AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World cup: ಮಳೆ ಬಂದು ಪಂದ್ಯ ನಿಂತರೆ ಅಥವಾ ಟೈ ಆದರೆ; ಟಿ20 ವಿಶ್ವಕಪ್ ನಿಯಮಗಳು ಹೇಳುವುದೇನು?

T20 World Cup Rules: ಒಂದು ವೇಳೆ ಈ ಪಂದ್ಯದ ದಿನ ಮಳೆ ಬಂದರೆ ಅಥವಾ ಬೇರೆ ಕಾರಣದಿಂದ ಪಂದ್ಯ ನಡೆಯದೇ ಇದ್ದರೆ ಮೀಸಲು ದಿನದಂದು ಪಂದ್ಯ ನಡೆಯಲಿದೆ.

T20 World cup: ಮಳೆ ಬಂದು ಪಂದ್ಯ ನಿಂತರೆ ಅಥವಾ ಟೈ ಆದರೆ; ಟಿ20 ವಿಶ್ವಕಪ್ ನಿಯಮಗಳು ಹೇಳುವುದೇನು?
T20 World Cup Rules
TV9 Web
| Edited By: |

Updated on:Oct 16, 2022 | 1:18 PM

Share

ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup) ಆರಂಭವಾಗಿದ್ದು, ಮೊದಲ ಪಂದ್ಯ ಇಂದು ಅಕ್ಟೋಬರ್ 16 ರಂದು ಶ್ರೀಲಂಕಾ ಮತ್ತು ನಮೀಬಿಯಾ ನಡುವೆ ನಡೆಯಲಿದೆ. ಇದರೊಂದಿಗೆ ಟಿ20 ವಿಶ್ವಕಪ್ ಟ್ರೋಫಿಗಾಗಿ 16 ತಂಡಗಳ ನಡುವೆ ಕ್ರಿಕೆಟ್ ಸಮರ ಆರಂಭವಾಗಿದೆ. ಇನ್ನು ಈ ಬಾರಿ ಯಾರು ಚಾಂಪಿಯನ್ ಆಗಲಿದ್ದಾರೆ ಎನ್ನುವುದರತ್ತ ಎಲ್ಲರ ಕಣ್ಣು ನೆಟ್ಟಿದ್ದು, ಅದಕ್ಕಾಗಿ ಎಲ್ಲರೂ ಫೈನಲ್ ಪಂದ್ಯದವರೆಗೆ ಕಾಯಬೇಕಿದೆ. ಈ ನಡುವೆ ಹವಾಮಾನ ವೈಪರಿತ್ಯದಿಂದಾಗಿ ಅಥವಾ ಪಂದ್ಯ ಟೈ ಆದರೆ ತಂಡಗಳಿಗಾಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಹೀಗಾಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಐಸಿಸಿ ಟಿ20 ವಿಶ್ವಕಪ್​ಗೆ ಸಂಬಂಧಿಸಿದಂತೆ ಹಲವು ನಿಯಮಾವಳಿಗಳನ್ನು ರೂಪಿಸಿದೆ.

ಈ ಪಂದ್ಯಾವಳಿಗಾಗಿ ಐಸಿಸಿ ವಿಭಿನ್ನ ನಿಯಮಗಳನ್ನು ರಚಿಸಿದ್ದು, ಅದರ ಪ್ರಕಾರ ಪಂದ್ಯಗಳನ್ನು ಆಡಲಾಗುತ್ತದೆ. ಮೊದಲು ಅರ್ಹತಾ ಸುತ್ತಿನ ಮೂಲಕ ತಂಡಗಳು ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಆ ನಂತರ ಎರಡೂ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎರಡೆರಡು ತಂಡಗಳು ಸೂಪರ್-12 ಹಂತವನ್ನು ತಲುಪುತ್ತವೆ.

ಇದನ್ನೂ ಓದಿ:T20 World cup: ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೃಷ್ಟಿಯಾಗಿರುವ ಪ್ರಮುಖ 5 ವಿವಾದಗಳಿವು

ಐಸಿಸಿ ನಿಯಮಗಳು

ಪಾಯಿಂಟ್ ವ್ಯವಸ್ಥೆಯ ಪ್ರಕಾರ, ಪಂದ್ಯಾವಳಿಯಲ್ಲಿ ಒಂದು ಪಂದ್ಯದಲ್ಲಿ ಗೆದ್ದ ತಂಡಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಹಾಗೆಯೇ ಸೋತ ತಂಡಕ್ಕೆ ಯಾವುದೇ ಅಂಕ ಸಿಗುವುದಿಲ್ಲ. ಪಂದ್ಯವು ಟೈ ಆದರೆ ಅಥವಾ ಮಳೆಯಿಂದ ರದ್ದಾದರೆ ಆಗ ಎರಡೂ ತಂಡಗಳಿಗು ತಲಾ 1 ಅಂಕಗಳನ್ನು ನೀಡಲಾಗುತ್ತದೆ. ಅರ್ಹತಾ ಮತ್ತು ಸೂಪರ್-12 ಸುತ್ತುಗಳಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿಲ್ಲ. ಅಂದರೆ ಪಂದ್ಯವನ್ನು ರದ್ದುಗೊಳಿಸಿದರೆ, ಅದನ್ನು ರದ್ದತಿ ಎಂದು ಪರಿಗಣಿಸಲಾಗುತ್ತದೆ.

ಯಾವ ಪಂದ್ಯಕ್ಕೆ ಮೀಸಲು ದಿನ?

ಐಸಿಸಿ ಪ್ಲೇಆಫ್ ಪಂದ್ಯಗಳಿಗೆ ಮಾತ್ರ ಮೀಸಲು ದಿನಗಳನ್ನು ಕಾಯ್ದಿರಿಸಿದೆ. ಅಂದರೆ, ಪ್ರಮುಖ ಪಂದ್ಯಗಳ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳನ್ನು ಇರಿಸಲಾಗಿದೆ. ಒಂದು ವೇಳೆ ಈ ಪಂದ್ಯದ ದಿನ ಮಳೆ ಬಂದರೆ ಅಥವಾ ಬೇರೆ ಕಾರಣದಿಂದ ಪಂದ್ಯ ನಡೆಯದೇ ಇದ್ದರೆ ಮೀಸಲು ದಿನದಂದು ಪಂದ್ಯ ನಡೆಯಲಿದೆ. ಆದರೆ, ನಿಗದಿತ ಓವರ್‌ಗಳನ್ನು ಕಡಿಮೆ ಮಾಡಿದರೂ ಅದೇ ದಿನ ಪಂದ್ಯವನ್ನು ಪೂರ್ಣಗೊಳಿಸುವುದು ಮೊದಲ ಪ್ರಯತ್ನವಾಗಿದೆ.

ಪಂದ್ಯಕ್ಕೆ ನಿಗದಿ ಪಡಿಸಿದ ದಿನ ಐದು ಓವರ್‌ಗಳನ್ನು (ಉಭಯ ತಂಡಗಳಿಗು) ಬೌಲ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ ಮಾತ್ರ ಮೀಸಲು ದಿನವನ್ನು ಬಳಸಲಾಗುತ್ತದೆ. ಹಾಗೆಯೇ ಪಂದ್ಯವು ನಿಗದಿತ ದಿನದಂದು ಆರಂಭವಾಗಿ, ನಡುವೆ ಮಳೆ ಬಂದು ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ನಿಲ್ಲಿಸಿದ ಹಂತದಿಂದ ಮುಂದುವರಿಸಲಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:18 pm, Sun, 16 October 22

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!