AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತ ಸುಮ್ಮನಿರಲ್ಲ ಎಂಬುದು ಅವರಿಗೆ ತಿಳಿಯಬೇಕು’; ಕೆಣಕ್ಕಿದವರ ಮೇಲೆ ಕೆರಳಿದ ಜೈಸ್ವಾಲ್

Yashasvi Jaiswal: ಕೊಲಂಬೊದಲ್ಲಿ ನಡೆದ ಭಾರತ-ಶ್ರೀಲಂಕಾ 2ನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತಾ ಫೆರ್ನಾಂಡೋ ಮೈದಾನದಲ್ಲಿ ಜಗಳವಾಡಿದ್ದರು. ಫೆರ್ನಾಂಡೋ ಕೆಣಕಿದಾಗ ಜೈಸ್ವಾಲ್ ಹೆಲ್ಮೆಟ್‌ನಿಂದ ಲಘುವಾಗಿ ಗುದ್ದಿದರು. ಈ ಘಟನೆಗೆ ಐಸಿಸಿ ಕ್ರಮ ಕೈಗೊಂಡಿದೆ. ಘಟನೆ ಬಗ್ಗೆ ಮಾಜಿ ಕ್ರಿಕೆಟಿಗರಿಂದ ಟೀಕೆ ಎದುರಿಸಿದ ಜೈಸ್ವಾಲ್, ‘ಅವರು ಏನು ಹೇಳಿದರು ಎಂಬುದನ್ನು ನಿಮಗೆ ತಿಳಿಯದೆ ದಯವಿಟ್ಟು ಯಾವ ನಿರ್ಧಾರಕ್ಕೂ ಬರಬೇಡಿ’ ಎಂದಿದ್ದಾರೆ.

‘ಭಾರತ ಸುಮ್ಮನಿರಲ್ಲ ಎಂಬುದು ಅವರಿಗೆ ತಿಳಿಯಬೇಕು’; ಕೆಣಕ್ಕಿದವರ ಮೇಲೆ ಕೆರಳಿದ ಜೈಸ್ವಾಲ್
Yashasvi
ಪೃಥ್ವಿಶಂಕರ
|

Updated on:Aug 24, 2026 | 6:18 PM

Share

ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (IND vs SL) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೈದಾನದಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದ ಶ್ರೀಲಂಕಾ ವೇಗಿ ಅಸಿತಾ ಫೆರ್ನಾಂಡೋ (Asitha Fernando) ಹಾಗೂ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ವಿರುದ್ಧ ಐಸಿಸಿ ಗಂಭೀರ ಕ್ರಮ ಜರುಗಿಸಿದೆ. ಆದರೆ ಆ ಸಂದರ್ಭದಲ್ಲಿ ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳುವ ಮೊದಲೇ ಮಾಜಿ ಆಟಗಾರರು ಯಶಸ್ವಿ ಜೈಸ್ವಾಲ್ ಮಾಡಿದ್ದು ತಪ್ಪು ಎಂಬ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡಿರುವ ಯಶಸ್ವಿ ಜೈಸ್ವಾಲ್ ಖಾರವಾಗಿಯೇ ಉತ್ತರ ನೀಡಿದ್ದಾರೆ.

ನಡೆದದ್ದಾರೂ ಏನು?

ಕೊಲಂಬೊ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ 45 ರನ್​ಗಳ ಇನ್ನಿಂಗ್ಸ್ ಆಡಿ ತಮ್ಮ ವಿಕೆಟ್ ಒಪ್ಪಿಸಿದರು. ಇತ್ತ ಜೈಸ್ವಾಲ್ ವಿಕೆಟ್ ಪಡೆದ ಸಂತಸದಲ್ಲಿ ಎದುರಾಳಿ ತಂಡದ ವೇಗಿ ಅಸಿತಾ ಫೆರ್ನಾಂಡೋ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಲ್ಲದೆ ಜೈಸ್ವಾಲ್ ಪೆವಿಲಿಯನತ್ತ ಹೆಜ್ಜೆ ಹಾಕುತ್ತಿರುವಾಗ ಅವರನ್ನು ಕೆಣಕ್ಕುವ ಕೆಲಸಕ್ಕೆ ಕೈಹಾಕಿದರು. ಇದರಿಂದ ಕೆರಳಿದ ಜೈಸ್ವಾಲ್, ಫೆರ್ನಾಂಡೋ ಬಳಿಗೆ ಬಂದು ವಾಗ್ವಾದದಲ್ಲಿ ತೊಡಗಿದರು. ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್​ನಿಂದ ಫೆರ್ನಾಂಡೋ ತಲೆಗೆ ಲಗುವಾಗಿ ಗುದ್ದಿದರು. ಜೈಸ್ವಾಲ್ ಅವರ ಈ ನಡೆಯೇ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಎದುರಾಳಿ ತಂಡದವರು ಜೈಸ್ವಾಲ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಐಸಿಸಿಗೆ ಬಿಟ್ಟಿದ್ದು ಎಂದು ಹೇಳಿಕೆ ನೀಡಿದರೆ, ಇತ್ತ ಟೀಂ ಇಂಡಿಯಾದ ಮಾಜಿ ಆಟಗಾರರು ಜೈಸ್ವಾಲ್ ಮಾಡಿದ್ದು ತಪ್ಪು ಎಂಬರ್ಥದಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತಹವರಲ್ಲಿ ಮಾಜಿ ಆಟಗಾರ ಹಾಗೂ ಹಾಲಿ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡುತ್ತಿರುವ ಹರ್ಷ ಭೋಗ್ಲೆ ಕೂಡ ಸೇರಿದ್ದಾರೆ.

View this post on Instagram

A post shared by Cricbuzz (@cricbuzz)

ಜೈಸ್ವಾಲ್ ಹಾಗೆ ಮಾಡಬಾರದಿತ್ತು

ಜೈಸ್ವಾಲ್ ಮಾಡಿದ್ದು ತಪ್ಪು ಎಂಬರ್ಥದಲ್ಲಿ ಮಾತನಾಡಿರುವ ಹರ್ಷ ಭೋಗ್ಲೆ,‘ಯಾರಾದರೂ ಏನಾದರೂ ಹೇಳಿದರೆ, ನಾವು ಮಾಡಬೇಕಾದ ಅತ್ಯುತ್ತಮ ಕೆಲಸವೆಂದರೆ ದೂರ ಹೋಗುವುದು. ಆದರೆ, ಯಶಸ್ವಿ ಹಾಗೆ ಮಾಡದೆ ಅಸಿತಾ ಫೆರ್ನಾಂಡೋ ಜೊತೆಗೆ ಜಗಳಕ್ಕಿಳಿದರು. ಪೆವಿಲಿಯನತ್ತ ಹೋಗುತ್ತಿದ್ದ ಜೈಸ್ವಾಲ್, ಮತ್ತೆ ಫೆರ್ನಾಂಡೋ ಬಳಿ ಬಂದು ವಾಗ್ವಾದಕ್ಕಿಳಿದರು. ಇದರ ಜೊತೆಗೆ ತಾವು ತಲೆಗೆ ಧರಿಸಿದ್ದ ಹೆಲ್ಮೆಟ್​ನಿಂದ ಫೆರ್ನಾಂಡೋ ತಲೆಗೆ ಲಘುವಾಗಿ ಗುದ್ದಿದರು. ನನ್ನ ಅಭಿಪ್ರಾಯದಲ್ಲಿ ಜೈಸ್ವಾಲ್ ಹಾಗೆ ಮಾಡಬಾರದಿತ್ತು’ ಎಂದಿದ್ದರು.

ಯಾವ ನಿರ್ಧಾರಕ್ಕೂ ಬರಬೇಡಿ

ಹರ್ಷ ಭೋಗ್ಲೆ ಅವರ ಈ ವಿಡಿಯೋಗೆ ಕಾಮೆಂಟ್ ಮೂಲಕ ಉತ್ತರಿಸಿರುವ ಜೈಸ್ವಾಲ್,‘ಅವರು ಏನು ಹೇಳಿದರು ಎಂಬುದನ್ನು ನಿಮಗೆ ತಿಳಿಯದೆ ದಯವಿಟ್ಟು ಯಾವ ನಿರ್ಧಾರಕ್ಕೂ ಬರಬೇಡಿ. ಯಾರಾದರೂ ಗೆರೆ ದಾಟಿದರೆ, ಭಾರತ ಸರಿಯಾದ ತಿರುಗೇಟು ನೀಡುತ್ತದೆ ಎಂಬುದನ್ನು ನಾವು ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದು ಬರೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Mon, 24 August 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ