AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs DC Highlights, WPL 2026 Final: ಆರ್​ಸಿಬಿಗೆ ಚಾಂಪಿಯನ್ ಕಿರೀಟ

Royal Challengers Bengaluru vs Delhi Capitals Highlights in Kannada: 2026 ರ ಮಹಿಳಾ ಪ್ರೀಮಿಯರ್ ಲೀಗ್‌ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

RCB vs DC Highlights, WPL 2026 Final: ಆರ್​ಸಿಬಿಗೆ ಚಾಂಪಿಯನ್ ಕಿರೀಟ
Rcb Womens
ಪೃಥ್ವಿಶಂಕರ
|

Updated on:Feb 05, 2026 | 11:51 PM

Share

2026 ರ ಮಹಿಳಾ ಪ್ರೀಮಿಯರ್ ಲೀಗ್‌ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವಡೋದರಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಮುಖ್ಯವಾದ ವಿಷಯವೆಂದರೆ ಡೆಲ್ಲಿ ಫೈನಲ್‌ನಲ್ಲಿ 203 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ಆದರೆ ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್‌ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಈ ಇಬ್ಬರು ಆಟಗಾರ್ತಿಯರು ಎರಡನೇ ವಿಕೆಟ್‌ಗೆ ಸ್ಫೋಟಕ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.

LIVE NEWS & UPDATES

The liveblog has ended.
  • 05 Feb 2026 11:18 PM (IST)

    RCB vs DC Live: ಆರ್​ಸಿಬಿಗೆ ಚಾಂಪಿಯನ್ ಪಟ್ಟ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವಡೋದರಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 203 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್‌ ಸ್ಫೋಟಕ ಶತಕದ ಪಾಲುದಾರಿಕೆಯ್ನು ನಡೆಸಿ ಡೆಲ್ಲಿ ತಂಡದ ಚಾಂಪಿಯನ್ ಕನಸನ್ನು ನುಚ್ಚುನೂರು ಮಾಡಿದರು.

  • 05 Feb 2026 10:45 PM (IST)

    RCB vs DC Live: ಮಂಧಾನ ಅರ್ಧಶತಕ

    ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ಇನ್ನಿಂಗ್ಸ್ ಆಡಿ ಅದ್ಭುತ ಅರ್ಧಶತಕ ಗಳಿಸಿದರು. ಮಂಧಾನಾ ಕೇವಲ 23 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಇದು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕವಾಗಿದೆ.

  • 05 Feb 2026 10:30 PM (IST)

    RCB vs DC Live: ವಾಲ್ ಅರ್ಧಶತಕ

    ಫೈನಲ್‌ನಲ್ಲಿ ಜಾರ್ಜಿಯಾ ವಾಲ್ ಗಮನಾರ್ಹ ಇನ್ನಿಂಗ್ಸ್ ಆಡಿದರು. ಅವರು 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು ಮತ್ತು ಮಂಧಾನ ಅವರೊಂದಿಗೆ 50 ಎಸೆತಗಳಲ್ಲಿ 100 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

  • 05 Feb 2026 10:13 PM (IST)

    RCB vs DC Live: 50 ರನ್‌ ಪೂರ್ಣ

    ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಓವರ್‌ಗಳಲ್ಲಿ 1 ವಿಕೆಟ್‌ಗೆ 59 ರನ್ ಗಳಿಸಿದೆ. ಸ್ಮೃತಿ ಮಂಧಾನ 17 ರನ್‌ ಮತ್ತು ಜಾರ್ಜಿಯಾ ವಾಲ್ 30 ರನ್‌ಗಳೊಂದಿಗೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಜೋಡಿಯಿಂದ ಆರ್‌ಸಿಬಿಗೆ ದೊಡ್ಡ ಪಾಲುದಾರಿಕೆಯ ಅಗತ್ಯವಿದೆ.

  • 05 Feb 2026 09:53 PM (IST)

    RCB vs DC Live: ಗ್ರೇಸ್ ಹ್ಯಾರಿಸ್ ಔಟ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಗ್ರೇಸ್ ಹ್ಯಾರಿಸ್ 7 ಎಸೆತಗಳಲ್ಲಿ 9 ರನ್‌ಗಳಿಗೆ ಔಟಾದರು.

  • 05 Feb 2026 09:24 PM (IST)

    RCB vs DC Live: ಆರ್​ಸಿಬಿಗೆ 204 ರನ್ ಗುರಿ

    ದೆಹಲಿ ತಂಡವು ಅದ್ಭುತ ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಜೆಮಿಮಾ ರೊಡ್ರಿಗಸ್ ಗರಿಷ್ಠ 57 ರನ್ ಗಳಿಸಿದರೆ, ಲಾರಾ ವೂಲ್‌ವಾರ್ಡ್ಟ್ 44 ರನ್ ಗಳಿಸಿದರು. ಶೆನೆಲ್ಲೆ ಹೆನ್ರಿ ಕೂಡ 15 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿದರು.

  • 05 Feb 2026 08:54 PM (IST)

    RCB vs DC Live: ಜೆಮಿಮಾ ಅರ್ಧಶತಕ

    ಜೆಮಿಮಾ ರೊಡ್ರಿಗಸ್ ನಾಯಕಿಯ ಇನ್ನಿಂಗ್ಸ್ ಆಡಿ ಕೇವಲ 32 ಎಸೆತಗಳಲ್ಲಿ ಅರ್ಧಶತಕವ ಬಾರಿಸಿದರು. ದೆಹಲಿ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು.

  • 05 Feb 2026 08:43 PM (IST)

    RCB vs DC Live: 90 ರನ್‌

    ಡೆಲ್ಲಿ ಕ್ಯಾಪಿಟಲ್ಸ್ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 94 ರನ್ ಗಳಿಸಿದೆ. ಲಾರಾ ವೂಲ್‌ವಾರ್ಡ್ಟ್ 12 ರನ್ ಮತ್ತು ಜೆಮಿಮಾ ರೊಡ್ರಿಗಸ್ 18 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಆರ್‌ಸಿಬಿ ವಿಕೆಟ್‌ಗಾಗಿ ಹುಡುಕಾಟ ನಡೆಸುತ್ತಿದೆ.

  • 05 Feb 2026 08:14 PM (IST)

    RCB vs DC Live: 4 ಓವರ್‌ಗಳು ಪೂರ್ಣ

    ಮೊದಲ ನಾಲ್ಕು ಓವರ್‌ಗಳಲ್ಲಿ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿತು. ಲಿಜೆಲ್ಲೆ ಲೀ (17) ಮತ್ತು ಶಫಾಲಿ ವರ್ಮಾ (6) ತಂಡದ ಸ್ಕೋರ್ ಅನ್ನು ಮುನ್ನಡೆಸುತ್ತಿದ್ದಾರೆ.

  • 05 Feb 2026 07:58 PM (IST)

    RCB vs DC Live: ಸ್ಥಿರ ಆರಂಭ

    ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಎರಡು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ. ಲಿಜೆಲ್ಲೆ ಲೀ ಮತ್ತು ಶಫಾಲಿ ವರ್ಮಾ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 05 Feb 2026 06:55 PM (IST)

    RCB vs DC Live: ಡೆಲ್ಲಿ ಕ್ಯಾಪಿಟಲ್ಸ್

    ಲಿಜಿಲ್ಲೆ ಲೀ, ಶೆಫಾಲಿ ವರ್ಮಾ, ಲಾರಾ ವೂಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ ರಾಣಾ, ಮಿನ್ನಿ ಮಣಿ, ಶ್ರೀ ಚರಣಿ, ನಂದಿನಿ ಶರ್ಮಾ.

  • 05 Feb 2026 06:55 PM (IST)

    RCB vs DC Live: ಆರ್​ಸಿಬಿ ತಂಡ

    ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ, ಜಾರ್ಜಿಯಾ ವಾಲ್, ರಿಚಾ ಘೋಷ್, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ, ಶ್ರೇಯಾಂಕ ಪಾಟೀಲ್ ಮತ್ತು ಲಾರೆನ್ ಬೆಲ್.

  • 05 Feb 2026 06:54 PM (IST)

    ಟಾಸ್ ಗೆದ್ದ ಆರ್​ಸಿಬಿ

    ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ತಮ್ಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

  • 05 Feb 2026 06:43 PM (IST)

    ಆರ್​ಸಿಬಿ- ಡೆಲ್ಲಿ ನಡುವೆ ಫೈನಲ್ ಫೈಟ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಈ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಆರಂಭವಾಗಲಿದ್ದು, ಟಾಸ್ 7 ಗಂಟೆಗೆ ನಡೆಯಲಿದೆ.

Published On - Feb 05,2026 6:42 PM

Follow Us
ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್ 2 ಗಂಟೆ ನಿಂತಲ್ಲೇ ನಿಂತ ವ್ಯಕ್ತಿ
ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್ 2 ಗಂಟೆ ನಿಂತಲ್ಲೇ ನಿಂತ ವ್ಯಕ್ತಿ
ಮುಡಾ ಕೇಸ್: ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್​ ತುರ್ತು ನೋಟಿಸ್!
ಮುಡಾ ಕೇಸ್: ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್​ ತುರ್ತು ನೋಟಿಸ್!
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು