ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಹುಲಿಗಳ ಆರ್ಭಟ

ಟೀಮ್ ಇಂಡಿಯಾ ವೈಜಾಗ್ ಏಕದಿನ ಪಂದ್ಯದಲ್ಲಿ 107ರನ್​ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಅತ್ಯುದ್ಭುತ ಪ್ರದರ್ಶನ ನೀಡಿದ ಭಾರತ ರಣಭೇರಿ ಬಾರಿಸಿದೆ. ಹಾಗಾದ್ರೆ, ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಹುಲಿಗಳ ಆರ್ಭಟ ಹೇಗಿತ್ತು..? ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮೆರೆದಾಡಿದ ಹುಲಿಯಾ ಯಾಱರು ಅನ್ನೋದನ್ನ ಇಲ್ಲಿ ಓದಿ ರೋ ರೋ ರೋಹಿತ್‌.. ರಾ.. ರಾ.. ರಾಹುಲ್‌.. ವಿಂಡೀಸ್‌ ಚಿಂದಿ! ವಿಶಾಖ ಪಟ್ಟಣಂ ಪಂದ್ಯದಲ್ಲಿ ಟಾಸ್ ಗೆದ್ದ […]

ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಹುಲಿಗಳ ಆರ್ಭಟ
Follow us
ಸಾಧು ಶ್ರೀನಾಥ್​
|

Updated on:Dec 19, 2019 | 9:47 AM

ಟೀಮ್ ಇಂಡಿಯಾ ವೈಜಾಗ್ ಏಕದಿನ ಪಂದ್ಯದಲ್ಲಿ 107ರನ್​ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಅತ್ಯುದ್ಭುತ ಪ್ರದರ್ಶನ ನೀಡಿದ ಭಾರತ ರಣಭೇರಿ ಬಾರಿಸಿದೆ. ಹಾಗಾದ್ರೆ, ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಹುಲಿಗಳ ಆರ್ಭಟ ಹೇಗಿತ್ತು..? ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮೆರೆದಾಡಿದ ಹುಲಿಯಾ ಯಾಱರು ಅನ್ನೋದನ್ನ ಇಲ್ಲಿ ಓದಿ

ರೋ ರೋ ರೋಹಿತ್‌.. ರಾ.. ರಾ.. ರಾಹುಲ್‌.. ವಿಂಡೀಸ್‌ ಚಿಂದಿ! ವಿಶಾಖ ಪಟ್ಟಣಂ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ಅದ್ರಂತೆ ಬ್ಯಾಟಿಂಗ್​ಗಿಳಿದ ಟೀಮ್ ಇಂಡಿಯಾ ಪರ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ರನ್​ಮಾರುತವನ್ನ ಸೃಷ್ಠಿಸ್ತಾರೆ. ವೆಸ್ಟ್ ಇಂಡೀಸ್ ವಿರುದ್ಧ ಹಿಟ್ ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ರೋ ರೋ ಹಿಟ್​ಗೆ ವಿಂಡೀಸ್ ಧೂಳೀಪಟ ಆಗೋಯ್ತು. 138 ಬಾಲ್​ನಲ್ಲಿ 159ರನ್​ಗಳನ್ನ ಗಳಿಸಿದ ರೋಹಿತ್ ರನ್ ಪರ್ವತವನ್ನ ಏರಿದ್ರು.

ರಾ.. ರಾ.. ರಾಹುಲ್ ವೈಜಾಗ್ ಮೈದಾನದಲ್ಲಿ ರನ್​ರೌದ್ರಾವತಾರ ತಾಳಿದ್ರು. ವೀರ ಕನ್ನಡಿಗ ರಾಹುಲ್ ಮಿಂಚಿನ ರನ್​ಬೇಟೆ ಯಾಡಿದ್ರು. ಕೆರಿಬಿಯನ್ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಿದ ಕನ್ನಡಿಗ ರಾಹುಲ್ ತಮ್ಮ ಕೆಚ್ಚೆದೆಯ ಬ್ಯಾಟಿಂಗ್​ನಿಂದ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ರು. ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಭರ್ಜರಿ ಜೊತೆಯಾಟವಕ್ಕೆ ವಿಂಡೀಸ್ ಬೆಚ್ಚಿಬಿದ್ದಿತ್ತು. ಮೊದಲ ಪಂದ್ಯದಲ್ಲಿ ಕೊಹ್ಲಿ ಗ್ಯಾಂಗ್ ಮೇಲೆ ಸವಾರಿ ಮಾಡಿದ್ದ ಪೊಲಾರ್ಡ್ ಪಡೆ ವೈಜಾಗ್​ನಲ್ಲಿ ಈ ಜೋಡಿ ಆರ್ಭಟಕ್ಕೆ ಚಿಂದಿ ಆಗೋಯ್ತು.

ಒಂದೇ ಓವರ್‌ನಲ್ಲಿ ಐಯ್ಯರ್ 31.. ರಿಷಬ್ ಪಂತ್ 24ರನ್: ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಬಳಿಕ ಮಿಡಲ್ ಆರ್ಡರ್​ನಲ್ಲೂ ಭಾರತ ಜಬರ್ದಸ್ತ್ ಬ್ಯಾಟಿಂಗ್ ಮಾಡ್ತು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಶ್ರೇಯಸ್ ಐಯ್ಯರ್ ಮತ್ತು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರಿಷಬ್ ಪಂತ್ ಬ್ಯಾಟಿಂಗ್​ನಲ್ಲಿ ಪರಾಕ್ರಮ ತೋರಿದ್ರು. ಒಂದೇ ಓವರ್​ನಲ್ಲಿ ಶ್ರೇಯಸ್ ಐಯ್ಯರ್ 31ರನ್​ಗಳಿಸಿದ್ರೆ, ರಿಷಬ್ ಪಂತ್ ಒಂದೇ ಓವರ್​ನಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ 24ರನ್​ಗಳನ್ನ ಗಳಿಸಿ ಮಿಂಚಿದ್ರು.

ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದಿದ್ದ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ಬಿಟ್ರೆ, ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಈ ಮೂಲಕ ಟೀಮ್ ಇಂಡಿಯಾ ನಿಗಧಿತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387ರನ್​ಗಳ ಬಿಗ್ ಸ್ಕೋರ್​ಅನ್ನ ಕಲೆಹಾಕುತ್ತೆ.

ಟೀಮ್ ಇಂಡಿಯಾ ನೀಡಿದ್ದ 388ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಿಂದ ಹೊಡಿ ಬಡಿ ಆಟಕ್ಕೆ ಮುಂದಾಗುತ್ತೆ. ಶಾಯ್ ಹೋಪ್ ಮತ್ತು ನಿಕೋಲಸ್ ಪೂರನ್ ರನ್​ಮಳೆ ಹರಿಸಿದ್ರು. ಹೋಪ್ 78ರನ್​ಗಳಿಸಿದ್ರೆ, ಪೂರನ್ 75ರನ್​ಗಳಿಸಿದ್ರು. ಇನ್ನು ಕಿಮೋ ಪೌಲ್ 46ರನ್ ಗಳಿಸಿದ್ದು ಬಿಟ್ರೆ, ಉಳಿದೆಲ್ಲಾ ವಿಂಡೀಸ್ ಬ್ಯಾಟ್ಸ್​ಮನ್​ಗಳು ಭಾರತೀಯರ ಬೌಲರ್​ಗಳ ದಾಳಿಗೆ ನೆಲಕಚ್ಚಿಬಿಡ್ತಾರೆ.

ಹ್ಯಾಟ್ರಿಕ್ ಪಡೆದ ಕುಲ್‌ದೀಪ್.. ವೈಜಾಗ್​ನಲ್ಲಿ ಕಮಾಲ್! ವೈಜಾಗ್ ಏಕದಿನ ಪಂದ್ಯದಲ್ಲಿ ಚೈನಾಮೆನ್ ಕುಲ್​ದೀಪ್ ಹ್ಯಾಟ್ರಿಕ್ ಪಡೆದು ಮಿಂಚಿದ್ರು. ಶಾಯ್ ಹೋಪ್, ಜೇಸನ್ ಹೋಲ್ಡರ್ ಮತ್ತು ಜೋಸೆಫ್ ವಿಕೆಟ್ ಪಡೆದ ಕುಲ್​ದೀಪ್ ವೈಜಾಗ್ ಮೈದಾನದಲ್ಲಿ ಜಾದೂ ಮಾಡ್ತಾರೆ. ಇನ್ನುಳಿದಂತೆ ಮೊಹಮ್ಮದ್ ಶಮಿ 3 ವಿಕೆಟ್ ಪಡೆದ್ರೆ, ರವೀಂದ್ರ ಜಡೇಜಾ 2 ಮತ್ತು ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಪಡೆದು ಸಂಭ್ರಮಿಸಿದ್ರು. ಈ ಮೂಲಕ ವೆಸ್ಟ್ ಇಂಡೀಸ್ 43.3 ಓವರ್​ನಲ್ಲಿ ತನ್ನೆಲ್ಲಾ ವಿಕೆಟ್​ಗಳನ್ನ ಕಳೆದುಕೊಂಡು 280ರನ್​ಗೆ ಖೇಲ್ ಖತಂ ಆಗಿಬಿಡುತ್ತೆ.

ಸೋಲಿನ ಸೇಡು.. 107ರನ್‌ಗಳಿಂದ ಗೆದ್ದು ಬೀಗಿದ ಇಂಡಿಯಾ! ವೈಜಾಗ್ ಪಂದ್ಯದಲ್ಲಿ ಟೀಮ್ ಇಂಡಿಯಾ 107ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈ ಪಂದ್ಯದಲ್ಲಾದ ಸೋಲಿಗೆ ವಿಂಡೀಸ್​ಗೆ ಭರ್ಜರಿ ತಿರುಗೇಟು ನೀಡಿರುವ ಕೊಹ್ಲಿ ಗ್ಯಾಂಗ್ ವಿಜಯೋತ್ಸವನ್ನ ಆಚರಿಸಿದೆ.

Published On - 9:40 am, Thu, 19 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್