Qatar World Cup 2022 Song: ಹಯ್ಯ ಹಯ್ಯ…ವಿಶ್ವಕಪ್ ಫುಟ್ಬಾಲ್ ಕ್ರೇಜ್ ಶುರು
Fifa World Cup 2022: ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 32 ತಂಡಗಳು ಕಾಣಿಸಿಕೊಳ್ಳಲಿದ್ದು, ಈ ತಂಡಗಳನ್ನು 8 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗ್ರೂಪ್ನಲ್ಲೂ ತಲಾ 4 ತಂಡಗಳಿರಲಿದೆ.

ವಿಶ್ವ ಕಾಲ್ಚೆಂಡು ಕದನ ಕತಾರ್ ವರ್ಲ್ಡ್ಕಪ್ 2022 (FIFA World Cup 2022) ಕ್ಕೆ ದಿನಗಣನೆ ಶುರುವಾಗಿದೆ. 32 ದೇಶಗಳ ನಡುವೆ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ನವೆಂಬರ್ 21 ರಿಂದ ಚಾಲನೆ ದೊರೆಯಲಿದೆ. ಅದಕ್ಕೂ ಮುನ್ನ ಇದೀಗ ಫಿಫಾ ವಿಶ್ವಕಪ್ 2022 ರ ಅಧಿಕೃತ ಗೀತೆಯನ್ನು (Qatar World Cup 2022 Song) ಬಿಡುಗಡೆ ಮಾಡಿದೆ. “ಹಯ್ಯ ಹಯ್ಯ- ಬೆಟರ್ ಟುಗೆದರ್” ಎಂಬ ಸಂದೇಶದೊಂದಿಗೆ ಬಿಡುಗಡೆ ಮಾಡಲಾಗಿರುವ ಈ ಗೀತೆಗೆ ಅಮೇರಿಕನ್ ಗಾಯಕ ಟ್ರಿನಿಡಾಡ್ ಕಾರ್ಡೋನಾ, ನೈಜೀರಿಯನ್ ಗಾಯಕ ಡೇವಿಡೋ ಮತ್ತು ಕತಾರ್‌ನ ಅತ್ಯಂತ ಪ್ರಸಿದ್ಧ ಗಾಯಕಿ ಆಯಿಷಾ ಧ್ವನಿಗೂಡಿಸಿದ್ದಾರೆ.
ಇನ್ನು ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 32 ತಂಡಗಳು ಕಾಣಿಸಿಕೊಳ್ಳಲಿದ್ದು, ಈ ತಂಡಗಳನ್ನು 8 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗ್ರೂಪ್ನಲ್ಲೂ ತಲಾ 4 ತಂಡಗಳಿರಲಿದೆ. ಅದರಂತೆ ಈಗಾಗಲೇ ಗ್ರೂಪ್ ಡ್ರಾಗಳನ್ನು ಮಾಡಲಾಗಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ಈಕ್ವೆಡಾರ್ ತಂಡವನ್ನು ಎದುರಿಸಲಿದೆ. ಇನ್ನು ಪ್ರತಿ ಗ್ರೂಪ್ನಲ್ಲಿರುವ 4 ತಂಡಗಳು ಪರಸ್ಪರ ಒಂದೊಂದು ಪಂದ್ಯವಾಡಲಿದೆ. ಆ ಬಳಿಕ ಪ್ರತಿ ಗ್ರೂಪ್ನಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಲಿದೆ.
ಪ್ರತಿ ಗ್ರೂಪ್ನ ತಂಡಗಳು ಹೀಗಿವೆ:
ಗ್ರೂಪ್ ಎ ಕತಾರ್ ನೆದರ್ಲ್ಯಾಂಡ್ಸ್ ಸೆನೆಗಲ್ ಈಕ್ವೆಡಾರ್
ಗ್ರೂಪ್ ಬಿ ಇಂಗ್ಲೆಂಡ್ ಯುಎಸ್ಎ ಇರಾನ್ ವೇಲ್ಸ್ / ಸ್ಕಾಟ್ಲೆಂಡ್ / ಉಕ್ರೇನ್ (ಈ ಮೂರು ತಂಡಗಳಲ್ಲಿ ಒಂದು ತಂಡ)
ಗ್ರೂಪ್ ಸಿ ಅರ್ಜೆಂಟೀನಾ ಮೆಕ್ಸಿಕೋ ಪೋಲೆಂಡ್ ಸೌದಿ ಅರೇಬಿಯಾ
ಗ್ರೂಪ್ ಡಿ ಫ್ರಾನ್ಸ್ ಡೆನ್ಮಾರ್ಕ್ ಟುನೀಶಿಯಾ ಆಸ್ಟ್ರೇಲಿಯಾ / ಯುಎಇ / ಪೆರು (ಈ ಮೂರು ತಂಡಗಳಲ್ಲಿ ಒಂದು ತಂಡ)
ಗ್ರೂಪ್ ಇ ಜರ್ಮನಿ ಸ್ಪೇನ್ ಜಪಾನ್ ನ್ಯೂಜಿಲ್ಯಾಂಡ್ / ಕೋಸ್ಟರಿಕಾ (ಇದರಲ್ಲಿ ಒಂದು ತಂಡ)
ಗ್ರೂಪ್ ಎಫ್ ಬೆಲ್ಜಿಯಂ ಕ್ರೊಯೇಷಿಯಾ ಮೊರಾಕೊ ಕೆನಡಾ
ಗ್ರೂಪ್ ಜಿ ಬ್ರೆಜಿಲ್ ಸ್ವಿಜರ್ಲ್ಯಾಂಡ್ ಸೆರ್ಬಿಯಾ ಕ್ಯಾಮೆರಾನ್
ಗ್ರೂಪ್ ಎಚ್ ಪೋರ್ಚುಗಲ್ ಉರುಗ್ವೆ ದಕ್ಷಿಣ ಕೊರಿಯಾ ಘಾನಾ
(ಗ್ರೂಪ್ ಬಿ, ಗ್ರೂಪ್ ಡಿ, ಗ್ರೂಪ್ ಇ ನಲ್ಲಿ ನಾಲ್ಕನೇ ತಂಡಗಳ ಅರ್ಹತಾ ಸುತ್ತು ಇನ್ನಷ್ಟೇ ನಡೆಯಬೇಕಿದ್ದು, ಹೀಗಾಗಿ ಕತಾರ್ ವಿಶ್ವಕಪ್ನಲ್ಲಿ ಅರ್ಹತೆ ಪಡೆಯುವ ಅವಕಾಶವಿರುವ ತಂಡಗಳನ್ನು ಆ ಗ್ರೂಪ್ಗಳಲ್ಲಿ ಹೆಸರಿಸಲಾಗಿದೆ)
