Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮತ್ತೆ ಕೈಕೊಟ್ಟ ಮುಂಬೈ ಬ್ಯಾಟಿಂಗ್‌ ವಿಭಾಗ; ಗುಜರಾತ್​ಗೆ 36 ರನ್ ಜಯ

Gujarat Titans IPL 2025 Victory: ಐಪಿಎಲ್ 2025ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 36 ರನ್‌ಗಳಿಂದ ಗೆಲುವು ಸಾಧಿಸಿತು. ಇದು ಗುಜರಾತ್‌ನ ಸೀಸನ್‌ನ ಮೊದಲ ಜಯ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ 196 ರನ್ ಗಳಿಸಿದರೆ, ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರ 48 ರನ್‌ಗಳ ಹೊರತಾಗಿಯೂ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಗೆಲುವಿನ ಖಾತೆಯನ್ನು ತೆರೆದಿದೆ.

IPL 2025: ಮತ್ತೆ ಕೈಕೊಟ್ಟ ಮುಂಬೈ ಬ್ಯಾಟಿಂಗ್‌ ವಿಭಾಗ; ಗುಜರಾತ್​ಗೆ 36 ರನ್ ಜಯ
Gujarat Titans
Follow us
ಪೃಥ್ವಿಶಂಕರ
|

Updated on:Mar 29, 2025 | 11:53 PM

ಐಪಿಎಲ್ 2025 (IPL 2025) ರಲ್ಲಿ ಗುಜರಾತ್ ಟೈಟಾನ್ಸ್ ಅಂತಿಮವಾಗಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ (Gujarat Titans vs Mumbai Indians) ತಂಡವನ್ನು 36 ರನ್‌ಗಳಿಂದ ಸುಲಭವಾಗಿ ಸೋಲಿಸಿತು. ಈ ಮೂಲಕ ಗುಜರಾತ್ ತಂಡವು ಸೀಸನ್​ನ 2ನೇ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದರೆ, ಇತ್ತ ನಾಯಕ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದರೂ ಮುಂಬೈಗೆ ವಿಜಯ ಸಿಗಲಿಲ್ಲ. ಹೀಗಾಗಿ ಮುಂಬೈ ತಂಡ ಸತತ ಎರಡನೇ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈಗೆ ಮತ್ತೊಮ್ಮೆ ಉತ್ತಮ ಆರಂಭ ಸಿಗಲಿಲ್ಲ. ಮುಂಬೈ ಪರ ಸೂರ್ಯಕುಮಾರ್ 48 ರನ್ ಬಾರಿಸಿ ಏಕಾಂಗಿ ಹೋರಾಟ ನೀಡಿದನ್ನು ಬಿಟ್ಟರೆ ಉಳಿದವರಿಂದ ಅಂತಹ ಪ್ರದರ್ಶನ ಕಂಡುಬರಲಿಲ್ಲ.

ಸಾಯಿ ಸುದರ್ಶನ್ ಅರ್ಧಶತಕ

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಗುಜರಾತ್ ಪರ ಅಗ್ರ 3 ಬ್ಯಾಟ್ಸ್‌ಮನ್‌ಗಳು ಅತಿ ಹೆಚ್ಚು ರನ್‌ಗಳ ಕೊಡುಗೆ ನೀಡಿದರು. ಆರಂಭಿಕ ಆಟಗಾರ ಸಾಯಿ ಸುದರ್ಶನ್ 41 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 63 ರನ್ ಗಳಿಸಿದರೆ, ಜೋಸ್ ಬಟ್ಲರ್ 24 ಎಸೆತಗಳಲ್ಲಿ 39 ರನ್ ಗಳಿಸಿದರು. ಬಟ್ಲರ್ ಅವರ ಇನ್ನಿಂಗ್ಸ್‌ನಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ನಾಯಕ ಶುಭ್​ಮನ್ ಗಿಲ್ ಕೂಡ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 38 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ, ಮುಂಬೈನ ಬೌಲರ್‌ಗಳು ಬೇರೆ ಯಾರಿಗೂ ದೊಡ್ಡ ಇನ್ನಿಂಗ್ಸ್ ಮಾಡಲು ಅವಕಾಶ ನೀಡಲಿಲ್ಲ.

ಶೆರ್ಫಾನ್ ರುದರ್ಫೋರ್ಡ್ 18 ರನ್ ಗಳಿಸಿದರೆ, ಶಾರುಖ್ ಖಾನ್ 9 ರನ್, ರಶೀದ್ ಖಾನ್ 6 ರನ್ ಸೇರಿಸಿದರು. ಕಗಿಸೊ ರಬಾಡ ಅಜೇಯ 7 ರನ್ ಗಳಿಸಿದರು. ಸಾಯಿ ಕಿಶೋರ್ 1 ರನ್ ಗಳಿಸಿ ರನೌಟ್ ಆದರು. ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್, ಮುಜೀಬ್ ಉರ್ ರೆಹಮಾನ್ ಮತ್ತು ಎಸ್ ರಾಜು ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ
Image
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
Image
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದ ನಾಯಕ ಯಾರು?
Image
ನಾಯಕನಾದ ಕೂಡಲೇ ಬೆಸ್ಟ್ ಬೌಲರ್​ಗೆ ಗೇಟ್​ಪಾಸ್ ನೀಡಿದ ಪಾಂಡ್ಯ
Image
ಶುಭ್​ಮನ್ ಗಿಲ್ ಸಾಮಾಜಿಕ ಕಳಕಳಿಗೆ ಸಲ್ಯೂಟ್ ಹೊಡೆದ ಫ್ಯಾನ್ಸ್

ಮುಂಬೈಗೆ ಆರಂಭಿಕ ಆಘಾತ

ಗುಜರಾತ್ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಬೇಗನೆ ವಿಕೆಟ್ ಕಳೆದುಕೊಂಡರು. ನಂತರ, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ 62 ರನ್‌ಗಳನ್ನು ಸೇರಿಸುವ ಮೂಲಕ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಆದರೆ ಈ ಜೋಡಿ ಔಟಾದ ನಂತರ ಮುಂಬೈ ಇನ್ನಿಂಗ್ಸ್ ಕುಸಿಯಿತು.

IPL 2025: ಮೊದಲ ಓವರ್​ನಲ್ಲೇ ರೋಹಿತ್ ವಿರುದ್ಧ ಸೇಡು ತೀರಿಸಿಕೊಂಡ ಸಿರಾಜ್; ವಿಡಿಯೋ

ಸಿರಾಜ್, ಪ್ರಸಿದ್ಧ್ ಮಾರಕ ಬೌಲಿಂಗ್

ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ 11 ರನ್, ರೋಹಿತ್ ಶರ್ಮಾ ಎಂಟು ರನ್, ರಿಕಲ್ಟನ್ ಆರು ಮತ್ತು ರಾಬಿನ್ ಮಿಂಜ್ ಮೂರು ರನ್ ಗಳಿಸಿದರು. ಇವರಲ್ಲದೆ, ನಮನ್ ಧೀರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 18 ರನ್ ಗಳಿಸಿ ಅಜೇಯರಾಗಿ ಉಳಿದರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರೆ, ಕಗಿಸೊ ರಬಾಡ ಮತ್ತು ಆರ್ ಸಾಯಿ ಕಿಶೋರ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:45 pm, Sat, 29 March 25