AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋ ಬಾಲ್ ಸಮಸ್ಯೆ: ಫ್ರೀಹಿಟ್ ನೀಡುವಂತೆ ಟೀಮ್ ಇಂಡಿಯಾ ಕೋಚ್ ಸಲಹೆ!

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ಲೈನ್ ಮತ್ತು ಲೆಂತ್ ತೀವ್ರ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ವೇಗದ ಬೌಲರ್‌ಗಳು ನೋ-ಬಾಲ್ ಎಸೆಯುವುದು ಸಾಮಾನ್ಯ. ಆದರೆ, ಕೊಲಂಬೊ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್‌ಗಳೇ ಸಾಲು ಸಾಲು ನೋ-ಬಾಲ್ ಎಸೆದು ಶಿಸ್ತು ತಪ್ಪಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನೋ ಬಾಲ್ ಸಮಸ್ಯೆ: ಫ್ರೀಹಿಟ್ ನೀಡುವಂತೆ ಟೀಮ್ ಇಂಡಿಯಾ ಕೋಚ್ ಸಲಹೆ!
Team India Image Credit source: GettyImages
ಝಾಹಿರ್ ಯೂಸುಫ್
|

Updated on: Aug 27, 2026 | 8:15 AM

Share

ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರ್‌ಗಳು ಪದೇ ಪದೇ ನೋ-ಬಾಲ್ ಎಸೆಯುವ ಸಮಸ್ಯೆಗೆ ಬ್ರೇಕ್ ಹಾಕಲು ಭಾರತ ತಂಡದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ಐಸಿಸಿಗೆ ಸಲಹೆಯೊಂದನ್ನು ನೀಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಂತೆ (ODI ಮತ್ತು T20) ಟೆಸ್ಟ್ ಮಾದರಿಯಲ್ಲೂ ‘ಫ್ರೀ-ಹಿಟ್’ ನಿಯಮವನ್ನು ತಂದರೆ ಬೌಲರ್‌ಗಳು ನೋ-ಬಾಲ್ ಮಾಡುವುದನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆಗೆ ಕಾರಣವಾದ ಶ್ರೀಲಂಕಾ ವಿರುದ್ಧದ ಸರಣಿ!

ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು ಸಾಲು ಸಾಲು ನೋ-ಬಾಲ್ ಎಸೆಯುವ ಮೂಲಕ ಶಿಸ್ತು ತಪ್ಪಿದ್ದರು. ಇದು ತಂಡಕ್ಕೆ ಭಾರಿ ಹಿನ್ನಡೆಯನ್ನು ಉಂಟುಮಾಡಿತ್ತು. ಈ ತಾಂತ್ರಿಕ ದೋಷವನ್ನು ಸರಿಪಡಿಸಲು ನೆಟ್ಸ್ ಪ್ರ್ಯಾಕ್ಟಿಸ್ ವೇಳೆ ಬೌಲರ್‌ಗಳ ಮೇಲೆ ಈಗ ತೀವ್ರ ನಿಗಾ ಇಡಲಾಗುತ್ತಿದೆ ಎಂದು ಬಹುತುಲೆ ಖಚಿತಪಡಿಸಿದ್ದಾರೆ.

ಕೋಚ್ ಬಹುತುಲೆ ಅವರ ಪ್ರಸ್ತಾಪವೇನು?

“ಬೌಲರ್ ಗೆರೆ ದಾಟಿದಾಗ ಬ್ಯಾಟರ್‌ಗೆ ಫ್ರೀ-ಹಿಟ್ ಸಿಗುತ್ತದೆ ಎಂಬ ಭಯವಿದ್ದರೆ, ಅವರು ತಂತಾನೇ ಹೆಚ್ಚು ಜಾಗರೂಕರಾಗುತ್ತಾರೆ. ಫ್ರೀ-ಹಿಟ್ ಶಿಕ್ಷೆಯು ಬೌಲರ್‌ಗಳಲ್ಲಿ ಶಿಸ್ತು ಮೂಡಿಸಲು ಮತ್ತು ಈ ಓವರ್‌ಸ್ಟೆಪ್ಪಿಂಗ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಹಕಾರಿಯಾಗಲಿದೆ” ಎಂದು ಸಾಯಿರಾಜ್ ಬಹುತುಲೆ ಹೇಳಿದ್ದಾರೆ.

ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ನೋ-ಬಾಲ್ ಎಸೆದರೆ ಎದುರಾಳಿ ತಂಡಕ್ಕೆ ಕೇವಲ 1 ರನ್ ಸಿಗುತ್ತದೆ ಮತ್ತು ಆ ಎಸೆತವನ್ನು ಮತ್ತೆ ಬೌಲ್ ಮಾಡಬೇಕಾಗುತ್ತದೆ. ಆದರೆ ಬ್ಯಾಟರ್‌ಗೆ ಯಾವುದೇ ಫ್ರೀ-ಹಿಟ್ ಅವಕಾಶ ಇರುವುದಿಲ್ಲ. ಒಂದು ವೇಳೆ ಐಸಿಸಿ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಟೆಸ್ಟ್‌ನಲ್ಲೂ ಫ್ರೀ-ಹಿಟ್ ಜಾರಿಗೆ ತಂದರೆ, ಅದು ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ.

ಬರೋಬ್ಬರಿ 11 ನೋಬಾಲ್!

ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಒಟ್ಟು 11 ನೋ-ಬಾಲ್‌ಗಳನ್ನು ಎಸೆದಿದೆ. ಈ ಪೈಕಿ ಭಾರತದ ಸ್ಪಿನ್ನರ್‌ಗಳೇ ಬರೋಬ್ಬರಿ 10 ನೋ-ಬಾಲ್‌ಗಳನ್ನು ಎಸೆಯುವ ಮೂಲಕ ಕಳಪೆ ಶಿಸ್ತು ಪ್ರದರ್ಶಿಸಿದ್ದಾರೆ.

  • ಸರಾಂಶ್ ಜೈನ್: ಪದಾರ್ಪಣೆ ಪಂದ್ಯವಾಡುತ್ತಿರುವ ಸರಾಂಶ್ ಒಟ್ಟು 6 ನೋ-ಬಾಲ್‌ಗಳನ್ನು ಎಸೆದಿದ್ದಾರೆ.
  • ರವೀಂದ್ರ ಜಡೇಜಾ: ಹಿರಿಯ ಸ್ಪಿನ್ನರ್ ಜಡೇಜಾ ಅವರು 4 ನೋ-ಬಾಲ್‌ಗಳನ್ನು ಎಸೆದಿದ್ದಾರೆ.
  • ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿ ಸಿರಾಜ್ ಒಂದು ನೋಬಾಲ್ ಎಸೆದಿದ್ದಾರೆ.

ಇದನ್ನೂ ಓದಿ: WTC ಫೈನಲ್​ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

2021ರ ನಂತರ ಟೆಸ್ಟ್ ಪಂದ್ಯವೊಂದರಲ್ಲಿ ಸ್ಪಿನ್ ಪಡೆಯೊಂದು ಎಸೆದ ಮೂರನೇ ಅತಿ ಹೆಚ್ಚು ನೋ-ಬಾಲ್ ದಾಖಲೆ ಇದಾಗಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ಅವರು ಟೆಸ್ಟ್‌ನಲ್ಲೂ ಫ್ರೀ-ಹಿಟ್ ನಿಯಮ ತರಬೇಕು ಎಂದು ಸಲಹೆ ನೀಡಿದ್ದಾರೆ.

Follow Us
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ