ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಟೀಂ ಇಂಡಿಯಾಕ್ಕೆ ರೋಚಕ ಜಯ
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಗೆದ್ದ ಭಾರತ ದಿಗ್ವಿಜಯ ಸಾಧಿಸಿದೆ.ಚೇಸಿಂಗ್ ಮಾಸ್ಟರ್ ಕೊಹ್ಲಿ ಆರ್ಭಟ. ಕನ್ನಡಿಗ ರಾಹುಲ್ ಪರಾಕ್ರಮಕ್ಕೆ ವೆಸ್ಟ್ ಇಂಡೀಸ್ ಖೇಲ್ ಖತಂ ಆಗಿದೆ. ಕೊನೆಯಲ್ಲಿ ರಣರೋಚಕ ಬ್ಯಾಟಿಂಗ್ ಮಾಡಿ ಅಬ್ಬರಿಸಿದ ಶಾರ್ದೂಲ್ ಠಾಕೂರ್ ಅವತಾರಕ್ಕೆ ಪೊಲಾರ್ಡ್ ಪಡೆ ಪಂಕ್ಚರ್ ಆಯ್ತು. ಪೂರನ್.. ಪೊಲಾರ್ಡ್ ಅಬ್ಬರ.. ಭಾರತಕ್ಕೆ 316ರನ್ ಗುರಿ: ಕಟಕ್ ಮೈದಾನದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ವೆಸ್ಟ್ ಇಂಡೀಸ್ ಪರ ಇವಿನ್ ಲಿವಿಸ್ 21ರನ್ಗೆ […]
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಗೆದ್ದ ಭಾರತ ದಿಗ್ವಿಜಯ ಸಾಧಿಸಿದೆ.ಚೇಸಿಂಗ್ ಮಾಸ್ಟರ್ ಕೊಹ್ಲಿ ಆರ್ಭಟ. ಕನ್ನಡಿಗ ರಾಹುಲ್ ಪರಾಕ್ರಮಕ್ಕೆ ವೆಸ್ಟ್ ಇಂಡೀಸ್ ಖೇಲ್ ಖತಂ ಆಗಿದೆ. ಕೊನೆಯಲ್ಲಿ ರಣರೋಚಕ ಬ್ಯಾಟಿಂಗ್ ಮಾಡಿ ಅಬ್ಬರಿಸಿದ ಶಾರ್ದೂಲ್ ಠಾಕೂರ್ ಅವತಾರಕ್ಕೆ ಪೊಲಾರ್ಡ್ ಪಡೆ ಪಂಕ್ಚರ್ ಆಯ್ತು.
ಪೂರನ್.. ಪೊಲಾರ್ಡ್ ಅಬ್ಬರ.. ಭಾರತಕ್ಕೆ 316ರನ್ ಗುರಿ: ಕಟಕ್ ಮೈದಾನದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ವೆಸ್ಟ್ ಇಂಡೀಸ್ ಪರ ಇವಿನ್ ಲಿವಿಸ್ 21ರನ್ಗೆ ಸುಸ್ತಾದ್ರೆ, ಶಾಯ್ ಹೋಪ್ 42ರನ್ಗಳಿಸಿ ಬೌಲ್ಡ್ ಆಗ್ತಾರೆ. ರೋಸ್ಟನ್ ಚೇಸ್ 38ಮತ್ತು ಶಿಮ್ರಾನ್ ಹೆಟ್ಮೇರ್ 37ರನ್ಗಳಿಸ್ತಾರೆ. 5ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದ ನಿಕೋಲಸ್ ಪೂರನ್ 64 ಬಾಲ್ಗಳಲ್ಲಿ 10 ಬೌಂಡ್ರಿ ಹಾಗೂ 3 ಸಿಕ್ಸರ್ ಸಹಿತ 89ರನ್ಗಳಿಸ್ತಾರೆ.
ವಿಂಡೀಸ್ ನಾಯಕ ಕೆರಾನ್ ಪೊಲಾರ್ಡ್ 51 ಬಾಲ್ನಲ್ಲಿ 3 ಬೌಂಡ್ರಿ ಹಾಗೂ 7 ಸಿಕ್ಸರ್ ಸಹಿತ ಅಜೇಯ 74ರನ್ಗಳಿಸಿದ್ರು. ಈ ಮೂಲಕ ವೆಸ್ಟ್ ಇಂಡೀಸ್ ನಿಗಧಿತ 50 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 315ರನ್ಗಳಿಸುತ್ತೆ ಪದಾರ್ಪಣೆ ಪಂದ್ಯದಲ್ಲೇ ನವದೀಪ್ ಸೈನಿ 2 ವಿಕೆಟ್ ಪಡೆದ್ರೆ, ಶಾರ್ದೂಲ್, ಶಮಿ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್ ಪಡೀತಾರೆ.
ವಿರಾಟ್ ವೀರಾವೇಶ.. ರಾಹುಲ್ ರಣವಿಕ್ರಮ ಆಟಕ್ಕೆ ಪೊಲ್ಲಾರ್ಡ್ ಪಡೆ ಪಂಕ್ಚರ್! ವೆಸ್ಟ್ ಇಂಡೀಸ್ ನೀಡಿದ್ದ ಗುರಿ ಬೆನ್ನತ್ತಿದ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಅಬ್ಬರಿಸಿದ್ರು. ಆರಂಭಿಕರಾದ ರೋಹಿತ್ ಶರ್ಮಾ 63ರನ್ ಗಳಿಸ್ತಾರೆ. ಕನ್ನಡಿಗ ರಾಹುಲ್ ರಣವಿಕ್ರಮನಂತೆ ಬ್ಯಾಟಿಂಗ್ ಮಾಡಿ ಆರ್ಭಟಿಸ್ತಾರೆ. 77ರನ್ಗಳಿಸಿದ್ದ ಕನ್ನಡಿಗ ರಾಹುಲ್ ರನ್ವೀರನಾಗಿ ಮೆರೆದಾಡಿದ್ರು.
ಇದರ ನಡುವೆಯೇ ನಾಯಕ ವಿರಾಟ್ ವೀರಾವೇಶದ ಬ್ಯಾಟಿಂಗ್ ನಡೆಸೋಕೆ ಶುರುಮಾಡ್ತಾರೆ. 3ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಕೊಹ್ಲಿ, ಮತ್ತೆ ವಿಂಡೀಸ್ ಎದುರು ವೀರಾಧಿವೀರನಾಗಿ ಮೆರೆದಾಡಿದ್ರು. ಐಯ್ಯರ್, ಪಂತ್, ಜಾಧವ್ ಕೈಕೊಟ್ರು ಕುಗ್ಗದ ಚೇಸಿಂಗ್ ಮಾಸ್ಟರ್ ಕೊಹ್ಲಿ 85ರನ್ಗಳಿಸಿ ಭಾರತದ ಗೆಲುವಿಗೆ ಭರವಸೆ ಮೂಡಿಸಿದ್ರು.
ಈ ನಡುವೆ ಕೊಹ್ಲಿ, 46.1ನೇ ಓವರ್ನಲ್ಲಿ ಔಟಾಗ್ತಿದ್ದಂತೆ ಇಡೀ ಮೈದಾನವೇ ಸೈಲೆಂಟ್ ಆಗಿಹೋಗುತ್ತೆ. ಜಡೇಜಾ ಜೊತೆ ಚಾಣಾಕ್ಷ ಬ್ಯಾಟಿಂಗ್ ಮಾಡ್ತಿದ್ದ ಕೊಹ್ಲಿ, ಅಚ್ಚರಿ ಎಂಬಂತೆ ವಿಕೆಟ್ ಒಪ್ಪಿಸ್ತಾರೆ. ಬಳಿಕ ಕ್ರೀಸ್ಗಿಳಿದ ಶಾರ್ದೂಲ್ ಠಾಕೂರ್ ಜಡ್ಡು ಜೊತೆ ಅಬ್ಬರಿಸೋಕೆ ನಿಲ್ತಾರೆ. ಸೆಲ್ಯೂಟ್ ಸ್ಟಾರ್ ಶೆಲ್ಡನ್ ಕಾಟ್ರೆಲ್ ಓವರ್ನಲ್ಲಿ ಒಂದು ಸಿಕ್ಸರ್ ಜೊತೆಗೆ ಒಂದು ಬೌಂಡ್ರಿ ಬಾರಿಸಿದ ಶಾರ್ದೂಲ್, ಪಂದ್ಯದ ಗತಿಯನ್ನೇ ಬದಲಿಸಿಬಿಟ್ರು.
48.2ನೇ ಓವರ್ನಲ್ಲಿ ರವೀಂದ್ರ ಜಡೇಜಾ ಬೌಂಡ್ರಿ ಬಾರಿಸಿದ್ರೆ, ತದನಂತರವೇ 2ರನ್ಗಳಿಸ್ತಾರೆ. ಈ ಹೊತ್ತಿಗಾಗ್ಲೇ ಗ್ಯಾಲರಿಯಲ್ಲಿ ವಿರಾಟ್ ಕೊಹ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸ್ತಿದ್ರು. 48.5ನೇ ಬಾಲ್ ಅನ್ನ ಕಿಮೋ ಪೌಲ್ ನೋ ಬಾಲ್ ಮಾಡಿದ್ರಿಂದ ಭಾರತ ಈ ಪಂದ್ಯದಲ್ಲಿ 4 ವಿಕೆಟ್ಗಳ ಅಂತರದಿಂದ ಗೆದ್ದು ಬೀಗಿದೆ.
2-1 ಅಂತರದಲ್ಲಿ ಏಕದಿನ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಕಟಕ್ನಲ್ಲಿ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದೆ. ಬರೀಗೈನಲ್ಲಿ ಕೆರಿಬಿಯನ್ನರನ್ನ ಮನೆಗೆ ಕಳುಹಿಸಿರುವ ಕೊಹ್ಲಿ ಗ್ಯಾಂಗ್ ವರ್ಷಾಂತ್ಯದ ಕೊನೆಯ ಸರಣಿ ಗೆದ್ದು, ಹರುಷದಿಂದ ತೇಲಾಡಿದೆ.
Published On - 7:58 am, Mon, 23 December 19