ಯುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ‘ಯುವ ಸಂವಾದ’

PM Narendra Modi: ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ಇಂದು ದೇಶಾದ್ಯಂತ ಕ್ರೀಡಾ ಕ್ರಾಂತಿಯ ಹೊಸ ಸಂಚಲನ ಸೃಷ್ಟಿಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಖೇಲೋ ಇಂಡಿಯಾ ಸಂವಾದ' ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇಶದ ಮೂಲೆ ಮೂಲೆಗಳ ಲಕ್ಷಾಂತರ ಯುವಜನತೆಯನ್ನು ನೇರವಾಗಿ ಮಾತನಾಡಲಿದ್ದಾರೆ.

ಯುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಯುವ ಸಂವಾದ
Pm Modi

Updated on: Aug 27, 2026 | 11:29 AM

ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ (VC) ಮೂಲಕ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಖೇಲೋ ಇಂಡಿಯಾ ಸಂವಾದ’ (ಯುವ ಸಂವಾದ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

‘ಮೇರಾ ಯುವ ಭಾರತ್’ (MY Bharat) ಸಂಸ್ಥೆಯು ಆಯೋಜಿಸಿರುವ ಈ ಬೃಹತ್ ಕಾರ್ಯಕ್ರಮವು ದೇಶದ ಪ್ರತಿಯೊಂದು ಜಿಲ್ಲೆಯ ಆಯ್ದ ಎರಡು ಕಾಲೇಜುಗಳನ್ನು ವರ್ಚುವಲ್ ಆಗಿ ಸಂಪರ್ಕಿಸುವ ಮೂಲಕ ಲಕ್ಷಾಂತರ ಯುವಕರನ್ನು ಒಟ್ಟುಗೂಡಿಸಲಿದೆ.

ಯುವ ಸಂವಾದದ ಪ್ರಮುಖ ವಿಷಯಗಳು:

2036ರ ಒಲಿಂಪಿಕ್ ಕನಸು: ಭಾರತದಲ್ಲಿ 2036ರ ಒಲಿಂಪಿಕ್ಸ್ ಆಯೋಜಿಸುವ ಮತ್ತು ಅದರಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವುದು.

ವಿಕಸಿತ ಭಾರತ: 2047ರ ವೇಳೆಗೆ ಭಾರತವನ್ನು ಸದೃಢ ಮತ್ತು ಮುಂದುವರಿದ ರಾಷ್ಟ್ರವನ್ನಾಗಿ ಮಾಡಲು ಯುವ ನಾಯಕತ್ವದ ಪಾತ್ರವನ್ನು ಎತ್ತಿ ಹಿಡಿಯುವುದು.

ಮಾದಕ ಮುಕ್ತ ಭಾರತ: ಯುವ ಪೀಳಿಗೆಯು ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಮತ್ತು ಕ್ರೀಡೆಗಳತ್ತ ಗಮನ ಹರಿಸುವಂತೆ ಪ್ರೇರೇಪಿಸುವುದು.
YouTube video player

ಕ್ರೀಡಾತಾರೆಗಳ ಒಡನಾಟ:

ಪ್ರಧಾನಮಂತ್ರಿಯವರ ರಾಷ್ಟ್ರೀಯ ಭಾಷಣದ ನಂತರ, ಪ್ರತಿ ಜಿಲ್ಲೆಯ ಕಾಲೇಜುಗಳಲ್ಲಿ ಸ್ಥಳೀಯ ಸಂವಾದಗಳು ಮುಂದುವರಿಯಲಿದೆ. ಇದರಲ್ಲಿ ದೇಶಕ್ಕಾಗಿ ಪದಕ ಗೆದ್ದ ಕ್ರೀಡಾಪಟುಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ, ಯುವಜನತೆಗೆ ಕ್ರೀಡೆಯಲ್ಲಿರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.ಈ ಸಂವಾದವು ಕೇವಲ ಕ್ರೀಡೆಗೆ ಸೀಮಿತವಾಗಿರದೆ, ದೇಶದ ಒಟ್ಟಾರೆ ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.

 

Published On - 11:17 am, Thu, 27 August 26

Loading...
Unable to load recommendations.
Follow Us