AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಅರ್ಜೆಂಟೀನಾದ ಗೆಲುವು ಕಸಿದ ಭಾರತ

Paris Olympics 2024 Hockey: ಪ್ಯಾರಿಸ್ ಒಲಿಂಪಿಕ್ಸ್​ ಹಾಕಿ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿವೆ. ಈ ತಂಡಗಳನ್ನು ಎರಡು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದೆ. ಈ ತಂಡಗಳಿಂದ ಎಂಟು ತಂಡಗಳು ಮಾತ್ರ ಮುಂದಿನ ಹಂತಕ್ಕೇರಲಿದೆ. ಅದರಂತೆ ಅಂಕ ಪಟ್ಟಿಯಲ್ಲಿ ಅಗ್ರ-8 ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್​ನಲ್ಲಿ ಕಣಕ್ಕಿಳಿಯಲಿದೆ.

Paris Olympics 2024: ಅರ್ಜೆಂಟೀನಾದ ಗೆಲುವು ಕಸಿದ ಭಾರತ
IND vs ARG
ಝಾಹಿರ್ ಯೂಸುಫ್
|

Updated on:Jul 30, 2024 | 8:32 AM

Share

ಪ್ಯಾರಿಸ್ ಒಲಿಂಪಿಕ್ಸ್​ನ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವು ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಸೋಮವಾರ ಯವೆಸ್-ಡು-ಮನೋಯಿರ್ ಕ್ರೀಡಾಂಗಣದಲ್ಲಿ ನಡೆದ ಪೂಲ್-B ಪಂದ್ಯದಲ್ಲಿ ಭಾರತ ತಂಡವು ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಅರ್ಜೆಂಟೀನಾ ಆರಂಭಿಕ ಮುನ್ನಡೆ ಪಡೆದಿತ್ತು.

ಮುನ್ಪಡೆ ಆಟಗಾರ ಲ್ಯೂಕಾಸ್ ಮಾರ್ಟಿನೆಝ್ 22ನೇ ನಿಮಿಷದಲ್ಲಿ ಅತ್ಯುತ್ತಮ ಡ್ರಿಬ್ಲಿಂಗ್​ನೊಂದಿಗೆ ಚೆಂಡನ್ನು ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಅರ್ಜೆಂಟೀನಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.ಇದರ ಬೆನ್ನಲ್ಲೇ ಸತತ ಪ್ರತಿದಾಳಿ ನಡೆಸಿದ ಭಾರತೀಯ ಪಡೆಗೆ ಅರ್ಜೆಂಟೀನಾದ ರಕ್ಷಣಾ ಕವಚವನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ.

ಇತ್ತ ಭಾರತೀಯರು ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರೂ, ಅತ್ತ ಅರ್ಜೆಂಟೀನಾ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರು. ಪರಿಣಾಮ 58 ನಿಮಿಷಗಳವರೆಗೆ ಭಾರತಕ್ಕೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ಆದರೆ ಕೊನೆಯ 2 ನಿಮಿಷಗಳಿರುವಾಗ ಆಕ್ರಮಣಕಾರಿ ಆಟದೊಂದಿಗೆ ಮುನ್ನುಗ್ಗಿದ ಭಾರತೀಯ ಮುನ್ಪಡೆ ಆಟಗಾರರು ಪೆನಾಲ್ಟಿ ಕಾರ್ನರ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. 59ನೇ ನಿಮಿಷದಲ್ಲಿ ಸಿಕ್ಕ ಈ ಅವಕಾಶವನ್ನು ಅದ್ಭುತ ಫ್ಲಿಕ್​ನೊಂದಿಗೆ ಗೋಲಾಗಿ ಪರಿವರ್ತಿಸುವಲ್ಲಿ ಟೀಮ್ ಇಂಡಿಯಾ ನಾಯಕ ಹರ್ಮನ್​ಪ್ರೀತ್ ಸಿಂಗ್ ಯಶಸ್ವಿಯಾದರು. ಪರಿಣಾಮ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು.

ಅಂದರೆ ಸೋಲಿನ ದವಡೆಯಲ್ಲಿದ್ದ ಭಾರತ ತಂಡವು ಕೊನೆಯ ನಿಮಿಷದಲ್ಲಿ ಅರ್ಜೆಂಟೀನಾ ಗೆಲುವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೀಮ್ ಇಂಡಿಯಾ ಪೂಲ್-ಬಿ ಅಂಕ ಪಟ್ಟಿಯಲ್ಲಿ 4 ಪಾಯಿಂಟ್ಸ್​ನೊಂದಿಗೆ 3ನೇ ಸ್ಥಾನಕ್ಕೇರಿದೆ.

ಭಾರತದ ಮುಂದಿನ ಎದುರಾಳಿ ಯಾರು?

ಪೂಲ್-ಬಿ ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.45 ರಿಂದ ಶುರುವಾಗಲಿದೆ. ಅತ್ತ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಐರ್ಲೆಂಡ್ ತಂಡಕ್ಕೆ ಈ ಪಂದ್ಯ ನಿರ್ಣಾಯಕ. ಇತ್ತ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್​ವೆಲ್ ವಿಶ್ವ ದಾಖಲೆ ಉಡೀಸ್

ಭಾರತದ ಹಾಕಿ ತಂಡ:

  • ಗೋಲ್‌ಕೀಪರ್‌:
  • ಪಿಆರ್​ ಶ್ರೀಜೇಶ್
  • ಡಿಫೆಂಡರ್ಸ್:
  • ಜರ್ಮನ್​ಪ್ರೀತ್ ಸಿಂಗ್
  • ಅಮಿತ್ ರೋಹಿದಾಸ್
  • ಹರ್ಮನ್​ಪ್ರೀತ್ ಸಿಂಗ್
  • ಸುಮಿತ್
  • ಸಂಜಯ್
  • ಮಿಡ್‌ಫೀಲ್ಡರ್‌ಗಳು:
  • ರಾಜ್‌ಕುಮಾರ್ ಪಾಲ್
  • ಶಂಶೇರ್ ಸಿಂಗ್
  • ಮನ್‌ಪ್ರೀತ್ ಸಿಂಗ್
  • ಹಾರ್ದಿಕ್ ಸಿಂಗ್
  • ವಿವೇಕ್ ಸಾಗರ್ ಪ್ರಸಾದ್
  • ಫಾರ್ವರ್ಡ್‌ಗಳು:
  • ಅಭಿಷೇಕ್
  • ಸುಖಜೀತ್ ಸಿಂಗ್
  • ಲಲಿತ್ ಕುಮಾರ್ ಉಪಾಧ್ಯಾಯ
  • ಮನ್‌ದೀಪ್ ಸಿಂಗ್
  • ಗುರ್ಜಂತ್ ಸಿಂಗ್
  • ಪರ್ಯಾಯ ಆಟಗಾರರು:
  • ನೀಲಕಂಠ ಶರ್ಮಾ
  • ಜುಗರಾಜ್ ಸಿಂಗ್
  • ಕ್ರಿಶನ್ ಬಹದ್ದೂರ್ ಪಾಠಕ್.

Published On - 8:32 am, Tue, 30 July 24