AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಹಮ್ಮದ್ ಶಮಿ ಸೇರಿದಂತೆ 26 ಅಥ್ಲೀಟ್‌ಗಳಿಗೆ ಅರ್ಜುನ ಪ್ರಶಸ್ತಿ; ಇಬ್ಬರು ಆಟಗಾರರಿಗೆ ಖೇಲ್ ರತ್ನ

National Sports Awards 2023: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 2023 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅದರಂತೆ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಸೇರಿದಂತೆ 26 ಅಥ್ಲೀಟ್‌ಗಳು ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೊಹಮ್ಮದ್ ಶಮಿ ಸೇರಿದಂತೆ 26 ಅಥ್ಲೀಟ್‌ಗಳಿಗೆ ಅರ್ಜುನ ಪ್ರಶಸ್ತಿ; ಇಬ್ಬರು ಆಟಗಾರರಿಗೆ ಖೇಲ್ ರತ್ನ
ಮೊಹಮ್ಮದ್ ಶಮಿ
ಪೃಥ್ವಿಶಂಕರ
|

Updated on:Dec 20, 2023 | 5:56 PM

Share

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು (Sports Ministry) 2023 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅದರಂತೆ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಸೇರಿದಂತೆ 26 ಅಥ್ಲೀಟ್‌ಗಳು ಅರ್ಜುನ ಪ್ರಶಸ್ತಿಗೆ (Arjuna award) ಭಾಜನರಾಗಿದ್ದಾರೆ. ಹಾಗೆಯೇ ಬ್ಯಾಡ್ಮಿಂಟನ್ ಸ್ಟಾರ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ (Satwik Sairaj Rankireddy and Chirag Shetty) ಅವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna) ಪ್ರಶಸ್ತಿ ಒಲಿದಿದೆ. ಇಷ್ಟು ಕ್ರೀಡಾಪಟುಗಳಿಗೆ 2024 ರ ಜನವರಿ 9 ರಂದು ನಡೆಯಲ್ಲಿರುವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಅರ್ಜುನ ಮತ್ತು ಖೇಲರತ್ನ ಪ್ರಶಸ್ತಿಗೆ 19 ವಿವಿಧ ಕ್ರೀಡೆಗಳ 28 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಮೊಹಮ್ಮದ್ ಶಮಿ ಸೇರಿದಂತೆ ಒಟ್ಟು 26 ಆಟಗಾರರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದು ವಿವಿಧ ಕ್ರೀಡೆಗಳ ಪ್ರಮುಖ ಆಟಗಾರರನ್ನು ಒಳಗೊಂಡಿದೆ. ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಜೋಡಿಯು ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿತ್ತು.

ವಿಶ್ವಕಪ್‌ನಲ್ಲಿ ಅದ್ಭುತ ಸಾಧನೆ

ಇತ್ತೀಚೆಗಷ್ಟೇ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. ಶಮಿ 2023ರ ಏಕದಿನ ವಿಶ್ವಕಪ್‌ನ 7 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ 2023ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಶಮಿ ಅವರ ಈ ಗಮನಾರ್ಹ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಇನ್ನು ಭಾರತದ ಪರ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡುತ್ತಿರುವ ಶಮಿ ಅವರ ಅದ್ಭುತ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅರ್ಜುನ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಈ 26 ಆಟಗಾರರಿಗೆ ಅರ್ಜುನ್ ಪ್ರಶಸ್ತಿ

  1. ಓಜಸ್ ಪ್ರವೀಣ್ ದೇವತಾಳೆ: ಬಿಲ್ಲುಗಾರಿಕೆ (ಆರ್ಚರಿ)
  2. ಅದಿತಿ ಗೋಪಿಚಂದ್ ಸ್ವಾಮಿ: ಬಿಲ್ಲುಗಾರಿಕೆ (ಆರ್ಚರಿ)
  3. ಶ್ರೀಶಂಕರ್ ಎಂ: ಅಥ್ಲೆಟಿಕ್ಸ್
  4. ಪಾರುಲ್ ಚೌಧರಿ: ಅಥ್ಲೆಟಿಕ್ಸ್
  5. ಮೊಹಮ್ಮದ್ ಹುಸಾಮುದ್ದೀನ್: ಬಾಕ್ಸಿಂಗ್
  6. ಆರ್ ವೈಶಾಲಿ: ಚೆಸ್
  7. ಮೊಹಮ್ಮದ್ ಶಮಿ: ಕ್ರಿಕೆಟ್
  8. ಅನುಷ್ ಅಗರ್ವಾಲ್: ಕುದುರೆ ಸವಾರಿ
  9. ದಿವ್ಯಾಕೃತಿ ಸಿಂಗ್: ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್
  10. ದೀಕ್ಷಾ ದಾಗರ್: ಗಾಲ್ಫ್
  11. ಕೃಷ್ಣ ಬಹದ್ದೂರ್ ಪಾಠಕ್: ಹಾಕಿ
  12. ಪುಖ್ರಾಂಬಂ ಸುಶೀಲಾ ಚಾನು: ಹಾಕಿ
  13. ಪವನ್ ಕುಮಾರ್: ಕಬಡ್ಡಿ
  14. ರಿತು ನೇಗಿ: ಕಬಡ್ಡಿ
  15. ನಸ್ರೀನ್: ಖೋ-ಖೋ
  16. ಪಿಂಕಿ: ಲಾನ್ ಬಾಲ್ಸ್
  17. ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್: ಶೂಟಿಂಗ್
  18. ಇಶಾ ಸಿಂಗ್: ಶೂಟಿಂಗ್
  19. ಹರಿಂದರ್ ಪಾಲ್ ಸಿಂಗ್ ಸಂಧು: ಸ್ಕ್ವಾಷ್
  20. ಅಹಿಕಾ ಮುಖರ್ಜಿ: ಟೇಬಲ್ ಟೆನಿಸ್
  21. ಸುನೀಲ್ ಕುಮಾರ್: ಕುಸ್ತಿ
  22. ಶ್ರೀಮತಿ ಆಂಟಿಮ್: ಕುಸ್ತಿ
  23. ನವೋರೆಮ್ ರೋಶಿಬಿನಾ ದೇವಿ: ವುಶು
  24. ಶೀತಲ್ ದೇವಿ: ಪ್ಯಾರಾ ಆರ್ಚರಿ
  25. ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ: ಅಂಧರ ಕ್ರಿಕೆಟ್
  26. ಪ್ರಾಚಿ ಯಾದವ್: ಪ್ಯಾರಾ ಕ್ಯಾನೋಯಿಂಗ್

ಖೇಲ್ ರತ್ನ ಪ್ರಶಸ್ತಿ

  1. ಚಿರಾಗ್ ಶೆಟ್ಟಿ – ಬ್ಯಾಡ್ಮಿಂಟನ್
  2. ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ – ಬ್ಯಾಡ್ಮಿಂಟನ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Wed, 20 December 23

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More