ಸತತ 4ನೇ ಬಾರಿಗೂ ಕ್ಯಾಲೆಂಡರ್ ವರ್ಷದಲ್ಲಿ ಕೊಹ್ಲಿಯೇ ಕಿಂಗ್!

ವಿರಾಟ್ ಕೊಹ್ಲಿ ಐಸಿಸಿಯ ಕ್ಯಾಲೆಂಡರ್ ವರ್ಷದಲ್ಲಿ (2016, 2017 ಮತ್ತು 2018) ಸತತ ಮೂರು ವರ್ಷ ಅತ್ಯಧಿಕ ರನ್​ ಗಳಿಸಿದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಅಂದ್ರೆ ರನ್ ​ಗಳಿಕೆಯಲ್ಲೂ ಅಪರೂಪದ ಹ್ಯಾಟ್ರಿಕ್ ಸಾಧನೆ ಮಾಡಿ ಕೊಹ್ಲಿ, ಕಿಂಗ್ ಎನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ, ಕೊಹ್ಲಿಗಿಂತ ಮುಂದಿದ್ರು. ಆದ್ರೆ ಅಂತಿಮ ಪಂದ್ಯದಲ್ಲಿ 85 ರನ್​ಗಳಿಸಿದ ವಿರಾಟ್, ರೋಹಿತ್ ಶರ್ಮಾರನ್ನೇ ಹಿಂದಿಕ್ಕಿ ಕಿಂಗ್ ಆಗಿ ಹೊರ ಹೊಮ್ಮಿದ್ದಾರೆ. ಸತತ 4ನೇ ಬಾರಿಗೆ […]

ಸತತ 4ನೇ ಬಾರಿಗೂ ಕ್ಯಾಲೆಂಡರ್ ವರ್ಷದಲ್ಲಿ ಕೊಹ್ಲಿಯೇ ಕಿಂಗ್!
ಇಂಗ್ಲೆಂಡ್​ ವಿರುದ್ಧ ಕಿಂಗ್​ ಕೊಹ್ಲಿ, ಸುರೇಶ್ ರೈನಾ ಮಾಡಿರುವ ವಿಶಿಷ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ 30 ಪಂದ್ಯಗಳಲ್ಲಿ ಸರೇಶ್​ ರೈನಾ 1178 ರನ್ ಗಳಿಸಿದ್ದಾರೆ. ನಾಯಕ ಕೊಹ್ಲಿ ಇನ್ನೂ ಕೇವಲ 39 ರನ್​ ಗಳಿಸಿದರೆ, ರೈನಾ ಅವರ ದಾಖಲೆಯನ್ನು ಸಮಗೊಳಿಸಲಿದ್ದಾರೆ. ಈ ಸಾಧನೆ ಮಾಡುವ ಮೂಲಕ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ನಾಲ್ಕನೇ ಅತ್ಯಂತ ಯಶಸ್ವಿ ಭಾರತೀಯ ಬ್ಯಾಟ್ಸ್‌ಮನ್ ಆಗುವ ಅವಕಾಶವನ್ನು ಹೊಂದಿದ್ದಾರೆ.
Follow us
ಸಾಧು ಶ್ರೀನಾಥ್​
|

Updated on:Dec 24, 2019 | 2:00 PM

ವಿರಾಟ್ ಕೊಹ್ಲಿ ಐಸಿಸಿಯ ಕ್ಯಾಲೆಂಡರ್ ವರ್ಷದಲ್ಲಿ (2016, 2017 ಮತ್ತು 2018) ಸತತ ಮೂರು ವರ್ಷ ಅತ್ಯಧಿಕ ರನ್​ ಗಳಿಸಿದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಅಂದ್ರೆ ರನ್ ​ಗಳಿಕೆಯಲ್ಲೂ ಅಪರೂಪದ ಹ್ಯಾಟ್ರಿಕ್ ಸಾಧನೆ ಮಾಡಿ ಕೊಹ್ಲಿ, ಕಿಂಗ್ ಎನಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ, ಕೊಹ್ಲಿಗಿಂತ ಮುಂದಿದ್ರು. ಆದ್ರೆ ಅಂತಿಮ ಪಂದ್ಯದಲ್ಲಿ 85 ರನ್​ಗಳಿಸಿದ ವಿರಾಟ್, ರೋಹಿತ್ ಶರ್ಮಾರನ್ನೇ ಹಿಂದಿಕ್ಕಿ ಕಿಂಗ್ ಆಗಿ ಹೊರ ಹೊಮ್ಮಿದ್ದಾರೆ.

ಸತತ 4ನೇ ಬಾರಿಗೆ ಕ್ಯಾಲೆಂಡರ್ ವರ್ಷದಲ್ಲಿ ಕೊಹ್ಲಿಯೇ ಕಿಂಗ್! 2016ರಿಂದ ಕ್ಯಾಲೆಂಡರ್ ವರ್ಷದಲ್ಲಿ ಸಾಮ್ರಾಟನಾಗಿ ಮೆರೆದಾಡುತ್ತಿರೋ ವಿರಾಟ್, ಈ ವರ್ಷವೂ ಕ್ಯಾಲೆಂಡರ್ ಇಯರ್​ನಲ್ಲಿ ಕಿಂಗ್ ಆಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ ರನ್​ ಗಳಿಕೆಯಲ್ಲಿ ವಿರಾಟ್ ನನ್ನನ್ನ ಮಣಿಸುವವರೇ ಇಲ್ಲ ಅನ್ನೋದನ್ನ ಈ ವರ್ಷವೂ ಪ್ರೂವ್ ಮಾಡಿದ್ದಾರೆ.

2019ರಲ್ಲಿ ಕೊಹ್ಲಿ ಸಾಧನೆ: ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಸೇರಿದಂತೆ ಮೂರು ಫಾರ್ಮೆಟ್​ನಲ್ಲೂ 44 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 2,455 ರನ್​ ಗಳಿಸಿ, ಅತ್ಯಧಿಕ ರನ್​ ಗಳಿಸಿದ ಬ್ಯಾಟ್ಸ್​ಮನ್ ಆಗಿ ಹೊರ ಹೊಮ್ಮಿದ್ದಾರೆ.

2019ರಲ್ಲಿ ರೋಹಿತ್ ಸಾಧನೆ: ಅದೇ ರೋಹಿತ್ ಶರ್ಮಾ ಈ ಬಾರಿಯ ಕ್ಯಾಲೆಂಡರ್ ವರ್ಷದಲ್ಲಿ ಮೂರು ಫಾರ್ಮೆಟ್​ನಲ್ಲಿ 47 ಪಂದ್ಯಗಳನ್ನಾಡಿದ್ದು 2442 ರನ್​ಗಳಿಸಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.

ದಶಕದ ಸಾಧನೆಯಲ್ಲೂ ವಿರಾಟ್ ಸರ್ವಶ್ರೇಷ್ಠ! ಇನ್ನು 2010ರಿಂದ 2020ರ ವರೆಗೆ ಅಂದ್ರೆ ಒಂದು ದಶಕದಲ್ಲಿ ರನ್ ​ಗಳಿಕೆಯ ವಿಚಾರದಲ್ಲಿ ವಿರಾಟ್ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ. ಈ ಅವಧಿಯಲ್ಲಿ ವಿರಾಟ್ 20 ಸಾವಿರಕ್ಕೂ ಅಧಿಕ ರನ್​ಗಳಿಸಿದ್ದಾರೆ. ಹಾಗೇ ವೇಗವಾಗಿ 20 ಸಾವಿರ ರನ್​ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಅನ್ನೋ ಹಿರಿಮೆಯನ್ನ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಐಸಿಸಿ ಱಂಕಿಂಗ್​ನಲ್ಲೂ ಕೊಹ್ಲಿ ನಂ.1: ಇದರ ಜೊತೆಯಲ್ಲೇ ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್​ನಲ್ಲಿ ಕ್ಯಾಪ್ಟನ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಅಗ್ರಸ್ಥಾನವನ್ನೇ ಅಲಂಕರಿಸಿದ್ದಾರೆ. ಆ ಮೂಲಕ ಐಸಿಸಿ ರ್ಯಾಂಕಿಂಗ್​ನಲ್ಲೂ ವಿರಾಟ್ ನಂಬರ್ ಒನ್ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ.

2016ರಿಂದ ಐಸಿಸಿ ಕ್ಯಾಲೆಂಡರ್ ಇಯರ್ ಮತ್ತು ಐಸಿಸಿ ರ್ಯಾಂಕಿಂಗ್​ನಲ್ಲಿ ವಿರಾಟ್ ಸ್ಥಿರತೆಯನ್ನ ಕಾಪಾಡಿಕೊಂಡು ಬರ್ತಿದ್ದಾರೆ. ಆ ಮೂಲಕ ಮಾಡ್ರನ್ ಕ್ರಿಕೆಟ್​ಗೆ ನಾನೇ ಕಿಂಗ್ ಅನ್ನೋದನ್ನ ವಿರಾಟ್ ಕ್ರಿಕೆಟ್ ಜಗತ್ತಿಗೆ ಸಾರಿ ಹೇಳಿದ್ದಾರೆ.

Published On - 1:50 pm, Tue, 24 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್