
ಕೌಂಟಿ ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಸಹ 504 ರನ್ಗಳ ಅಮೋಘ ಜಯದೊಂದಿಗೆ ಎಂಬುದು ವಿಶೇಷ. ಇಂಗ್ಲೆಂಡ್ನ ಲೀಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೋರ್ಸೆಸ್ಟರ್‌ಶೈರ್ ಹಾಗೂ ಯಾರ್ಕ್ಶೈರ್ (Yorkshire) ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ವೋರ್ಸೆಸ್ಟರ್‌ಶೈರ್ ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಯಾರ್ಕ್ಶೈರ್ ಪರ ಡೇವಿಡ್ ಮಲಾನ್ 98 ರನ್ ಬಾರಿಸಿದರು. ಇನ್ನು ಜಾರ್ಜ್ ಹಿಲ್ 67 ಹಾಗೂ ಜಾನ್ಸನ್ ಥಾಂಪ್ಸನ್ 70 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ ಯಾರ್ಕ್ಶೈರ್ 456 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ವೋರ್ಸೆಸ್ಟರ್‌ಶೈರ್ ತಂಡಕ್ಕೆ ಜೇಬ್ ಲಿಬ್ಬಿ (53) ಉತ್ತಮ ಆರಂಭ ಒದಗಿಸಿದ್ದರು. ಆದರೆ ಇತರೆ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 166 ರನ್ಗಳಿಸಿ ವೋರ್ಸೆಸ್ಟರ್‌ಶೈರ್ ತಂಡ ಆಲೌಟ್ ಆಗಿದೆ.
294 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಯಾರ್ಕ್ಶೈರ್ ತಂಡದ ಪರ ಡಾಮ್ ಬೆಸ್ 117 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 107 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಲಾನ್ (76) ಆಕರ್ಷಕ ಅರ್ಧಶತಕ ಸಿಡಿಸಿದರು. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ 315 ರನ್ ಕಲೆಹಾಕಿತು.
ಮೊದಲ ಇನಿಂಗ್ಸ್ನಲ್ಲಿನ 294 ರನ್ಗಳ ಹಿನ್ನಡೆಯೊಂದಿಗೆ ವೋರ್ಸೆಸ್ಟರ್‌ಶೈರ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಬರೋಬ್ಬರಿ 609 ರನ್ಗಳ ಗುರಿ ಪಡೆಯಿತು. ಈ ಕಠಿಣ ಗುರಿ ಬೆನ್ನತ್ತಿದ ವೋರ್ಸೆಸ್ಟರ್ಶೈರ್ಗೆ ಜಾರ್ಜ್ ಹಿಲ್ ಆರಂಭಿಕ ಆಘಾತ ನೀಡಿದರು.
7.1 ಓವರ್ಗಳನ್ನು ಎಸೆದ ಜಾರ್ಜ್ ಹಿಲ್ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪರಿಣಾಮ ಕೇವಲ 105 ರನ್ಗಳಿಗೆ ವೋರ್ಸೆಸ್ಟರ್‌ಶೈರ್ ತಂಡ ಆಲೌಟ್ ಆಗಿದೆ. ಈ ಮೂಲಕ ಯಾರ್ಕ್ಶೈರ್ ತಂಡ ಬರೋಬ್ಬರಿ 504 ರನ್ಗಳ ಜಯ ಸಾಧಿಸಿದೆ.
ಕೌಂಟಿ ಚಾಂಪಿಯನ್ಶಿಪ್ನಲ್ಲಿ ಇದು ಸರ್ವಶ್ರೇಷ್ಠ ಗೆಲುವುದಾಗಿದೆ. ಇದಕ್ಕೂ ಮುನ್ನ ಸರ್ರೆ ತಂಡವು 483 ರನ್ಗಳ ಜಯ ಸಾಧಿಸಿದ್ದು ದಾಖಲೆಯಾಗಿತ್ತು. 2002 ರಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಸರ್ರೆ ತಂಡವು 483 ರನ್ಗಳ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರು.
ಇದೀಗ ವೋರ್ಸೆಸ್ಟರ್‌ಶೈರ್ ವಿರುದ್ಧ ಬರೋಬ್ಬರಿ 504 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಯಾರ್ಕ್ಶೈರ್ ತಂಡವು ಕೌಂಟಿ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ಯಾರ್ಕ್ಶೈರ್ ಪ್ಲೇಯಿಂಗ್ 11: ಆಡಮ್ ಲಿತ್ , ಫಿನ್ಲೇ ಬೀನ್ , ಜೇಮ್ಸ್ ವಾರ್ಟನ್ , ಡೇವಿಡ್ ಮಲಾನ್ ,
ವಿಲಿಯಂ ಲಕ್ಸ್ಟನ್ , ಜಾನಿ ಬೈರ್‌ಸ್ಟೋ (ನಾಯಕ) , ಜಾರ್ಜ್ ಹಿಲ್ , ಡೊಮಿನಿಕ್ ಬೆಸ್ , ಬೆನ್ ಕೋಡ್ , ಜೋರ್ಡಾನ್ ಥಾಂಪ್ಸನ್ ,
ಜ್ಯಾಕ್ ವೈಟ್.
ಇದನ್ನೂ ಓದಿ: IPL 2025: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
ವೋರ್ಸೆಸ್ಟರ್‌ಶೈರ್ ಪ್ಲೇಯಿಂಗ್ 11: ಗ್ಯಾರೆತ್ ರೋಡೆರಿಕ್ (ವಿಕೆಟ್ ಕೀಪರ್), ಜೇಕ್ ಲಿಬ್ಬಿ , ಕಾಶಿಫ್ ಅಲಿ , ಎಥಾನ್ ಬ್ರೂಕ್ಸ್ , ಆಡಮ್ ಹೋಸ್ , ಬ್ರೆಟ್ ಡೊಲಿವೆರಾ (ನಾಯಕ) , ಮ್ಯಾಥ್ಯೂ ವೈಟ್ , ಟಾಮ್ ಟೇಲರ್ , ಬೆನ್ ಅಲಿಸನ್ , ಜೇಕಬ್ ಡಫಿ , ಆ್ಯಡಂ ಫಿಂಚ್.