AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಇಂದು ಕಂಚಿನ ಪದಕಕ್ಕೆ ಗುರಿಯಿಡಲಿರುವ ಮನು-ಸರಬ್ಜೋತ್

Paris Olympics 2024: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಜುಲೈ 30 ರಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ ಮತ್ತು ಹಾಕಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ವಿಶೇಷ ಎಂದರೆ ಶೂಟಿಂಗ್​ನಲ್ಲಿ ಭಾರತೀಯರಿಬ್ಬರು ಫೈನಲ್​ನಲ್ಲಿದ್ದು, ಹೀಗಾಗಿ ಇಂದು ಕಂಚಿನ ಪದಕವನ್ನು ನಿರೀಕ್ಷಿಸಬಹುದಾಗಿದೆ.

Paris Olympics 2024: ಇಂದು ಕಂಚಿನ ಪದಕಕ್ಕೆ ಗುರಿಯಿಡಲಿರುವ ಮನು-ಸರಬ್ಜೋತ್
Manu Bhaker - Sarabjot Singh
ಝಾಹಿರ್ ಯೂಸುಫ್
|

Updated on:Jul 30, 2024 | 7:45 AM

Share

ಪ್ಯಾರಿಸ್ ಒಲಿಂಪಿಕ್ಸ್​ನ ಮೂರನೇ ದಿನ ಭಾರತೀಯ ಸ್ಪರ್ಧಿಗಳಿಂದ ಮಿಶ್ರ ಪ್ರದರ್ಶನ ಮೂಡಿಬಂದಿದೆ. ಬ್ಯಾಡ್ಮಿಂಟನ್​ನಲ್ಲಿ ಲಕ್ಷ್ಯ ಸೇನ್ ಮುಂದಿನ ಹಂತಕ್ಕೇರಿದರೆ, ಶೂಟಿಂಗ್​ನಲ್ಲಿ ಮನು ಭಾಕರ್- ಸರಬ್ಜೋತ್ ಸಿಂಗ್ ಫೈನಲ್​ಗೆ ಪ್ರವೇಶಿಸಿದ್ದಾರೆ. ಹಾಗೆಯೇ ಹಾಕಿ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಜೋಡಿ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಮಿಶ್ರ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅದರಂತೆ ಇಂದು ನಡೆಯಲಿರುವ ಕಂಚಿನ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಶೂಟರ್‌ಗಳನ್ನು ಎದುರಿಸಲಿದ್ದಾರೆ. ಹಾಗೆಯೇ ಜುಲೈ 30 ರ ಭಾರತೀಯ ಸ್ಪರ್ಧಿಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

ಶೂಟಿಂಗ್:

  • ಪುರುಷರ ಟ್ರ್ಯಾಪ್ ಅರ್ಹತಾ ಸುತ್ತು – ಪೃಥ್ವಿರಾಜ್ ತೊಂಡೈಮಾನ್ – ಮಧ್ಯಾಹ್ನ 12:30 ರಿಂದ
  • ಮಹಿಳೆಯರ ಟ್ರ್ಯಾಪ್ ಅರ್ಹತಾ ಸುತ್ತು – ಶ್ರೇಯಸಿ ಸಿಂಗ್, ರಾಜೇಶ್ವರಿ ಕುಮಾರಿ – 12:30 PM ನಂತರ
  • 10 ಮೀ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆ (ಕಂಚಿನ ಪದಕದ ಪಂದ್ಯ) – ಮನು ಭಾಕರ್/ಸರಬ್ಜೋತ್ ಸಿಂಗ್  – 1:00 PM ರಿಂದ
  • ಪುರುಷರ ಟ್ರ್ಯಾಪ್ ಫೈನಲ್ (ಅರ್ಹತೆಗೆ ಒಳಪಟ್ಟಿರುತ್ತದೆ) – 7:00 PM ರಿಂದ

ರೋಯಿಂಗ್:

  • ಪುರುಷರ ಸಿಂಗಲ್ಸ್ ಸ್ಕಲ್ಸ್ ಕ್ವಾರ್ಟರ್-ಫೈನಲ್ – ಬಲರಾಜ್ ಪನ್ವಾರ್ – ಮಧ್ಯಾಹ್ನ 2:10 ರಿಂದ

ಹಾಕಿ:

  • ಪುರುಷರ ಪೂಲ್ ಬಿ – ಭಾರತ vs ಐರ್ಲೆಂಡ್ – 4:45 PM ರಿಂದ

ಬಿಲ್ಲುಗಾರಿಕೆ:

  • 64 ರ ಮಹಿಳೆಯರ ಸಿಂಗಲ್ಸ್ ಸುತ್ತು – ಅಂಕಿತಾ ಭಕತ್ vs ವಿಯೊಲೆಟಾ ಮೈಸ್ಜೋರ್ (POL) – 5:14 PM ರಿಂದ
  • 64 ರ ಮಹಿಳೆಯರ ಸಿಂಗಲ್ಸ್ ಸುತ್ತು – ಭಜನ್ ಕೌರ್ vs ಸೈಫಾ ನುರಾಫಿಫಾ ಕಮಾಲ್ (INA) – 5:27 PM ರಿಂದ
  • 64 ರ ಪುರುಷರ ಸಿಂಗಲ್ಸ್ ಸುತ್ತು – ಧೀರಜ್ ಬೊಮ್ಮದೇವರ vs ಆಡಮ್ ಲಿ (CZE) – 10:46 PM ರಿಂದ

ಬ್ಯಾಡ್ಮಿಂಟನ್:

  • ಪುರುಷರ ಡಬಲ್ಸ್ ಗುಂಪು C – ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ/ಚಿರಾಗ್ ಶೆಟ್ಟಿ vs ಫಜರ್ ಅಲ್ಫಿಯಾನ್/ಮುಹಮ್ಮದ್ ರಿಯಾನ್ ಅರ್ಡಿಯಾಂಟೊ (INA) – 5:30 PM ರಿಂದ
  • ಮಹಿಳೆಯರ ಡಬಲ್ಸ್ ಗುಂಪು C – ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ vs ಸೆಟ್ಯಾನಾ ಮಪಾಸಾ/ಏಂಜೆಲಾ ಯು (AUS) – 6:20 PM ರಿಂದ

ಬಾಕ್ಸಿಂಗ್:

  • ಪುರುಷರ 51 ಕೆಜಿ- ಅಮಿತ್ ಪಂಗಲ್ vs ಪ್ಯಾಟ್ರಿಕ್ ಚಿನ್ಯೆಂಬಾ (ZAM) – 7:16 PM
  • ಮಹಿಳೆಯರ 57kg – ಜೈಸ್ಮಿನ್ ಲಂಬೋರಿಯಾ vs ನೆಸ್ತಿ ಪೆಟೆಸಿಯೊ (PHI) – 9:24 PM
  • ಮಹಿಳೆಯರ 54 ಕೆಜಿ- ಪ್ರೀತಿ ಪವಾರ್ vs ಯೆನಿ ಏರಿಯಾಸ್ (COL) – 1:22 AM (ಬುಧವಾರ)

ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ 10 ಸ್ಪರ್ಧಿಗಳು

______________________________________________________

ಜುಲೈ 29ರ ಫಲಿತಾಂಶಗಳು:

  • ಶೂಟಿಂಗ್: ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ (ಮಿಶ್ರ) ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
  • ಶೂಟಿಂಗ್: ಅರ್ಜುನ್ ಬಾಬುತಾ ಫೈನಲ್ (10 ಮೀ ಏರ್ ರೈಫಲ್) ನಲ್ಲಿ 4ನೇ ಸ್ಥಾನ ಪಡೆದು ಹೊರಬಿದ್ದರು.
  • ಶೂಟಿಂಗ್: ರಮಿತಾ ಜಿಂದಾಲ್ ಫೈನಲ್‌ನಲ್ಲಿ (10 ಮೀ ಏರ್ ರೈಫಲ್) 7ನೇ ಸ್ಥಾನ ಪಡೆದು ಹೊರಬಿದ್ದಿದ್ದಾರೆ.
  • ಆರ್ಚರಿ: ಪುರುಷರ ತಂಡ ವಿಭಾಗದ ಕ್ವಾರ್ಟರ್ ಫೈನಲ್​ನಲ್ಲಿ ಭಾರತ ತಂಡ ಟರ್ಕಿ ವಿರುದ್ಧ ಸೋತು ಹೊರಬಿದ್ದಿದೆ.
  • ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತ 1-1 ಗೋಲುಗಳಿಂದ ಡ್ರಾ ಸಾಧಿಸಿದೆ.
  • ಬ್ಯಾಡ್ಮಿಂಟನ್: ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಪುರುಷರ ಡಬಲ್ಸ್‌ನಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೇರಿದ್ದಾರೆ.
  • ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ 21-19, 21-14 ಅಂತರದಿಂದ ಜೂಲಿಯನ್ ಕರಾಗ್ಗಿ ಅವರ ವಿರುದ್ಧ ಗೆಲುವು ಸಾಧಿಸಿ ಮುಂದಿನ ಹಂತಕ್ಕೇರಿದ್ದಾರೆ.
  • ಶೂಟಿಂಗ್: ಕ್ವಾಲಿಫಿಕೇಶನ್ ಆಫ್ ಟ್ರ್ಯಾಪ್ ಈವೆಂಟ್‌ನಲ್ಲಿ ಪೃಥ್ವಿರಾಜ್ ತೊಂಡೈಮಾನ್ ಕೊನೆಯ ಸ್ಥಾನ ಪಡೆದಿದ್ದಾರೆ.

Published On - 7:40 am, Tue, 30 July 24