AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2023: ಎಲಿಮಿನೇಟರ್‌ ಹಂತಕ್ಕೇರಲು RCB ಗೆ ಇನ್ನೂ ಇದೆ ಅವಕಾಶ..!

WPL 2023 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ಸೋಫಿ ಡಿವೈನ್ , ಎಲ್ಲಿಸ್ ಪೆರ್ರಿ , ಕನಿಕಾ ಅಹುಜಾ , ಹೀದರ್ ನೈಟ್.

WPL 2023: ಎಲಿಮಿನೇಟರ್‌ ಹಂತಕ್ಕೇರಲು RCB ಗೆ ಇನ್ನೂ ಇದೆ ಅವಕಾಶ..!
RCB
TV9 Web
| Edited By: |

Updated on: Mar 14, 2023 | 5:33 PM

Share

WPL 2023: ಸೋಲು…ಸೋಲು…ಸೋಲು…ಸೋಲು…ಸೋಲು..ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಾಲಿಗೆ ಗೆಲುವು ಮರೀಚಿಕೆಯಾಗಿ ಉಳಿದಿದೆ. ಆಡಿರುವ 5 ಪಂದ್ಯಗಳಲ್ಲಿ ಸೋತಿರುವ ಸ್ಮೃತಿ ಮಂಧಾನ ಪಡೆ ಮೊದಲ ಗೆಲುವಿನ ಹಂಬಲದಲ್ಲಿದೆ. ಆರ್​ಸಿಬಿ ತಂಡಲ್ಲಿ ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಸೋಫಿ ಡಿವೈನ್ ಅವರಂತಹ ಸ್ಟಾರ್ ಆಟಗಾರ್ತಿಯರಿದ್ದರೂ ಇದುವರೆಗೆ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ.

ಮೊದಲಾರ್ಧದಲ್ಲಿ ಆಡಿದ 4 ಪಂದ್ಯಗಳನ್ನು ಸೋತಿದ್ದ ಆರ್​ಸಿಬಿ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೂ ಪರಾಜಯಗೊಂಡಿದೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ವನಿತೆಯರು ರೋಚಕ ಕಾದಾಟ ನಡೆಸಿದರೂ, ಗೆಲುವು ದಕ್ಕಲಿಲ್ಲ. ಇನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಾಲಿಗೆ ಉಳಿದಿರುವುದು ಕೇವಲ 3 ಪಂದ್ಯಗಳು ಮಾತ್ರ.

ಇದಾಗ್ಯೂ ಆರ್​ಸಿಬಿ ವನಿತೆಯರು ಎಲಿಮಿನೇಟರ್ ಹಂತಕ್ಕೇರುವ ಆಸೆಯನ್ನು ಕೈ ಬಿಟ್ಟಿಲ್ಲ. ಏಕೆಂದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದರೆ ಎಲಿಮಿನೇಟರ್​ ಹಂತಕ್ಕೇರಬಹುದು. ಇದು ಉಳಿದ ತಂಡಗಳ ಫಲಿತಾಂಶಗಳ ಮೇಲೆ ಅವಲಂಭಿತವಾಗಿರಲಿದೆ.

ಆರ್​ಸಿಬಿ ಎಲಿನೇಟರ್ ಹಂತಕ್ಕೇರುವುದು ಹೇಗೆ?

ಆರ್​ಸಿಬಿ ತಂಡಕ್ಕೆ ಉಳಿದಿರುವ ಮೂರು ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಬೇಕು. ಅಂದರೆ ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​, ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್​ ತಂಡಗಳಿಗೆ ಸೋಲುಣಿಸಬೇಕು. ಅಲ್ಲದೆ ಯುಪಿ ವಾರಿಯರ್ಸ್​ ತಂಡವು ಮುಂದಿನ ಎಲ್ಲಾ ಪಂದ್ಯಗಳಲ್ಲೂ ಸೋಲುವುದನ್ನು ಎದುರು ನೋಡಬೇಕು.

ಅಂದರೆ ಇಲ್ಲಿ ಆರ್​ಸಿಬಿ ಮುಂದಿನ 3 ಪಂದ್ಯಗಳನ್ನು ಗೆಲ್ಲಬೇಕು, ಹಾಗೆಯೇ ಯುಪಿ ವಾರಿಯರ್ಸ್​ ಮುಂದಿನ ಯಾವುದೇ ಪಂದ್ಯಗಳನ್ನು ಗೆಲ್ಲಬಾರದು. ಇದರ ಜೊತೆಗೆ ಗುಜರಾತ್ ಜೈಂಟ್ಸ್ ತಂಡವು ಕನಿಷ್ಠ 2 ಸೋಲು ಕಾಣಬೇಕು. ಹೀಗಾದ್ರೆ ಮಾತ್ರ ಆರ್​ಸಿಬಿಗೆ ನೆಟ್​ ರನ್​ ರೇಟ್​ ಮೂಲಕ ಎಲಿಮಿನೇಟರ್ ಪಂದ್ಯವಾಡಬಹುದು.

ಫೈನಲ್ ಎಂಟ್ರಿ ಹೇಗೆ?

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಪ್ರತಿ ತಂಡವು ಇತರ ತಂಡಗಳೊಂದಿಗೆ ಎರಡು ಬಾರಿ ಮುಖಾಮುಖಿಯಾಗುತ್ತದೆ. ಅಂದರೆ ಲೀಗ್​ ಹಂತದಲ್ಲಿ ಒಂದು ತಂಡವು ಒಟ್ಟು 8 ಪಂದ್ಯಗಳನ್ನಾಡಲಿದೆ. ಇದರಲ್ಲಿ ಅತ್ಯಧಿಕ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್​ನಲ್ಲಿ  ಅಗ್ರಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ ಪ್ರವೇಶಿಸುತ್ತದೆ.

ಇನ್ನು ಪಾಯಿಂಟ್ ಟೇಬಲ್​ನಲ್ಲಿ 2ನೇ ಹಾಗೂ 3ನೇ ಸ್ಥಾನ ಅಲಂಕರಿಸುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ.

ಇದೀಗ ಪಾಯಿಂಟ್ ಟೇಬಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವು 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹಾಗೆಯೇ 8 ಪಾಯಿಂಟ್ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ನಾಲ್ಕು ಮ್ಯಾಚ್​ಗಳಲ್ಲಿ 2 ಗೆಲುವಿಗಳೊಂದಿಗೆ 4 ಅಂಕಗಳನ್ನು ಹೊಂದಿದೆ. ಯುಪಿ ತಂಡವು ಮುಂದಿನ 4 ಪಂದ್ಯಗಳಲ್ಲಿ ಸೋತರೆ ಪಾಯಿಂಟ್ ಟೇಬಲ್​ನಲ್ಲಿ ಕೆಳಗಿಳಿಯಲಿದೆ.

ಇತ್ತ 4ನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ 4 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಮುಂದಿನ 4 ಪಂದ್ಯಗಳಲ್ಲಿ ಕನಿಷ್ಠ 2 ರಲ್ಲಿ ಸೋಲನುಭವಿಸಬೇಕು. ಹಾಗೆಯೇ 5ನೇ ಸ್ಥಾನದಲ್ಲಿರುವ ಆರ್​ಸಿಬಿ ಉಳಿದ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ನೆಟ್​ ರನ್​ ರೇಟ್ ಮೂಲಕ 3ನೇ ಸ್ಥಾನಕ್ಕೇರಬಹುದು. ಈ ಮೂಲಕ ಆರ್​ಸಿಬಿ ಎಲಿಮಿನೇಟರ್​ ಪಂದ್ಯವಾಡುವ ಅವಕಾಶವನ್ನು ಪಡೆಯಬಹುದು.

ಇದನ್ನೂ ಓದಿ: IPL 2023: RCB ತಂಡದ ಯುವ ಆಟಗಾರನಿಗೆ ಗಾಯ: ಐಪಿಎಲ್​ಗೆ ಡೌಟ್..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ಸೋಫಿ ಡಿವೈನ್ , ಎಲ್ಲಿಸ್ ಪೆರ್ರಿ , ಕನಿಕಾ ಅಹುಜಾ , ಹೀದರ್ ನೈಟ್ , ಶ್ರೇಯಾಂಕಾ ಪಾಟೀಲ್ , ಎರಿನ್ ಬರ್ನ್ಸ್ , ಕೋಮಲ್ ಝಂಝಾದ್ , ರೇಣುಕಾ ಠಾಕೂರ್ ಸಿಂಗ್ , ಸಹನಾ ಪವಾರ್ , ಪೂನಮ್ ಖೇಮ್ನಾರ್ , ದಿಶಾ ಕಸತ್, ಮೇಗನ್ ಶುಟ್, ಡೇನ್ ವ್ಯಾನ್ ನೀಕರ್ಕ್ , ಪ್ರೀತಿ ಬೋಸ್ , ಇಂದ್ರಾಣಿ ರಾಯ್ , ಆಶಾ ಶೋಬನಾ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್