AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಮ್ಯಾನೇಜರ್ ಹೇಳಿದ್ದೇನು?

ಟೀಮ್ ಇಂಡಿಯಾ ಮಾಜಿ ನಾಯಕ ಚಾಂಪಿಯ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಷ್ಟು ದಿನ ಏನಾಗುತ್ತೋ ಅಂತಾ ಚಿಂತೆಯಲ್ಲಿದ್ದ ಧೋನಿ ಅಭಿಮಾನಿಗಳು ಕಡೆಗೂ ಆ ಸಿಹಿ ಸುದ್ದಿ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲಿಗೆ ಧೋನಿ ಕ್ರಿಕೆಟ್ ಬದುಕು ಅಂತ್ಯವಾಯ್ತು ಅಂತಾ ಚರ್ಚೆ ಶುರುವಾಗಿತ್ತು. ಆದ್ರೆ ಐಪಿಎಲ್​ಗಾಗಿ ಮತ್ತೆ ಪ್ಯಾಡ್ ಕಟ್ಟಿದ ಮಹೇಂದ್ರ ಸಿಂಗ್ ಧೋನಿ, ಗ್ರೇಟ್ […]

ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಮ್ಯಾನೇಜರ್ ಹೇಳಿದ್ದೇನು?
ಆಯೇಷಾ ಬಾನು
| Edited By: |

Updated on:Jul 10, 2020 | 6:03 PM

Share

ಟೀಮ್ ಇಂಡಿಯಾ ಮಾಜಿ ನಾಯಕ ಚಾಂಪಿಯ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಷ್ಟು ದಿನ ಏನಾಗುತ್ತೋ ಅಂತಾ ಚಿಂತೆಯಲ್ಲಿದ್ದ ಧೋನಿ ಅಭಿಮಾನಿಗಳು ಕಡೆಗೂ ಆ ಸಿಹಿ ಸುದ್ದಿ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲಿಗೆ ಧೋನಿ ಕ್ರಿಕೆಟ್ ಬದುಕು ಅಂತ್ಯವಾಯ್ತು ಅಂತಾ ಚರ್ಚೆ ಶುರುವಾಗಿತ್ತು. ಆದ್ರೆ ಐಪಿಎಲ್​ಗಾಗಿ ಮತ್ತೆ ಪ್ಯಾಡ್ ಕಟ್ಟಿದ ಮಹೇಂದ್ರ ಸಿಂಗ್ ಧೋನಿ, ಗ್ರೇಟ್ ಕಮ್​ಬ್ಯಾಕ್ ಮಾಡೋ ಸೂಚನೆ ನೀಡಿದ್ರು. ಆದ್ರೆ ಕೊರೊನಾದಿಂದಾಗಿ ಐಪಿಎಲ್​ಗೆ ಅನಿಶ್ಚಿತತೆಯ ಕಾರ್ಮೋಡ ಕವಿದ ಮೇಲೆ, ಧೋನಿ ಕ್ರಿಕೆಟ್ ಬದುಕೇ ಅಂತ್ಯವಾಗಿ ಹೋಯ್ತು ಅನ್ನುವಷ್ಟರ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಯ್ತು.

ಮತ್ತೊಂದೆಡೆ ಧೋನಿಯೂ ತಮ್ಮ ಫಾರ್ಮ್​ಹೌಸ್​ನಲ್ಲಿ ಕೃಷಿ ಚಟುವಟಿಕೆಯಲ್ಲಿ ಬ್ಯುಸಿಯಾಗೋ ಮೂಲಕ, ನಿವೃತ್ತಿಯಾಗ್ತಿದ್ದೀನಿ ಅನ್ನೋ ಚರ್ಚೆಗೆ ಪುಷ್ಟಿ ನೀಡಿದ್ರು. ಆದ್ರೀಗ ಧೋನಿ ಸದ್ಯ ಕ್ರಿಕೆಟ್​ನಿಂದ ನಿವೃತ್ತಿಯಾಗೋದಿಲ್ಲ ಅನ್ನೋ ಸಿಹಿ ಸುದ್ದಿ ಹೊರಬಿದ್ದಿದೆ. ಸ್ವತಃ ಮಹೇಂದ್ರ ಸಿಂಗ್ ಧೋನಿ ಮ್ಯಾನೇಜರ್ ಮಿಹಿರ್ ದಿವಾಕರ್ ಈ ಸಂತಸದ ಸುದ್ದಿಯನ್ನ ಬಾಯ್ಬಿಟ್ಟಿದ್ದಾರೆ.

ಕ್ರಿಕೆಟ್​ನಿಂದ ನಿವೃತ್ತಿಯಾಗುವ ಬಗ್ಗೆ ಯಾವುದೇ ಯೋಚನೆ ಇಲ್ಲ: ‘ನಾವು ಸ್ನೇಹಿತರಾಗಿ ಯಾವತ್ತೂ ಕ್ರಿಕೆಟ್ ಬಗ್ಗೆ ಮಾತನಾಡಲ್ಲ. ಆದ್ರೆ ಧೋನಿಗೆ ಸದ್ಯಕ್ಕೆ ಕ್ರಿಕೆಟ್​ನಿಂದ ನಿವೃತ್ತಿಯಾಗುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಈ ವರ್ಷ ಐಪಿಎಲ್ ಆಡಲು ಧೋನಿ ತುಂಬಾನೇ ಉತ್ಸುಕರಾಗಿದ್ರು. ಐಪಿಎಲ್​ನಲ್ಲಿ ಮಿಂಚೋದಕ್ಕೆ, ತಿಂಗಳಿಗೂ ಮೊದಲೇ ಚೆನ್ನೈಗೆ ತೆರಳಿ, ಪ್ರಾಕ್ಟಿಸ್​ನಲ್ಲಿ ತೊಡಗಿದ್ದರು.’ – ಮಿಹಿರ್ ದಿವಾಕರ್, ಧೋನಿ ಮ್ಯಾನೇಜರ್

ಸದ್ಯ ಮಹೇಂದ್ರ ಸಿಂಗ್ ಧೋನಿ ತಮ್ಮ ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ರೂ ಧೋನಿ ತಮ್ಮ ಫಿಟ್ನೆಸ್​ನ ಅದ್ಭುತವಾಗಿ ಕಾಯ್ದುಕೊಳ್ತಿದ್ದಾರೆ. ಧೋನಿ ಫೀಟ್ನೆಸ್ ಹೇಗಿದೆ ಅನ್ನೋದ್ರ ಬಗ್ಗೆಯೂ ಮ್ಯಾನೇಜರ್ ದಿವಾಕರ್ ಬಾಯ್ಬಿಟ್ಟಿದ್ದಾರೆ.

‘ಧೋನಿ ತೋಟದ ಮನೆಯಲ್ಲಿದ್ರೂ ತಮ್ಮ ಫಿಟ್ನೆಸ್ ಕಾಪಾಡಿಕೊಳ್ತಿದ್ದಾರೆ. ಹಾಗೇ ಲಾಕ್​ಡೌನ್ ಮುಗಿದ ಬಳಿಕ ಅಭ್ಯಾಸವನ್ನ ಪ್ರಾರಂಭಿಸುತ್ತಾರೆ. ಎಲ್ಲವೂ ಪರಿಸ್ಥಿತಿ ಎಷ್ಟು ಬೇಗ ಸಹಜ ಸ್ಥಿತಿಗೆ ಮರಳುತ್ತೆ ಅನ್ನೊದ್ರ ಮೇಲೆ ನಿಂತಿದೆ. – ಮಿಹಿರ್ ದಿವಾಕರ್, ಧೋನಿ ಮ್ಯಾನೇಜರ್

ಒಟ್ನಲ್ಲಿ ಮ್ಯಾನೇಜರ್ ಮಿಹಿರ್ ದಿವಾಕರ್ ಆಡಿದ ಮಾತುಗಳು, ಧೋನಿ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ನೀಡಿದೆ. ಮತ್ತೊಮ್ಮೆ ಮಹೇಂದ್ರನ ಆಟವನ್ನ ಕಣ್ತುಂಬಿಸಿಕೊಳ್ಳಬೇಕು ಅಂತಾ ಕಾದು ಕುಳಿತಿದ್ದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Published On - 3:39 pm, Fri, 10 July 20

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ