AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lionel Messi: TIME’s ವರ್ಷದ ಕ್ರೀಡಾಪಟು-​ಲಿಯೋನೆಲ್ ಮೆಸ್ಸಿ

TIME’s Athlete of the Year: ವರ್ಷದ ಕ್ರೀಡಾಪಟುಗಳ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್​ನ ಫುಟ್​ಬಾಲ್ ತಾರೆ ಕೈಲಿಯನ್ ಎಂಬಾಪ್ಪೆ ಮತ್ತು ಮ್ಯಾಂಚೆಸ್ಟರ್ ಸಿಟಿಯ ನಾರ್ವೇಜಿಯನ್ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಇದ್ದರು. ಹಾಗೆಯೇ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಮತ್ತು ಮೇಜರ್ ಲೀಗ್ ಬೇಸ್‌ಬಾಲ್ ತಾರೆ ಆರನ್ ಜಡ್ಜ್ ಕೂಡ ನಾಮನಿರ್ದೇಶನಗೊಂಡಿದ್ದರು.

Lionel Messi: TIME’s ವರ್ಷದ ಕ್ರೀಡಾಪಟು-​ಲಿಯೋನೆಲ್ ಮೆಸ್ಸಿ
Lionel Messi
TV9 Web
| Edited By: |

Updated on: Dec 05, 2023 | 10:51 PM

Share

ವಿಶ್ವದ ಖ್ಯಾತ ಕಾಲ್ಚೆಂಡು ಚತುರ ಲಿಯೋನೆಲ್ ಮೆಸ್ಸಿ  TIME ನಿಯತಕಾಲಿಕೆಯ ವರ್ಷದ ಕ್ರೀಡಾಪಟು ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷ ಎಂದರೆ  ಟೈಮ್​​ ಮ್ಯಾಗಝಿನ್​ನ ಈ ಗೌರವಕ್ಕೆ ಪಾತ್ರವಾದ ಮೊದಲ ಫುಟ್​ಬಾಲ್ ಆಟಗಾರ ಮೆಸ್ಸಿ. ಇದರೊಂದಿಗೆ ಅರ್ಜೇಂಟೀನಾ ತಾರೆ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ.

ಫಿಫಾ ವಿಶ್ವಕಪ್​ನಲ್ಲಿ ಅರ್ಜೆಂಟೀನಾವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಲಿಯೋನೆಲ್ ಮೆಸ್ಸಿ ಕೆಲ ದಿನಗಳ ಹಿಂದೆಯಷ್ಟೇ 8ನೇ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ವಾರಗಳ ಅಂತರದಲ್ಲಿ ಟೈಮ್ ಮ್ಯಾಗಝಿನ್​ನ ವರ್ಷದ ಅಥ್ಲೀಟ್ ಎಂದು ಹೆಸರಿಸಲ್ಪಟ್ಟ ಮೊದಲ ಫುಟ್ಬಾಲ್ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಸುದ್ದಿ ನಿಯತಕಾಲಿಕೆ ‘ಟೈಮ್’ ವರ್ಷದ ಕ್ರೀಡಾಪಟುಗಳ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್​ನ ಫುಟ್​ಬಾಲ್ ತಾರೆ ಕೈಲಿಯನ್ ಎಂಬಾಪ್ಪೆ ಮತ್ತು ಮ್ಯಾಂಚೆಸ್ಟರ್ ಸಿಟಿಯ ನಾರ್ವೇಜಿಯನ್ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಇದ್ದರು.

ಹಾಗೆಯೇ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಮತ್ತು ಮೇಜರ್ ಲೀಗ್ ಬೇಸ್‌ಬಾಲ್ ತಾರೆ ಆರನ್ ಜಡ್ಜ್ ಕೂಡ ನಾಮನಿರ್ದೇಶನಗೊಂಡಿದ್ದರು. ಆದರೆ ಇವರೆಲ್ಲರನ್ನೂ ಹಿಂದಿಕ್ಕಿ ಲಿಯೋನೆಲ್ ಮೆಸ್ಸಿ ವರ್ಷದ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

ಲಿಯೋನೆಲ್ ಮೆಸ್ಸಿ ಗೆದ್ದ ಟ್ರೋಫಿಗಳು:

  • FIFA U20 ವಿಶ್ವಕಪ್ (2005)
  • ಒಲಿಂಪಿಕ್ಸ್ ಚಿನ್ನ (2008)
  • ಲಾ ಲಿಗಾ
  • ಕೋಪಾ ಡೆಲ್ ರೇ
  • UEFA ಚಾಂಪಿಯನ್ಸ್ ಲೀಗ್
  • UEFA ಸೂಪರ್ ಕಪ್
  • FIFA ಕ್ಲಬ್ ವಿಶ್ವಕಪ್
  • ಕೋಪಾ ಅಮೇರಿಕಾ
  • UEFA ಕಪ್ ಆಫ್ ಚಾಂಪಿಯನ್ಸ್
  • FIFA ವಿಶ್ವಕಪ್
  • ಲಿಗ್ 1
  • ಲೀಗ್ಸ್ ಕಪ್

ಇದನ್ನೂ ಓದಿ: Lionel Messi: ವಿಶ್ವ ದಾಖಲೆ ಬರೆದ ಲಿಯೋನೆಲ್ ಮೆಸ್ಸಿ

ಮೆಸ್ಸಿಯ ವೈಯಕ್ತಿಕ ಪ್ರಶಸ್ತಿಗಳು:

  • ಬ್ಯಾಲನ್ ಡಿ’ಓರ್
  • FIFA ವರ್ಷದ ಆಟಗಾರ
  • ಅತ್ಯುತ್ತಮ FIFA ಪುರುಷ ಆಟಗಾರ
  • FIFA ವಿಶ್ವಕಪ್ ಗೋಲ್ಡನ್ ಬಾಲ್
  • FIFA ಕ್ಲಬ್ ವಿಶ್ವಕಪ್ ಗೋಲ್ಡನ್ ಬಾಲ್
  • ಕೋಪಾ ಅಮೆರಿಕದ ಅತ್ಯುತ್ತಮ ಆಟಗಾರ
  • UEFA ವರ್ಷದ ಆಟಗಾರ
Follow Us
TV9 Web
TV9 Web

TV9 Kannada

Read More
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು