Paralympics 2024: ಕೋತಿ, ಹುಚ್ಚಿ ಎಂದು ಅಪಹಾಸ್ಯ ಮಾಡಿದವರ ಮುಂದೆಯೇ ಸಾಧನೆಯ ಶಿಖರವನ್ನೇರಿದ ದೀಪ್ತಿ

Deepthi Jeevanji: ದೀಪ್ತಿ ಹುಟ್ಟಿದಾಗ ಆಕೆಯ ತಲೆ ತುಂಬಾ ಚಿಕ್ಕದಾಗಿತ್ತು. ಇದಲ್ಲದೆ, ಆಕೆಯ ತುಟಿಗಳು ಮತ್ತು ಮೂಗು ಸಾಮಾನ್ಯ ಮಕ್ಕಳಿಗಿಂತ ಸ್ವಲ್ಪ ಭಿನ್ನವಾಗಿತ್ತು. ಇದರಿಂದ ಗ್ರಾಮಸ್ಥರು ಹಾಗೂ ಸಂಬಂಧಿಕರು ದೀಪ್ತಿ ಅವರನ್ನು ಹುಚ್ಚಿ, ಕೋತಿ ಎಂದೂ ಅಪಹಾಸ್ಯ ಮಾಡುತ್ತಿದ್ದರು. ಆದರೆ ನಾನು ಯಾವುದಕ್ಕೂ ಗಮನ ಕೊಡಲಿಲ್ಲ. ಈಗ ಮಗಳು ಪದಕ ಗೆದ್ದಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ. ಅಲ್ಲದೆ, ಆಕೆ ಚಾಂಪಿಯನ್ ಆಗುವುದನ್ನು ನೋಡಿದ ನಂತರ, ದೀಪ್ತಿ ದೇವರು ನೀಡಿದ ವಿಶೇಷ ಉಡುಗೊರೆ ಎಂದು ನನಗೆ ಅನಿಸುತ್ತಿದೆ ಎಂದಿದ್ದಾರೆ.

Paralympics 2024: ಕೋತಿ, ಹುಚ್ಚಿ ಎಂದು ಅಪಹಾಸ್ಯ ಮಾಡಿದವರ ಮುಂದೆಯೇ ಸಾಧನೆಯ ಶಿಖರವನ್ನೇರಿದ ದೀಪ್ತಿ
ದೀಪ್ತಿ ಜೀವನ್​ಜಿ
Follow us
|

Updated on:Sep 04, 2024 | 5:05 PM

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಭಾರತ 21 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಪದಕಗಳನ್ನು ಗೆದ್ದಿರುವುದು ಇದೇ ಮೊದಲು. ಹೀಗಾಗಿ ಈ ಸೀಸನ್​ ಭಾರತೀಯರಿಗೆ ತುಂಬಾ ವಿಶೇಷವಾಗಿದೆ. ಇನ್ನು ಕ್ರೀಡಾಕೂಟದ ಆರನೇ ದಿನ ಭಾರತಕ್ಕೆ ಐತಿಹಾಸಿಕವಾಗಿತ್ತು. ಏಕೆಂದರೆ 6ನೇ ದಿನದಂದು ಅಂದರೆ ಸೆಪ್ಟೆಂಬರ್ 3 ರಂದು ಒಟ್ಟು 5 ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಅಥ್ಲೀಟ್‌ಗಳು ಟೋಕಿಯೊದ ದಾಖಲೆಯನ್ನು ಮುರಿದರು. ಭಾರತದ ಈ ಐತಿಹಾಸಿಕ ಸಾಧನೆಯಲ್ಲಿ ತೆಲಂಗಾಣದ ದೀಪ್ತಿ ಜೀವನ್​ಜಿ ಕೂಡ ಮಹತ್ವದ ಕೊಡುಗೆ ನೀಡಿದ್ದಾರೆ. ಮಹಿಳೆಯರ 400 ಮೀಟರ್ ಓಟದ ಟಿ20 ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ದೀಪ್ತಿ ಪಾತ್ರರಾಗಿದ್ದಾರೆ. 55.82 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದ ದೀಪ್ತಿ, ಕೇವಲ 0.66 ಸೆಕೆಂಡುಗಳಲ್ಲಿ ಮೊದಲ ಸ್ಥಾನವನ್ನು ಕಳೆದುಕೊಂಡರು.

ಜನ್ಮಜಾತ ಮಾನಸಿಕ ವಿಕಲ ಚೇತನೆ

ದೀಪ್ತಿ ಜೀವನ್​ಜಿ ತೆಲಂಗಾಣದ ವಾರಂಗಲ್ ಜಿಲ್ಲೆಯ ನಿವಾಸಿ. ಪ್ಯಾರಾಲಿಂಪಿಕ್ಸ್ ಮಹಿಳೆಯರ400 ಮೀಟರ್ ಓಟದ ಟಿ20 ವಿಭಾಗದಲ್ಲಿ ಪದಕ ಗೆದ್ದ ಬಳಿಕ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ದೀಪ್ತಿ ಅವರ ತಾಯಿ ಧನಲಕ್ಷ್ಮಿ ಜೀವನ್​ಜಿ, ದೀಪ್ತಿಯ ಕಷ್ಟದ ದಿನಗಳನ್ನು ನೆನೆದು ಭಾವುಕರಾರು. ‘ಸೂರ್ಯಗ್ರಹಣದ ಸಮಯದಲ್ಲಿ ಜನಿಸಿದ ದೀಪ್ತಿ, ಹುಟ್ಟಿನಿಂದಲೇ ಮಾನಸಿಕವಾಗಿ ದುರ್ಬಲಳಾಗಿದ್ದಳು. ಈ ಕಾರಣದಿಂದಾಗಿ ದೀಪ್ತಿಗೆ ಮಾತನಾಡಲು ಅಥವಾ ಯಾವುದೇ ಸಾಮಾನ್ಯ ಕೆಲಸವನ್ನು ಸ್ವಂತವಾಗಿ ಮಾಡಲು ಆಗುತ್ತಿರಲಿಲ್ಲ.

ಅಪಹಾಸ್ಯ ಮಾಡುತ್ತಿದ್ದ ಗ್ರಾಮಸ್ಥರು

ದೀಪ್ತಿ ಹುಟ್ಟಿದಾಗ ಆಕೆಯ ತಲೆ ತುಂಬಾ ಚಿಕ್ಕದಾಗಿತ್ತು. ಇದಲ್ಲದೆ, ಆಕೆಯ ತುಟಿಗಳು ಮತ್ತು ಮೂಗು ಸಾಮಾನ್ಯ ಮಕ್ಕಳಿಗಿಂತ ಸ್ವಲ್ಪ ಭಿನ್ನವಾಗಿತ್ತು. ಇದರಿಂದ ಗ್ರಾಮಸ್ಥರು ಹಾಗೂ ಸಂಬಂಧಿಕರು ದೀಪ್ತಿ ಅವರನ್ನು ಹುಚ್ಚಿ, ಕೋತಿ ಎಂದೂ ಅಪಹಾಸ್ಯ ಮಾಡುತ್ತಿದ್ದರು. ಅಲ್ಲದೆ ಮಗಳನ್ನು ಅನಾಥಾಶ್ರಮಕ್ಕೆ ಬಿಡುವಂತೆ ಅನೇಕರು ಸಲಹೆ ನೀಡಿದ್ದರು. ಆದರೆ ನಾನು ಯಾವುದಕ್ಕೂ ಗಮನ ಕೊಡಲಿಲ್ಲ. ಈಗ ಮಗಳು ಪದಕ ಗೆದ್ದಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ. ಅಲ್ಲದೆ, ಆಕೆ ಚಾಂಪಿಯನ್ ಆಗುವುದನ್ನು ನೋಡಿದ ನಂತರ, ದೀಪ್ತಿ ದೇವರು ನೀಡಿದ ವಿಶೇಷ ಉಡುಗೊರೆ ಎಂದು ನನಗೆ ಅನಿಸುತ್ತಿದೆ ಎಂದಿದ್ದಾರೆ.

ಬಾಲ್ಯ ಹೋರಾಟದಿಂದ ತುಂಬಿತ್ತು

ಇನ್ನು ದೀಪ್ತಿ ಅವರ ಬಾಲ್ಯದ ಬಗ್ಗೆ ಮಾತನಾಡಿದ ತಾಯಿ ಧನಲಕ್ಷ್ಮಿ, ದೀಪ್ತಿ ಅವರ ಅಜ್ಜ ತೀರಿಕೊಂಡ ನಂತರ ಜೀವನ ತುಂಬ ಕಷ್ಟಕರವಾಯಿತು. ಹೀಗಾಗಿ ನಾವು ಕೃಷಿ ಭೂಮಿಯನ್ನು ಮಾರಾಟ ಮಾಡಬೇಕಾಯಿತು. ಇದರಿಂದ ಇಡೀ ಕುಟುಂಬ ಇನ್ನಷ್ಟು ಸಂಕಷ್ಟಕ್ಕೊಳಗಾಯಿತು. ದೀಪ್ತಿ ಅವರ ತಂದೆ ದುಡಿಯುತ್ತಿದ್ದ ಹಣದಲ್ಲಿ ಸಂಸಾರ ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ಕೂಡ ಕೆಲಸಕ್ಕೆ ಹೋಗಬೇಕಾಯಿತು.

ದೀಪ್ತಿ ಬಾಲ್ಯದಿಂದಲೂ ಶಾಂತ ಸ್ವಭಾವದವಳು ಮತ್ತು ತುಂಬಾ ಕಡಿಮೆ ಮಾತನಾಡುತ್ತಿದ್ದಳು. ಅವಳ ಅನಾರೋಗ್ಯದ ಕಾರಣದಿಂದ ಹಳ್ಳಿಯ ಮಕ್ಕಳು ಅವಳನ್ನು ಅಹಹಾಸ್ಯ ಮಾಡಿದ್ದಾಗ, ದೀಪ್ತಿ ಮನೆಗೆ ಬಂದು ತುಂಬಾ ಅಳುತ್ತಿದ್ದಳು. ಇಂತಹ ಪರಿಸ್ಥಿತಿಯಲ್ಲಿ ದೀಪ್ತಿಯನ್ನು ಖುಷಿ ಪಡಿಸಲು ನಾನು ಸಿಹಿ ಅನ್ನ ಅಥವಾ ಕೆಲವೊಮ್ಮೆ ಚಿಕನ್ ತಯಾರಿಸಿ ತಿನ್ನಿಸುತ್ತಿದ್ದೆ ಎಂದಿದ್ದಾರೆ.

ದೀಪ್ತಿ ಪ್ಯಾರಾಲಿಂಪಿಕ್ಸ್‌ ಪ್ರಯಾಣ ಆರಂಭವಾಗಿದ್ದು ಹೇಗೆ?

ದೀಪ್ತಿ ಬಾಲ್ಯದಿಂದಲೂ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದರು. 15 ನೇ ವಯಸ್ಸಿನಲ್ಲಿ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕೋಚ್ ಎನ್ ರಮೇಶ್, ದೀಪ್ತಿ ಅವರನ್ನು ಗಮನಿಸಿ ಅವರ ಮೇಲ್ವಿಚಾರಣೆಯಲ್ಲಿ ತರಬೇತಿ ನೀಡಲು ಆರಂಭಿಸಿದರು. ಸಾಕಷ್ಟು ಕಠಿಣ ಪರಿಶ್ರಮದ ನಂತರ, 2022 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೀಪ್ತಿ ತನ್ನ ಮೊದಲ ಪ್ರಮುಖ ಯಶಸ್ಸನ್ನು ಸಾಧಿಸಿದರು. ಈ ಅವಧಿಯಲ್ಲಿ ಅವರು ಏಷ್ಯನ್ ದಾಖಲೆಯನ್ನೂ ಮುರಿದರು. ಇದರ ನಂತರ, ಅವರು 2024 ರಲ್ಲಿ ಜಪಾನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಾಂಪಿಯನ್ ಆಗಿದಲ್ಲದೆ ವಿಶ್ವ ದಾಖಲೆಯನ್ನೂ ಮಾಡಿದರು. ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Wed, 4 September 24

ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!