Bhavani Devi: ಕಾಮನ್‌ವೆಲ್ತ್ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಭವಾನಿ ದೇವಿ

Commonwealth Fencing Championship: ಭಾರತದ ಭವಾನಿ ದೇವಿ ಅವರು ಲಂಡನ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.

Bhavani Devi: ಕಾಮನ್‌ವೆಲ್ತ್ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಭವಾನಿ ದೇವಿ
Bhavani Devi
Follow us
TV9 Web
| Updated By: Vinay Bhat

Updated on: Aug 11, 2022 | 9:15 AM

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಕಾಮನ್​ವೆಲ್ತ್ ಗೇಲ್ಸ್ 2022 ರಲ್ಲಿ (Commonwealth Games 2022) ಭಾರತ ಒಟ್ಟು 61 ಪದಕಗಳನ್ನು ಪಡೆದುಕೊಂಡ ಸಾಧನೆ ಮಾಡಿತು. 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೀಗ ಭಾರತದ ಭವಾನಿ ದೇವಿ (Bhavani Devi) ಅವರು ಲಂಡನ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ (Commonwealth Fencing Championship) ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. ವೈಯಕ್ತಿಕ ಸೇಬರ್ ವಿಭಾಗದ ಫೈನಲ್​​​​ನಲ್ಲಿ ಆಸ್ಟ್ರೇಲಿಯಾದ ಎರಡನೇ ಶ್ರೇಯಾಂಕಿತ ವರೋನಿಕಾ ವೇಸ್​ಲೆವಾ ವಿರುದ್ಧ 15-10ರ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಭವಾನಿ ಕಳೆದ ಬಾರಿ ಗೆದ್ದಿದ್ದ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ಹಂಗೇರಿಯಲ್ಲಿ ನಡೆದ 2020 ರ ಫೆನ್ಸಿಂಗ್ ವಿಶ್ವಕಪ್‌ನ ಕ್ವಾರ್ಟರ್ಫೈನಲ್ ತಲುಪಿದ ನಂತರ ಭವಾನಿ ದೇವಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಕೈಕ ಭಾರತೀಯ ಫೆನ್ಸರ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇಸ್ತಾನ್​ಬುಲ್​​ನಲ್ಲಿ ನಡೆದ ವಿಶ್ವಕಪ್​​ನಲ್ಲಿ 23ನೇ ಸ್ಥಾನ ಗಳಿಸಿದ್ದ ಭವಾನಿ ಕಾಮನ್‌ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ ಗೆದ್ದಿದ್ದಾರೆ.

ಇದನ್ನೂ ಓದಿ
Image
Azadi Ka Amrit Mahotsav: ಸ್ವಾತಂತ್ರ್ಯದ ಬಳಿಕ ಭಾರತ ಯಾವ ದೇಶದೆದುರು ಮೊದಲ ಕ್ರಿಕೆಟ್ ಪಂದ್ಯವನ್ನಾಡಿತ್ತು ಗೊತ್ತಾ?
Image
Virat Kohli: ಪಾಕ್ ವಿರುದ್ಧ ಜಸ್ಟ್ ಮೈದಾನಕ್ಕಿಳಿದರೆ ಸಾಕು: ವಿಶ್ವ ದಾಖಲೆಗೆ ಸಿದ್ಧವಾದ ವಿರಾಟ್ ಕೊಹ್ಲಿ
Image
The Hundred League 2022: 11 ಬೌಂಡರಿ, 3 ಸಿಕ್ಸರ್‌, 88 ರನ್! ದಿ ಹಂಡ್ರೆಡ್​ನಲ್ಲಿ ಮಲಾನ್ ಅಬ್ಬರ; ವಿಡಿಯೋ ನೋಡಿ
Image
ಮುಂಬೈ ಇಂಡಿಯನ್ಸ್ ಜೊತೆಗೆ ಮತ್ತೆರಡು ತಂಡಗಳನ್ನು ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್; ಅವುಗಳ ಹೆಸರೇನು ಗೊತ್ತಾ?

ಪಂದ್ಯ ಗೆದ್ದ ಬಳಿಕ ಮಾತನಾಡಿರುವ ಭವಾನಿ, “ಪಂದ್ಯ ಕಠಿಣವಾಗಿತ್ತು, ಗೆಲುವು ಸಾಧಿಸಿ ಭಾರತಕ್ಕೆ ಮತ್ತೊಮ್ಮೆ ಚಿನ್ನದ ಪದಕ ದಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಖುಷಿಯಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪದಕ ಗೆಲ್ಲುತ್ತೇನೆ,” ಎಂದು ಹೇಳಿದ್ದಾರೆ. ಭಾರತ ಫೆನ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಭವಾನಿ ಅವರನ್ನು ಅಭಿನಂದಿಸಿದ್ದಾರೆ. ”ದೇಶದ ಪ್ರತಿ ಫೆನ್ಸರ್‌ಗಳಿಗೂ ಭವಾನಿ ಅವರು ಪ್ರೇರಕಶಕ್ತಿಯಾಗಿದ್ದಾರೆ. ಹಲವು ಯುವ ಪ್ರತಿಭೆಗಳು ಅವರಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ,” ಎಂದು ಹೇಳಿದ್ದಾರೆ.