AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ್ ಪಂದ್ಯ ಮಳೆಯಿಂದಾಗಿ ರದ್ದಾದ್ರೆ ಯಾರಿಗೆ ಚಾನ್ಸ್​?

T20 World Cup 2026: ಪಾಕಿಸ್ತಾನ್ ತಂಡವು ಈ ಬಾರಿಯ ವಿಶ್ವಕಪ್​​ನಲ್ಲಿ ಈವರೆಗೆ 2 ಜಯ ಸಾಧಿಸಿದೆ. ಮೊದಲ ಮ್ಯಾಚ್​​​ನಲ್ಲಿ ನೆದರ್​ಲೆಂಡ್ಸ್ ವಿರುದ್ಧ ಗೆದ್ದಿದ್ದ ಪಾಕ್ ಪಡೆ ದ್ವಿತೀಯ ಪಂದ್ಯದಲ್ಲಿ ಯುಎಸ್​​ಎ ತಂಡವನ್ನು ಬಗ್ಗು ಬಡಿದಿದ್ದರು. ಇನ್ನು ಮೂರನೇ ಮ್ಯಾಚ್​​ನಲ್ಲಿ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಇದೀಗ ನಾಲ್ಕನೇ ಪಂದ್ಯಕ್ಕಾಗಿ ಸಜ್ಜಾಗಿದೆ.

ಪಾಕಿಸ್ತಾನ್ ಪಂದ್ಯ ಮಳೆಯಿಂದಾಗಿ ರದ್ದಾದ್ರೆ ಯಾರಿಗೆ ಚಾನ್ಸ್​?
Pakistan
ಝಾಹಿರ್ ಯೂಸುಫ್
|

Updated on: Feb 18, 2026 | 9:54 AM

Share

T20 World Cup 2026: ಟಿ20 ವಿಶ್ವಕಪ್​ನ 32ನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಪಲ್ಲೆಕೆಲೆ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಝಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಣ ಈ ಪಂದ್ಯವು ಸಂಪೂರ್ಣ ಮಳೆಗೆ ಆಹುತಿಯಾಗಿದ್ದು, ಹೀಗಾಗಿ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಒಂದು ಅಂಕದೊಂದಿಗೆ ಒಟ್ಟು 5 ಪಾಯಿಂಟ್ಸ್ ಗಳಿಸಿ ಝಿಂಬಾಬ್ವೆ ತಂಡ ಸೂಪರ್-8 ಹಂತಕ್ಕೇರಿದೆ. ಇತ್ತ ಪಾಕಿಸ್ತಾನ್ ಕೂಡ ಇಂದು ಕೊಲಂಬೊದಲ್ಲಿ ನಿರ್ಣಾಯಕ ಪಂದ್ಯವಾಡಬೇಕಿದೆ. ಅಂದರೆ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕ್ ಪಡೆ ಮುಂದಿನ ಹಂತಕ್ಕೇರಲಿದೆ.

ಈ ಪಂದ್ಯವು ಕೊಲಂಬೊದ ಎಸ್​ಎಸ್​ಎ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಈ ಮ್ಯಾಚ್​​ಗೂ ಮಳೆ ಭೀತಿ ಎದುರಾಗಿದೆ. ಒಂದು ವೇಳೆ ಈ ಪಂದ್ಯವು ಮಳೆಯಿಂದಾಗಿ ರದ್ದಾದರೆ ಯಾರಿಗೆ ಚಾನ್ಸ್? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಪಾಕಿಸ್ತಾನ್ ಮತ್ತು ನಮೀಬಿಯ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾದರೆ ಪಾಕಿಸ್ತಾನ್ ತಂಡವೇ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಪಾಕ್ ತಂಡವು ಈಗಾಗಲೇ 4 ಅಂಕಗಳನ್ನು ಹೊಂದಿದ್ದು, ಇನ್ನೊಂದು ಅಂಕ ಪಡೆದರೆ 5 ಪಾಯಿಂಟ್ಸ್​​ನೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು.
  • ಒಂದು ವೇಳೆ ನಮೀಬಿಯ ವಿರುದ್ಧ ಪಾಕಿಸ್ತಾನ್ ತಂಡ ಸೋತರೆ ಮಾತ್ರ ಯುಎಸ್​​ಎ ತಂಡ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಯುಎಸ್​​ಎ ತಂಡದ ನೆಟ್​ ರನ್​ ರೇಟ್ +0.787 ಇದ್ದು, ಪಾಕಿಸ್ತಾನ್ ತಂಡ -0.403 ನೆಟ್​ ರನ್ ಹೊಂದಿದೆ. ಹೀಗಾಗಿ ನಮೀಬಿಯ ವಿರುದ್ಧ ಪಾಕ್ ತಂಡ ಸೋತರೆ ನೆಟ್ ರನ್ ರೇಟ್ ಆಧಾರದ ಮೇಲೆ ಯುಎಸ್​​​ಎ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ.

ಅಂದರೆ ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡ ನೇರವಾಗಿ ಸೂಪರ್-8 ಹಂತಕ್ಕೇರುವುದು ಖಚಿತ. ಹೀಗಾಗಿ ಯುಎಸ್​ಎ ಪಾಲಿಗೆ ಪಾಕ್ ಮತ್ತು ನಮೀಬಿಯ ನಡುವಣ ಪಂದ್ಯ ನಡೆಯುವುದು ಅನಿವಾರ್ಯ. ಅಲ್ಲದೆ ಈ ಪಂದ್ಯದಲ್ಲಿ ನಮೀಬಿಯ ಗೆದ್ದರೆ ಮಾತ್ರ ಯುಎಸ್​​ಎ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ‘ಸೂಪರ್-8’ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಒಂದು ವೇಳೆ ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಗೆದ್ದರೆ ಅಥವಾ ಈ ಪಂದ್ಯವು ಕಾರಣಾಂತರದಿಂದ ರದ್ದಾದರೆ, ಪಾಕ್ ಪಡೆಯು ಸೂಪರ್-8 ಹಂತಕ್ಕೇರುವುದು ಖಚಿತ. ಅದರಂತೆ ಪಾಕಿಸ್ತಾನ್ ತಂಡ ಕೊನೆಯ ಲೀಗ್​ ಮ್ಯಾಚ್​ನಲ್ಲಿ ಗೆದ್ದು ಮುಂದಿನ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.

Follow Us
ಅಸ್ಸಾಂ ಪ್ರವಾಹದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಕಿರಣ್ ರಿಜಿಜು
ಅಸ್ಸಾಂ ಪ್ರವಾಹದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಕಿರಣ್ ರಿಜಿಜು
ಭಾರತಕ್ಕೆ ಜಪಾನ್ ದೇಶದ ಪ್ರಧಾನಿಯ ಮೊದಲ ಭೇಟಿ
ಭಾರತಕ್ಕೆ ಜಪಾನ್ ದೇಶದ ಪ್ರಧಾನಿಯ ಮೊದಲ ಭೇಟಿ
ಭಾರೀ ಮಳೆ ಮುನ್ಸೂಚನೆ: ಜು.2ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಭಾರೀ ಮಳೆ ಮುನ್ಸೂಚನೆ: ಜು.2ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ
ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ
ಪಿಚ್ಚರ್ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್
ಪಿಚ್ಚರ್ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು