ಖೋ-ಖೋ ವಿಶ್ವಕಪ್ ಗೆದ್ದರೂ ಭಾರತ ತಂಡಕ್ಕೆ ನಯಾ ಪೈಸೆ ಸಿಕ್ಕಿಲ್ಲ..!

Kho Kho World Cup 2025: ಚೊಚ್ಚಲ ಖೋ-ಖೋ ವಿಶ್ವಕಪ್ ಭಾರತದ ಪಾಲಿಗೆ ಬಹಳ ವಿಶೇಷವಾಗಿತ್ತು. ತವರಿನಲ್ಲಿ ನಡೆದ ಮೊದಲ ವಿಶ್ವಕಪ್​ನಲ್ಲೇ ಭಾರತೀಯರು ಚಾಂಪಿಯನ್ ಪಟ್ಟ ಅಲಂಕರಿಸಿದರು. ಆದರೆ ಈ ಐತಿಹಾಸಿಕ ಪ್ರದರ್ಶನದ ಹೊರತಾಗಿಯೂ ಯಾವುದೇ ತಂಡವು ಬಹುಮಾನದ ಹಣವನ್ನು ಸ್ವೀಕರಿಸಲಿಲ್ಲ ಎಂಬುದು ವಿಶೇಷ.

ಖೋ-ಖೋ ವಿಶ್ವಕಪ್ ಗೆದ್ದರೂ ಭಾರತ ತಂಡಕ್ಕೆ ನಯಾ ಪೈಸೆ ಸಿಕ್ಕಿಲ್ಲ..!
Team India
Follow us
ಝಾಹಿರ್ ಯೂಸುಫ್
|

Updated on: Jan 21, 2025 | 10:20 AM

ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಖೋ- ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಂತಿಮ ಹಣಾಹಣಯಲ್ಲಿ ಭಾರತೀಯ ಪುರುಷರ ತಂಡ ನೇಪಾಳ ತಂಡವನ್ನು 54-36 ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರೆ, ಮಹಿಳೆಯರ ಫೈನಲ್​ನಲ್ಲಿ ಭಾರತ ಮಹಿಳಾ ತಂಡ ನೇಪಾಳ ತಂಡವನ್ನು 78-38 ಅಂಕಗಳಿಂದ ಮಣಿಸಿದೆ.

ಹೀಗೆ ಚೊಚ್ಚಲ ಖೋ- ಖೋ ವಿಶ್ವಕಪ್​ನಲ್ಲಿ ಭಾರತೀಯರು ಚಾಂಪಿಯನ್ ಪಟ್ಟದೊಂದಿಗೆ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಐತಿಹಾಸಿಕ ಸಾಧನೆಯ ಹೊರತಾಗಿಯೂ ಭಾರತೀಯ ಖೋ-ಖೋ ಪಟುಗಳಿಗೆ ನಗದು ಬಹುಮಾನ ಸಿಕ್ಕಿಲ್ಲ ಎಂಬುದೇ ಅಚ್ಚರಿ.

ಬಹುಮಾನ ಮೊತ್ತವಿಲ್ಲ:

ಖೋ-ಖೋ ವಿಶ್ವಕಪ್‌ನಲ್ಲಿ ಎರಡೂ ವಿಭಾಗಗಳಲ್ಲಿ ಅಜೇಯರಾಗಿ ಉಳಿದು ಪ್ರಶಸ್ತಿ ಗೆದ್ದುಕೊಂಡರೂ ಭಾರತೀಯರು ಬಹುಮಾನ ಮೊತ್ತ ಪಡೆದಿಲ್ಲ. ಇದಕ್ಕೆ ಮುಖ್ಯ ಕಾರಣ, ಆಯೋಜಕರ ನಿರ್ಧಾರ. ಈ ಟೂರ್ನಿಯ ಆರಂಭಕ್ಕೂ ಮುನ್ನವೇ ನಗದು ಬಹುಮಾನ ನೀಡುವುದಿಲ್ಲ ಎಂದು ನಿರ್ಧರಿಸಲಾಗಿತ್ತು. ಇದರಿಂದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದರೂ ಯಾವುದೇ ನಗದು ಬಹುಮಾನ ನೀಡಲಾಗಿಲ್ಲ.

ಇನ್ನು ಗೆದ್ದ ತಂಡಗಳಿಗೆ ಟ್ರೋಫಿಯನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೇ ತಂಡದಲ್ಲಿರುವ ಆಟಗಾರರಿಗೆ ಪದಕಗಳನ್ನು ಸಹ ನೀಡಲಾಯಿತು. ಇದೇ ವೇಳೆ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಬಹುಮಾನ ಮೊತ್ತ ನೀಡದಿರಲು ಕಾರಣವೇನು?

ಖೋ-ಖೋ ವಿಶ್ವಕಪ್​ಗೆ ಆಗಮಿಸುವ ಸಾಗರೋತ್ತರ ಆಟಗಾರರಿಗೆ ಉಂಟಾಗಬಹುದಾದ ತೆರಿಗೆ ಕಾನೂನುಗಳ ತೊಡಕುಗಳನ್ನು ತಪ್ಪಿಸಲು ಯಾವುದೇ ರೀತಿಯ ನಗದು ಬಹುಮಾನವನ್ನು ನೀಡದಿರಲು ನಿರ್ಧರಿಸಿದ್ದೇವೆ ಎಂದು ಖೋ-ಖೋ ವಿಶ್ವಕಪ್‌ ಆಯೋಜಕರು ಟೂರ್ನಿ ಆರಂಭಕ್ಕೂ ಮುನ್ನವೇ ತಿಳಿಸಿದ್ದರು. ಹೀಗಾಗಿ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಗಳಿಗೆ ನಗದು ಬಹುಮಾನ ನೀಡಲಾಗಿಲ್ಲ.

ಇದರ ಜೊತೆಗೆ ಈ ಕ್ರೀಡೆ ಆಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಾಯೋಜಕತ್ವ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಚೊಚ್ಚಲ ಟೂರ್ನಿಗೆ ಆರ್ಥಿಕ ಸಮಸ್ಯೆಗೆ ಎದುರಾಗಿದ್ದು, ಈ ಹಣಕಾಸಿನ ಸಮಸ್ಯೆಯನ್ನು ಸರಿ ಹೊಂದಿಸಲು ಮೊದಲೇ ಬಹುಮಾನ ಮೊತ್ತವನ್ನು ನೀಡದಿರಲು ನಿರ್ಧರಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಇದನ್ನೂ ಓದಿ: ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್

ಒಟ್ಟಿನಲ್ಲಿ 20 ತಂಡಗಳೊಡನೆ ನಡೆದ ಚೊಚ್ಚಲ ಖೋ-ಖೋ ವಿಶ್ವಕಪ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಖೋ-ಖೋ ಟೂರ್ನಿಗಳಿಗೆ ಉತ್ತಮ ಪ್ರಾಯೋಜಕತ್ವ ಸಿಗುವ ನಿರೀಕ್ಷೆಯಿದೆ.

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ