ಕೊಹ್ಲಿ ಕೋಪಕ್ಕೆ ಕಾರಣವಾಯ್ತು ಚೆನ್ನೈ ಏಕದಿನ ಪಂದ್ಯ!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಕಂಡಿದೆ. ಶಿಮ್ರಾನ್ ಹೆಟ್ಮೇರ್ ಹಾಗೂ ಶಾಯ್ ಹೋಪ್ ಆರ್ಭಟಕ್ಕೆ ಬ್ಲೂಬಾಯ್ಸ್ ಸೋತು ಶರಣಾಗಿದ್ದಾರೆ. ಕುತೂಹಲದ ವಿಷ್ಯ ಅಂದ್ರೆ, ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯ, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಕ್ಯಾಪ್ಟನ್ ಕೊಹ್ಲಿ ಕಿಡಿಕಿಡಿ ಕೆಂಡಕಾರುವಂತೆ ಮಾಡಿದೆ. 48ನೇ ಓವರ್ನಲ್ಲಿ ವಿವಾದ..? ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ತಿಣುಕಾಡುತ್ತಲೇ ರನ್ ಕಲೆಹಾಕ್ತಿತ್ತು. ಇನ್ನೇನು ಭಾರತ ಇನ್ನಿಂಗ್ಸ್ ಅಂತ್ಯಗೊಳ್ಳುತ್ತೆ ಅನ್ನೋವಾಗ, ಚೆಪಾಕ್ […]
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಕಂಡಿದೆ. ಶಿಮ್ರಾನ್ ಹೆಟ್ಮೇರ್ ಹಾಗೂ ಶಾಯ್ ಹೋಪ್ ಆರ್ಭಟಕ್ಕೆ ಬ್ಲೂಬಾಯ್ಸ್ ಸೋತು ಶರಣಾಗಿದ್ದಾರೆ. ಕುತೂಹಲದ ವಿಷ್ಯ ಅಂದ್ರೆ, ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯ, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಕ್ಯಾಪ್ಟನ್ ಕೊಹ್ಲಿ ಕಿಡಿಕಿಡಿ ಕೆಂಡಕಾರುವಂತೆ ಮಾಡಿದೆ.
48ನೇ ಓವರ್ನಲ್ಲಿ ವಿವಾದ..? ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ತಿಣುಕಾಡುತ್ತಲೇ ರನ್ ಕಲೆಹಾಕ್ತಿತ್ತು. ಇನ್ನೇನು ಭಾರತ ಇನ್ನಿಂಗ್ಸ್ ಅಂತ್ಯಗೊಳ್ಳುತ್ತೆ ಅನ್ನೋವಾಗ, ಚೆಪಾಕ್ ಅಂಗಳದಲ್ಲಿ ಹೈಡ್ರಾಮಾವೇ ನಡೆದುಹೋಯ್ತು. 48ನೇ ಓವರ್ನ ಮೂರನೇ ಎಸೆತದಲ್ಲಿ ರವೀಂದ್ರ ಜಡೇಜಾ, ಶಾರ್ಟ್ ಲೆಗ್ನತ್ತ ಡ್ರೈವ್ ಮಾಡಿ ಸಿಂಗಲ್ ರನ್ ಕದಿಯೋ ಪ್ರಯತ್ನ ಮಾಡ್ತಾರೆ. ಅಲ್ಲೇ ಇದ್ದ ರೋಸ್ಟನ್ ಚೇಸ್ ಡೈರೆಕ್ಟ್ ಮಾಡಿ, ಔಟ್ಗೆ ಮನವಿ ಮಾಡ್ತಾರೆ. ಆದ್ರೆ, ಜಡೇಜಾ ಕ್ರೀಸ್ ತಲುಪದೇ ಇದ್ರೂ, ಅಂಪೈರ್ ನಾಟೌಟ್ ಅಂತ ತೀರ್ಪು ನೀಡ್ತಾರೆ.
ಈ ವೇಳೆ ವೆಸ್ಟ್ ಇಂಡೀಸ್ ತಂಡ ಡಿಆರ್ಎಸ್ ಕೂಡ ತೆಗೆದುಕೊಂಡಿರೋದಿಲ್ಲ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಇದಾಗಿ ಕೆಲ ಸೆಕೆಂಡ್ಗಳಲ್ಲೇ ಜಡೇಜಾ ಔಟಾ ಅಥವಾ ನಾಟೌಟಾ ಅನ್ನೋದು, ಟಿವಿ ಸ್ಕ್ರೀನ್ನಲ್ಲಿ ರಿಪ್ಲೆ ಆಗುತ್ತೆ. ಅಸಲಿಗೆ ಜಡೇಜಾ ರನ್ಔಟ್ ಆಗಿರೋದು ಪಕ್ಕಾ ಆಗುತ್ತೆ. ಆಗ ಎಚ್ಚೆತ್ತುಕೊಂಡ ಅಂಪೈರ್ ಶಾನ್ ಜಾರ್ಜ್, ಥರ್ಡ್ ಅಂಪೈರ್ಗೆ ಮನವಿ ಮಾಡ್ತಾರೆ. ಇದೇ ಕೊಹ್ಲಿ ಕೋಪತಾಪಗೊಳ್ಳುವಂತೆ ಮಾಡೋದು.
ಮೈದಾನದಲ್ಲೇ ಅಸಮಾಧಾನ ಹೊರಹಾಕಿದ ವಿರಾಟ್! ರವೀಂದ್ರ ಜಡೇಜಾ ರನೌಟ್ ವಿಷ್ಯ ಅಂದ್ರೆ, ಅಂಪೈರ್ ಶಾನ್ ಜಾರ್ಜ್ ತೆಗೆದುಕೊಂಡ ನಿರ್ಧಾರ, ನಾಯಕ ಕೊಹ್ಲಿಯನ್ನ ಕೆರಳಿ ಕೆಂಡಾಮಂಡಲವಾಗುತ್ತೆ ಮಾಡ್ತು. ಪಂದ್ಯ ವೀಕ್ಷಣೆ ಮಾಡ್ತಿದ್ದ ವಿರಾಟ್, ಅಂಪೈರ್ ಶಾನ್ ಜಾರ್ಜ್ ಥರ್ಡ್ ಅಂಪೈರ್ಗೆ ಮನವಿ ಮಾಡ್ತಿದ್ದಂತೆ ಕೊಹ್ಲಿ, ಆನ್ಫೀಲ್ಡ್ನತ್ತ ಹೆಜ್ಜೆಹಾಕಿದ್ರು. ಬೌಂಡರಿ ಗೆರೆಯಲ್ಲೇ ನಿಂತು ಆಕ್ರೋಶವ್ಯಕ್ತಪಡಿಸಿದ್ರು.
ಕೋಪದಿಂದ ಉತ್ತರಿಸಿದ ವಿರಾಟ್: ಬೌಂಡರಿಲೈನ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕುರಿತು ಕಾಮೆಂಟೇಟರ್ ಹರ್ಷ ಬೋಗ್ಲೆ ಕೇಳಿದಾಗ, ವಿರಾಟ್ ಅಂಪೈರ್ ವಿರುದ್ಧ ಕೋಪದಿಂದ ಉತ್ತರಿಸಿದ್ರು. ಫೀಲ್ಡರ್ ಔಟ್ ಕೇಳಿದಾಗ ಅಂಪೈರ್ ನಾಟೌಟ್ ಎಂದು ತೀರ್ಪು ನೀಡುತ್ತಾರೆ. ಅಲ್ಲಿಗೆ ಫೀಲ್ಡರ್ ಮಾಡಿದ ಮನವಿ ವಜಾಗೊಳ್ಳುತ್ತೆ. ಆದ್ರೆ ಅದುಬಿಟ್ಟು ಹೊರಗೆ ಕುಳಿತು ಪಂದ್ಯ ವೀಕ್ಷಣೆ ಮಾಡೋ ವ್ಯಕ್ತಿಗಳು ಪಂದ್ಯದ ಕುರಿತು ನಿರ್ಧಾರ ಮಾಡುವಂತಾಗಬಾರದು ಅಂತ ಕೊಹ್ಲಿ ಹೇಳಿದ್ರು.
ಕ್ಲಾಸ್ ತೆಗೆದುಕೊಂಡ ಕೊಹ್ಲಿ: ಇಷ್ಟೆ ಅಲ್ಲ, ಅಂಪೈರ್ ಹಾಗೂ ಮ್ಯಾಚ್ ರೆಫ್ರಿಗಳಿಗೂ ಕೊಹ್ಲಿ ಸರಿಯಾಗೇ ಕ್ಲಾಸ್ ತೆಗೆದುಕೊಂಡ್ರು. ಕ್ರಿಕೆಟ್ನಲ್ಲಿ ನಾನು ಈ ರೀತಿಯ ನಿಯಮಗಳನ್ನ ಎಲ್ಲೂ ನೋಡಿಲ್ಲ ಅಂತ ಅಂಪೈರ್ ಜಾರ್ಜ್ಗೆ ಪಂಚ್ ಕೊಟ್ರು. ನಿಯಮಗಳು ಎಲ್ಲಿವೆ? ಗೆರೆಯನ್ನ ಎಲ್ಲಿ ಎಳೆಯಲಾಗುತ್ತೆ ಅನ್ನೋದು ನನಗೆ ತಿಳಿದಿಲ್ಲ. ಅಂಪೈರ್ಗಳು ಮತ್ತು ಮ್ಯಾಚ್ ರೆಫ್ರಿಗಳು ಇಂತಹ ವಿಚಾರಗಳನ್ನ ಸೂಕ್ಷ್ಮವಾಗಿ ಗಮನಿಸಬೇಕು ಅಂತ ಮನವಿ ಮಾಡಿದ್ರು.
ದಕ್ಷಿಣ ಆಫ್ರಿಕಾದ ಅಂಪೈರ್ ಶಾನ್ ಜಾರ್ಜ್ ಮಾಡಿದ ಮಿಸ್ಟೇಕ್ನಿಂದಾಗಿ ಕೊಹ್ಲಿ ಕೋಪಗೊಂಡಿರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡ್ತಿದೆ. ಮೈದಾನದಲ್ಲಿ ಎಚ್ಚರವಾಗಿರಬೇಕಿದ್ದ ಅಂಪೈರ್ ಯಾಮಾರಿರೋದು ನಿಜಕ್ಕೂ ವಿಪರ್ಯಾಸ.
Published On - 4:44 pm, Tue, 17 December 19