ದಾಖಲೆಯ ಅರ್ಧಶತಕ ಸಿಡಿಸಿ ಸಿಎಸ್ಕೆ ಆಟಗಾರ ತೋರಿಸಿದ ಚೀಟಿಯಲ್ಲೇನಿತ್ತು?
IPL 2026 CSK vs LSG: ಇಂಡಿಯನ್ ಪ್ರೀಮಿಯರ್ ಲೀಗ್ನ 53ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 203 ರನ್ ಕಲೆಹಾಕಿದ್ದರು. ಈ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.2 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉರ್ವಿಲ್ ಪಟೇಲ್ ಅಕ್ಷರಶಃ ಅಬ್ಬರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಅತಿ ವೇಗದ ಫಿಫ್ಟಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ, ಈ ಐತಿಹಾಸಿಕ ಸಾಧನೆಗಿಂತ ಹೆಚ್ಚಾಗಿ ಮೈದಾನದಲ್ಲಿ ಉರ್ವಿಲ್ ಸಂಭ್ರಮಿಸಿದ ರೀತಿ ಮತ್ತು ಅವರು ಪ್ರದರ್ಶಿಸಿದ ಒಂದು ಸಣ್ಣ ಚೀಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟಕ್ಕೂ ಆ ಚೀಟಿಯಲ್ಲೇನಿತ್ತು? ಎಂದು ನೋಡುವುದಾದರೆ…
ಉರ್ವಿಲ್ ಪಟೇಲ್ ಅರ್ಧಶತಕದ ಸಂಭ್ರಮದ ವೇಳೆ ತೋರಿಸಿದ ಚೀಟಿಯಲ್ಲಿ ತಮ್ಮ ತಂದೆ ಮುಖೇಶ್ ಪಟೇಲ್ ಅವರಿಗಾಗಿ ಬರೆದ ಸಾಲುಗಳಿದ್ದವು. ಇಂಗ್ಲಿಷ್ ಮತ್ತು ಗುಜರಾತಿ ಭಾಷೆಯಲ್ಲಿದ್ದ ಆ ಸಂದೇಶ ಹೀಗಿತ್ತು:
- “This is for you, Papa” (ಅಪ್ಪಾ, ಇದು ನಿಮಗಾಗಿ).
- “તમારું સપનું આજે પૂરું થયું,ક્રિકેટર મોટું બનીને બતાવ્યું.” (ಇಂದು ನಾನು ದೊಡ್ಡ ಕ್ರಿಕೆಟಿಗನಾಗಿ ನಿಮ್ಮ ಕನಸನ್ನು ನನಸು ಮಾಡಿ ತೋರಿಸಿದ್ದೇನೆ).
ಅಲ್ಲದೆ, ಅದರಲ್ಲಿ ತಮ್ಮ ಕುಲದೇವತೆಗಳ ಹೆಸರನ್ನು ಉಲ್ಲೇಖಿಸಿ, ಅವರ ಆಶೀರ್ವಾದದಿಂದಲೇ ಈ ಸಾಧನೆ ಸಾಧ್ಯವಾಯಿತು ಎಂದು ಬರೆದುಕೊಂಡಿದ್ದರು.
A record knock 🤯 A memorable celebration with a 𝗵𝗲𝗮𝗿𝘁𝗳𝗲𝗹𝘁 𝗺𝗲𝘀𝘀𝗮𝗴𝗲 🥹🫶
Urvil Patel, thank you for the entertainment today 💛
Updates ▶️ https://t.co/MoXhlWHk4O#TATAIPL | #KhelBindaas | #CSKvLSG | @ChennaiIPL pic.twitter.com/GjR5D2sYid
— IndianPremierLeague (@IPL) May 10, 2026
ದಾಖಲೆಗಳ ಸುರಿಮಳೆ:
ಈ ಪಂದ್ಯದಲ್ಲಿ ಉರ್ವಿಲ್ ಪಟೇಲ್ ಕೇವಲ ಚೀಟಿಯಿಂದ ಮಾತ್ರವಲ್ಲ, ಬ್ಯಾಟಿಂಗ್ ಮೂಲಕವೂ ಇತಿಹಾಸ ಸೃಷ್ಟಿಸಿದರು. ಆ ದಾಖಲೆಗಳಾವುವು ಎಂದು ನೋಡುವುದಾದರೆ…
-
- ಅತಿ ವೇಗದ ಫಿಫ್ಟಿ: 13 ಎಸೆತಗಳಲ್ಲಿ 50 ರನ್ ಪೂರೈಸುವ ಮೂಲಕ ಐಪಿಎಲ್‌ನ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದರು.
- ಸಿಕ್ಸರ್‌ಗಳ ಅಬ್ಬರ: ಐಪಿಎಲ್ ಇನಿಂಗ್ಸ್‌ನ ಮೊದಲ 8 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಉರ್ವಿಲ್ ಪಟೇಲ್ ಹಿನ್ನೆಲೆ:
ಮಧ್ಯಮ ವರ್ಗದ ಕುಟುಂಬದಿಂದ ಬಂದ ಉರ್ವಿಲ್ ಪಟೇಲ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು ಅವರ ತಂದೆ ಸಾಕಷ್ಟು ಕಷ್ಟಪಟ್ಟಿದ್ದರು. ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಮಗ ಅಬ್ಬರಿಸುವುದನ್ನು ನೋಡುವುದು ಅವರ ದೊಡ್ಡ ಕನಸಾಗಿತ್ತು. ಹೀಗಾಗಿಯೇ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ದಾಖಲೆಯ ಅರ್ಧಶತಕವನ್ನು ಉರ್ವಿಲ್ ಪಟೇಲ್ ತಮ್ಮ ತಂದೆಗೆ ಅರ್ಪಿಸಿದ್ದರು.




