IND vs SL: ಯಶಸ್ವಿ ಜೈಸ್ವಾಲ್ಗೆ ಡಬಲ್ ಶಾಕ್ ನೀಡಿದ ಐಸಿಸಿ; ಲಂಕಾ ವೇಗಿ ವಿರುದ್ಧವೂ ಕ್ರಮ
India vs Sri Lanka 2nd test: ಐಸಿಸಿ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾದ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ಅಸಿತಾ ಫೆರ್ನಾಂಡೋಗೆ ಐಸಿಸಿ ಕಠಿಣ ಕ್ರಮ ಕೈಗೊಂಡಿದೆ. ಪಿಚ್ ಮಧ್ಯದಲ್ಲೇ ಜಗಳವಾಡಿದ ಇಬ್ಬರು ಆಟಗಾರರಿಗೆ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ತಲಾ ಒಂದು ಡಿಮೆರಿಟ್ ಅಂಕವನ್ನು ಸಹ ನೀಡಲಾಗಿದೆ. ಕ್ರಿಕೆಟ್‌ನಲ್ಲಿ ಶಿಸ್ತು ಕಾಪಾಡಲು ಈ ಕ್ರಮ ಅನಿವಾರ್ಯವಾಗಿದೆ.

ಶ್ರೀಲಂಕಾ ವೇಗಿ ಅಸಿತಾ ಫೆರ್ನಾಂಡೋ (Asitha Fernando) ಜೊತೆಗೆ ಪಿಚ್ ಮಧ್ಯದಲ್ಲೇ ಜಗಳ ಮಾಡಿಕೊಂಡಿದ್ದ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ವಿರುದ್ಧ ಐಸಿಸಿ (ICC) ಕ್ರಮ ಕೈಗೊಂಡಿದೆ. ಐಸಿಸಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಟಡಿದ್ದ ಜೈಸ್ವಾಲ್ಗೆ ಐಸಿಸಿ ದಂಡದ ಜೊತೆಗೆ ಡಿಮೆರಿಟ್ ಅಂಕವನ್ನು ಸಹ ನೀಡಿದೆ. ಜೈಸ್ವಾಲ್ ಜೊತೆಗೆ ಲಂಕಾ ವೇಗಿ ಅಸಿತಾ ಫೆರ್ನಾಂಡೋ ಕೂಡ ಐಸಿಸಿ ದಂಡನೆಗೆ ಗುರಿಯಾಗಿದ್ದಾರೆ. ಜೈಸ್ವಾಲ್ಗೆ ವಿಧಿಸಿದಷ್ಟೇ ಶಿಕ್ಷೆಯನ್ನು ಫೆರ್ನಾಂಡೋಗೆ ವಿಧಿಸಲಾಗಿದೆ. ಅಂದರೆ ಜೈಸ್ವಾಲ್ ಮತ್ತು ಫೆರ್ನಾಂಡೊ ಇಬ್ಬರಿಗೂ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಕಡಿತಗೊಳಿಸಿದ್ದಲ್ಲದೆ, ತಲಾ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ.
ಐಸಿಸಿ ಕ್ರಮಕ್ಕೆ ಕಾರಣವೇನು?
ಕೊಲಂಬೊದಲ್ಲಿ ನಡೆಯುತ್ತಿರುವ ಮೊದಲ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ 45 ರನ್ಗಳ ಇನ್ನಿಂಗ್ಸ್ ಆಡಿ ತಮ್ಮ ವಿಕೆಟ್ ಒಪ್ಪಿಸಿದರು. ಇತ್ತ ಜೈಸ್ವಾಲ್ ವಿಕೆಟ್ ಪಡೆದ ಸಂತಸದಲ್ಲಿ ಎದುರಾಳಿ ತಂಡದ ವೇಗಿ ಅಸಿತಾ ಫೆರ್ನಾಂಡೋ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಲ್ಲದೆ ಜೈಸ್ವಾಲ್ ಪೆವಿಲಿಯನತ್ತ ಹೆಜ್ಜೆ ಹಾಕುತ್ತಿರುವಾಗ ಅವರನ್ನು ಕೆಣಕ್ಕುವ ಕೆಲಸಕ್ಕೆ ಕೈಹಾಕಿದರು. ಇದರಿಂದ ಕೆರಳಿದ ಜೈಸ್ವಾಲ್, ಫೆರ್ನಾಂಡೋ ಬಳಿಗೆ ಬಂದು ವಾಗ್ವಾದದಲ್ಲಿ ತೊಡಗಿದರು. ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್ನಿಂದ ಫೆರ್ನಾಂಡೋ ತಲೆಗೆ ಲಗುವಾಗಿ ಗುದ್ದಿದರು.
The ICC have confirmed the sanctions for Yashasvi Jaiswal and Asitha Fernando following their incident during the second #WTC27 contest in Colombo.https://t.co/jYf9ImTHfA
— ICC (@ICC) August 24, 2026
ಐಸಿಸಿ ಹೇಳಿಕೆಯಲ್ಲಿ ಏನಿದೆ?
ಘಟನೆ ನಡೆದ ಬಳಿಕ ಇವರಿಬ್ಬರ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವುದು ಖಚಿತವಾಗಿತ್ತು. ಆದರೆ ಶಿಕ್ಷೆ ಯಾವ ಪ್ರಮಾಣದಲ್ಲಿ ಇರುತ್ತದೆ ಎಂಬುದು ತಿಳಿದಿರಲಿಲ್ಲ. ಆದರೀಗ ಇಬ್ಬರ ಮೇಲು ಕ್ರಮ ಜರುಗಿಸಿರುವ ಐಸಿಸಿ, ‘ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತಾ ಫೆರ್ನಾಂಡೋ ಇಬ್ಬರಿಗೂ ಪಂದ್ಯ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿದೆ. ಇಬ್ಬರೂ ಆಟಗಾರರಿಗೆ ತಲಾ ಒಂದು ಡಿಮೆರಿಟ್ ಪಾಯಿಂಟ್ ಸಹ ನೀಡಲಾಗಿದೆ. ಇಬ್ಬರೂ ಆಟಗಾರರು ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಉಲ್ಲಂಘಿಸಿದ್ದಾರೆ. ಈ ನಿಯಮ ಆಟಗಾರ, ಸಹಾಯಕ ಸಿಬ್ಬಂದಿ ಸದಸ್ಯರು, ಅಂಪೈರ್, ಮ್ಯಾಚ್ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯೊಂದಿಗೆ ಅನುಚಿತ ವರ್ತನಗೆ ಸಂಬಂಧಿಸಿದ್ದಾಗಿದ್ದು, ಇವರಿಬ್ಬರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ.
IND vs SL: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್ಗೆ ಬಲಿಯಾದ ಜೈಸ್ವಾಲ್
ಹೀಗಾಗಿ ಇಬ್ಬರೂ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಶಿಫಾರಸ್ಸು ಮಾಡಿದ್ದಾರೆ. ಜೈಸ್ವಾಲ್ ಮತ್ತು ಫೆರ್ನಾಂಡೊ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ. ಅಲ್ಲದೆ ಕಳೆದ 24 ತಿಂಗಳುಗಳಲ್ಲಿ ಇಬ್ಬರೂ ಆಟಗಾರರು ಈ ರೀತಿಯ ನಿಯಮವನ್ನು ಉಲ್ಲಂಘಿಸದ ಕಾರಣ ಇಬ್ಬರ ವಿರುದ್ಧ ಕಠಿಣ ಕ್ರಮದ ಬದಲು ಸೌಮ್ಯ ಶಿಕ್ಷೆ ವಿಧಿಸಲಾಗಿದೆ ಎಂದು ಐಸಿಸಿ ಮಾಹಿತಿ ನೀಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 24 August 26




