AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾದ ಜೈಸ್ವಾಲ್

Yashasvi Jaiswal's Unfortunate Run-Out: ಗಾಲೆ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತ ಶ್ರೀಲಂಕಾ ವಿರುದ್ಧ 2 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ. ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್ ಅವರೊಂದಿಗೆ ಸಂವಹನ ಕೊರತೆಯಿಂದ ದುರದೃಷ್ಟವಶಾತ್ ರನೌಟ್ ಆದರು. ಚೊಚ್ಚಲ ಅರ್ಧಶತಕದತ್ತ ಸಾಗುತ್ತಿದ್ದ ಜೈಸ್ವಾಲ್ 32 ರನ್ ಗಳಿಸಿ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ನಷ್ಟ. ಈ ವಿಕೆಟ್ ಲಂಕಾ ತಂಡಕ್ಕೆ ನಿರಾಳತೆ ತಂದಿತು.

IND vs SL: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾದ ಜೈಸ್ವಾಲ್
Yashasvi Jaiswal
ಪೃಥ್ವಿಶಂಕರ
|

Updated on:Aug 15, 2026 | 10:09 PM

Share

ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 288 ರನ್ ಕಲೆಹಾಕಿದೆ. ದಿನವಿಡೀ ಟೀಂ ಇಂಡಿಯಾ ಬ್ಯಾಟರ್​ಗಳು ಶ್ರೀಲಂಕಾ (India vs Sri Lanka ) ಬೌಲರ್​ಗಳನ್ನು ಕಾಡಿದರಾದರೂ ದಿನದಂತ್ಯಕ್ಕೆ 2 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಒಂದು ವಿಕೆಟ್ ಅನ್ನು ಶ್ರೀಲಂಕಾ ಬೌಲರ್​ಗಳು ಪಡೆದರು ಎನ್ನುವುದಕ್ಕಿಂತ ಟೀಂ ಇಂಡಿಯಾ ಬ್ಯಾಟರ್​ಗಳು ಉಚಿತವಾಗಿ ನೀಡಿದರು ಎನ್ನಬಹುದು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ (KL Rahul) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ನಡುವಿನ ಸಂವಹನದ ಕೊರತೆಯಿಂದಾಗಿ ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾಗಬೇಕಾಯಿತು.

5 ಬೌಂಡರಿಗಳ ಸಹಿತ 32 ರನ್

ಶ್ರೀಲಂಕಾ 11 ವಿರುದ್ಧದ ಅಭ್ಯಾಸ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿ ಫಾರ್ಮ್​ಗೆ ಮರಳಿದ್ದ ಜೈಸ್ವಾಲ್ ಅದೇ ಫಾರ್ಮ್​ ಅನ್ನು ಮೊದಲ ಟೆಸ್ಟ್ ಪಂದ್ಯದಲ್ಲೂ ಮುಂದುವರೆಸಿದರು. ಹೀಗಾಗಿ 37 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 32 ರನ್ ಬಾರಿಸಿದ್ದರು. ಆರಂಭದಲ್ಲೇ ಜೈಸ್ವಾಲ್ ಅಪಾಯಕಾರಿಯಾಗಿದ್ದು ಲಂಕಾ ತಂಡವನ್ನು ಚಿಂತೆಗೀಡುಮಾಡಿತ್ತು. ಆದರೆ ಪಂದ್ಯದ 11ನೇ ಓವರ್​ನಲ್ಲಿ ನಡೆದ ಘಟನೆ ಲಂಕಾ ತಂಡವನ್ನು ನಿರಾಳಗೊಳಿಸಿತು.

ಜೈಸ್ವಾಲ್​​ಗೆ ಡಿಕ್ಕಿ ಹೊಡೆದ ಬೌಲರ್

ಭಾರತದ ಮೊದಲ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಪತನವಾಯಿತು. 11 ನೇ ಓವರ್‌ನಲ್ಲಿ, ಕೇಶರ ನುವಾಂತ ಅವರ ಬೌಲಿಂಗ್‌ನಲ್ಲಿ ಸ್ಟ್ರೈಕ್​ನಲ್ಲಿದ್ದ ಕೆಎಲ್ ರಾಹುಲ್, ಮಿಡ್-ಆನ್ ಕಡೆಗೆ ಶಾಟ್ ಆಡಲು ಪ್ರಯತ್ನಿಸಿದರು. ಹೀಗಾಗಿ ಆ ಚೆಂಡನ್ನು ಬೌಲರ್ ಕೇಶರ ನುವಾಂತ ಅವರೇ ಹಿಡಿಯಲು ಮುಂದಾದರು. ಈ ಪ್ರಯತ್ನದಲ್ಲಿ, ನಾನ್-ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಯಶಸ್ವಿಗೆ ನುವಾಂತ ಡಿಕ್ಕಿ ಹೊಡೆದರು.

ನುವಾಂತ ಡಿಕ್ಕಿ ಹೊಡೆದಿದ್ದರಿಂದ ರನ್​ಗಾಗಿ ಓಡಲು ಯತ್ನಿಸುತ್ತಿದ್ದ ಯಶಸ್ವಿಗೆ ಓಡಲು ಸಾಧ್ಯವಾಗಲಿಲ್ಲ. ಇತ್ತ ರಾಹುಲ್ ರನ್​ಗಾಗಿ ಓಡಲಾರಂಭಿಸಿದರು. ಆದರೆ ಜೈಸ್ವಾಲ್ ಸ್ಟ್ರೈಕರ್‌ ತುದಿಗೆ ಓಡುವ ಬದಲು ಮತ್ತೆ ನಾನ್-ಸ್ಟ್ರೈಕರ್‌ ತುದಿಗೆ ಹಿಂತಿರುಗಿದರು. ಏತನ್ಮಧ್ಯೆ, ಕೆಎಲ್ ರಾಹುಲ್ ಕೂಡ ನಾನ್-ಸ್ಟ್ರೈಕರ್‌ ತುದಿಗೆ ಓಡಿ ಬಂದರು. ಈ ನಡುವೆ ಪ್ರಭಾತ್ ಜಯಸೂರ್ಯ ಚೆಂಡನ್ನು ಫೀಲ್ಡಿಂಗ್ ಮಾಡಿ ವಿಕೆಟ್ ಕೀಪರ್ ಡಿಕ್ವೆಲ್ಲಾಗೆ ಪಾಸ್ ಮಾಡಿದರು. ಚೆಂಡನ್ನು ಹಿಡಿದ ವಿಕೆಟ್ ಕೀಪರ್ ಬೇಲ್ಸ್ ಎಗರಿಸಿದರು.

IND vs SL: 600ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ

ಬೇಸರದಿಂದಲೇ ಹೆಜ್ಜೆಹಾಕಿದ ಜೈಸ್ವಾಲ್

ಹೀಗಾಗಿ ಜೈಸ್ವಾಲ್ ತನ್ನದಲ್ಲದ ತಪ್ಪಿಗೆ ರನ್ ಔಟ್​ಗೆ ಬಲಿಯಾಗಬೇಕಾಯಿತು. ಉತ್ತಮ ಲಯದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಜೈಸ್ವಾಲ್ ಭಾರವಾದ ಹೃದಯದಿಂದ ಕ್ರೀಸ್‌ನಿಂದ ಹೊರಹೋಗಬೇಕಾಯಿತು. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುತ್ತಿದ್ದ ರೀತಿ ನೋಡಿದರೆ, ಅವರು ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕ ದಾಖಲಿಸುವ ಸಾಧ್ಯತೆಗಳಿದ್ದವು. ಆದರೆ ಅದು ಈ ದುರಾದೃಷ್ಟಕರ ರನೌಟ್​ನಿಂದ ನೆರವೇರಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:07 pm, Sat, 15 August 26

Follow Us
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?