AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kylian Mbappe: ಕಿಲಿಯನ್ ಎಂಬಾಪ್ಪೆಗೆ 2,718 ಕೋಟಿ ರೂ. ಆಫರ್ ನೀಡಿದ ಸೌದಿ ಕ್ಲಬ್

Kylian Mbappe: ಈ ವರ್ಷದ ಸೀಸನ್​ನೊಂದಿಗೆ ಕಿಲಿಯನ್ ಎಂಬಾಪ್ಪೆ ಹಾಗೂ PSG ನಡುವಣ ಒಪ್ಪಂದ ಮುಗಿಯಲಿದೆ. ಆದರೆ ಇದಕ್ಕೂ ಮುನ್ನವೇ ಯುರೋಪ್​​ನ ಮತ್ತೊಂದು ಖ್ಯಾತ ಫುಟ್​​ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಎಂಬಾಪ್ಪೆಗೆ ತೆರೆ ಮರೆಯಲ್ಲಿ ಬಿಗ್ ಆಫರ್ ನೀಡಿದೆ.

Kylian Mbappe: ಕಿಲಿಯನ್ ಎಂಬಾಪ್ಪೆಗೆ 2,718 ಕೋಟಿ ರೂ. ಆಫರ್ ನೀಡಿದ ಸೌದಿ ಕ್ಲಬ್
Kylian Mbappe
TV9 Web
| Edited By: |

Updated on:Jul 25, 2023 | 3:00 PM

Share

ಫ್ರಾನ್ಸ್​ನ ಖ್ಯಾತ ಕಾಲ್ಚೆಂಡು ಚತುರ ಕಿಲಿಯನ್ ಎಂಬಾಪ್ಪೆ (Kylian Mbappe) ಹೊಸ ಕ್ಲಬ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಪ್ರಸ್ತುತ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಅವರನ್ನು ಟ್ರಾನ್ಸ್​ಫರ್​ ಸೇಲ್​ಗೆ ಇರಿಸಿದ್ದಾರೆ. ಇತ್ತ ಎಂಬಾಪ್ಪೆಯ ಹೆಸರು ಟ್ರಾನ್ಸ್​ಫರ್​ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಅತ್ತ ಸೌದಿ ಅರೇಬಿಯಾ ಖ್ಯಾತ ಫುಟ್​ಬಾಲ್ ಕ್ಲಬ್ ಅಲ್-ಹಿಲಾಲ್ ಬರೋಬ್ಬರಿ 300 ಮಿಲಿಯನ್ ಯೂರೋ ಬಿಡ್ ಸಲ್ಲಿಸಿದ್ದಾರೆ ವರದಿಯಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 2,718 ಕೋಟಿ ರೂ.

ಈ ಟ್ರಾನ್ಸ್​ಫರ್ ಡೀಲ್ ಯಶಸ್ವಿಯಾದರೆ ಫುಟ್​ಬಾಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ವರ್ಗಾವಣೆಗೊಂಡ ಆಟಗಾರ ಎಂಬ ವಿಶ್ವ ದಾಖಲೆ ಕಿಲಿಯನ್ ಎಂಬಾಪ್ಪೆ ಎಂಬಾಪ್ಪೆ ಪಾಲಾಗಲಿದೆ. ಇದಕ್ಕೂ ಮುನ್ನ ಬ್ರೆಝಿಲ್​ನ ನೇಮರ್ ಜೂನಿಯರ್ ದಾಖಲೆ ಮೊತ್ತಕ್ಕೆ ಟ್ರಾನ್ಸ್​ಫರ್ ಆಗಿದ್ದರು.

2017 ರಲ್ಲಿ ಬರ್ಸಿಲೋನಾ ಫುಟ್​ಬಾಲ್ ಕ್ಲಬ್ ನೇಮರ್ ಅವರನ್ನು 222 ಮಿಲಿಯನ್ ಯೂರೋಗೆ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್​ಗೆ ಟ್ರಾನ್ಸ್​ಫರ್ ಮಾಡಿದ್ದರು. ಇದೀಗ ಎಂಬಾಪ್ಪೆಗಾಗಿ ಅಲ್​ ಹಿಲಾಲ್ ಕ್ಲಬ್ 300 ಮಿಲಿಯನ್ ಯೂರೋಗೆ ಬಿಡ್ ಸಲ್ಲಿಸಿದ್ದು, ಈ ಡೀಲ್ ಸಕ್ಸಸ್ ಆದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.

PSG ಎಂಬಾಪ್ಪೆಯನ್ನು ಕೈ ಬಿಡುತ್ತಿರುವುದೇಕೆ?

ಈ ವರ್ಷದ ಸೀಸನ್​ನೊಂದಿಗೆ ಕಿಲಿಯನ್ ಎಂಬಾಪ್ಪೆ ಹಾಗೂ PSG ನಡುವಣ ಒಪ್ಪಂದ ಮುಗಿಯಲಿದೆ. ಆದರೆ ಇದಕ್ಕೂ ಮುನ್ನವೇ ಯುರೋಪ್​​ನ ಮತ್ತೊಂದು ಖ್ಯಾತ ಫುಟ್​​ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಎಂಬಾಪ್ಪೆಗೆ ತೆರೆ ಮರೆಯಲ್ಲಿ ಬಿಗ್ ಆಫರ್ ನೀಡಿದೆ ವರದಿಯಾಗಿದೆ. ಇದೇ ಕಾರಣದಿಂದಾಗಿ PSG ಜೊತೆಗಿನ ಒಪ್ಪಂದವನ್ನು ಮುಂದುವರಿಸಲು ಎಂಬಾಪ್ಪೆ ಆಸಕ್ತಿ ತೋರಿಸಿಲ್ಲ.

ಇತ್ತ ಎಂಬಾಪ್ಪೆ ಹಾಗೂ PSG ಜೊತೆಗಿನ ಒಪ್ಪಂದ ಇನ್ನೂ ಒಂದು ಸೀಸನ್​ವರೆಗೆ ಬಾಕಿ ಇದೆ. ಈ ಅವಧಿಯೊಳಗೆ ಯುವ ಆಟಗಾರನನ್ನು ಬೇರೊಂದು ಕ್ಲಬ್​ಗೆ ವರ್ಗಾವಣೆ ಮಾಡಲು PSG ತಂಡದ ಮಾಲೀಕರು ನಿರ್ಧರಿಸಿದ್ದಾರೆ. ಹೀಗಾಗಿ ಕೈಲಿಯನ್ ಎಂಬಾಪ್ಪೆಯನ್ನು ಟ್ರಾನ್ಸ್​ಫರ್​​ಗೆ ಇರಿಸಲಾಗಿದ್ದು, ಇದೀಗ ಫೆಂಚ್ ಆಟಗಾರನ ಖರೀದಿಗೆ ಸೌದಿಯ ಅಲ್ ಹಿಲಾಲ್ ಕ್ಲಬ್ ಮುಂದೆ ಬಂದಿದೆ. ಈ ಡೀಲ್​ ಯಶಸ್ವಿಯಾದರೆ ಕಿಲಿಯನ್ ಎಂಬಾಪ್ಪೆ ಒಂದು ವರ್ಷದವರೆಗೆ ಅಲ್ ಹಿಲಾಲ್ ಪರ ಕಣಕ್ಕಿಳಿಯಬಹುದು.

Published On - 2:48 pm, Tue, 25 July 23

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್