹೆಸರಿನ ಪ್ರತಿಧ್ವನಿಸಿತು. ಆರ್​ಸಿಬಿ ವಿಜಯವು ಬೆಂಗಳೂರಿನ ಬೀದಿಗಳಲ್ಲಿ ಭಾರಿ ಸಂಭ್ರಮಾಚರಣೆಗೆ ಕಾರಣವಾಯಿತು. ಇದರೊಂದಿಗೆ ಸ್ಟಾರ್ ಕ್ರಿಕೆಟಿಗರು ಕೂಡ ತಮ್ಮ ಶುಭಾಶಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಕೋರಿದ್ದಾರೆ. ವಿರಾಟ್ ಕೊಹ್ಲಿ , ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಇತರರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಇಲ್ಲಿದೆ.

ತನ್ನ ಬಾಯ್​ಫ್ರೆಂಡ್​ಗಿಂತಲೂ ಶ್ರೀಮಂತೆ ಸ್ಮೃತಿ ಮಂಧಾನ: ವರ್ಷಕ್ಕೆ ಕೋಟಿ ಕೋಟಿ ಹಣ

ಆರ್​ಸಿಬಿ ಗೆಲುವಿನ ಬಗ್ಗೆ ಟ್ವೀಟ್ ಮಾಡಿದ ಕ್ರಿಕೆಟಿಗರು:

ಸ್ಮೃತಿ ಮಂಧಾನ ನೇತೃತ್ವದ ಆರ್​ಸಿಬಿ ತಂಡ 114 ರನ್‌ಗಳ ಗುರಿಯನ್ನು 19.3 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಬೆನ್ನಟ್ಟಿತು. ಬೆಂಗಳೂರು ನಾಯಕಿ ಮಂಧಾನ 31 ರನ್ ಗಳಿಸಿದರು, ಸೋಫಿ ಡಿವೈನ್ 27 ಎಸೆತಗಳಲ್ಲಿ 32 ರನ್​ಗಳ ಕೊಡುಗೆ ನೀಡಿದರು. ಎಲ್ಲಿಸ್ ಪೆರ್ರಿ 35 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ, ರಿಚಾ ಘೋಷ್ 14 ಎಸೆತಗಳಲ್ಲಿ 17 ರನ್ ಗಳಿಸಿದರು.

ಆರ್​ಸಿಬಿ ಗೆದ್ದ ತಕ್ಷಣ ಮಂಧಾನಗೆ ಬಂತು ಕೊಹ್ಲಿಯ ವಿಡಿಯೋ ಕಾಲ್: ಏನು ಮಾತಾಡಿದ್ರು?

ಆರ್‌ಸಿಬಿ ಪರ ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದರು ಮತ್ತು ಸೋಫಿ ಮೊಲಿನಿಕ್ಸ್ ನಾಲ್ಕು ಓವರ್‌ಗಳಲ್ಲಿ 20 ರನ್ ನೀಡಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಆಶಾ ಸೋಭಾನಾ ಬೌಲಿಂಗ್​ನಲ್ಲಿ ಇಬ್ಬರು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳು ಔಟಾದರು. ಮಂಧಾನ ಈ ವರ್ಷ 10 ಪಂದ್ಯಗಳಲ್ಲಿ 300 ರನ್ ಗಳಿಸಿ ತಂಡದ ಸ್ಮರಣೀಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು