Paris Olympics 2024: ರೋಹನ್ ಬೋಪಣ್ಣ ಕಡಿಮೆ ಶ್ರೇಯಾಂಕದ ಶ್ರೀರಾಮ್​ ಅವರನ್ನು ಆಯ್ಕೆ ಮಾಡಿದ್ದೇಕೆ?

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಇಂದು ಮಧ್ಯಾಹ್ನ ನಡೆಯಲಿರುವ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಭಾರತದ ಶ್ರೀರಾಮ್ ಬಾಲಾಜಿ-ರೋಹನ್ ಬೋಪಣ್ಣ ಫ್ರಾನ್ಸ್​ನ ಫ್ಯಾಬಿಯನ್ ರೆಬೌಲ್-ಎಡ್ವರ್ಡ್ ರೋಜರ್ ಜೋಡಿಯನ್ನು ಎದುರಿಸಲಿದ್ದಾರೆ. ಫ್ರೆಂಚ್ ಓಪನ್​ ಟೆನಿಸ್ ಟೂರ್ನಿಗೆ ಆತಿಥ್ಯವಹಿಸುವ ರೋಲ್ಯಾಂಡ್ ಗ್ಯಾರೋಸ್​ನ ಕ್ಲೇ ಕೋರ್ಟ್​ನಲ್ಲಿ ಈ ಪಂದ್ಯ ನಡೆಯಲಿದೆ.

Paris Olympics 2024: ರೋಹನ್ ಬೋಪಣ್ಣ ಕಡಿಮೆ ಶ್ರೇಯಾಂಕದ ಶ್ರೀರಾಮ್​ ಅವರನ್ನು ಆಯ್ಕೆ ಮಾಡಿದ್ದೇಕೆ?
Rohan Bopanna -Sriram Balaji
Follow us
|

Updated on: Jul 27, 2024 | 12:18 PM

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿಂದು ಭಾರತದ ಟೆನಿಸ್ ತಾರೆಗಳು ಅಭಿಯಾನ ಆರಂಭಿಸಲಿದ್ದಾರೆ. ರೋಲ್ಯಾಂಡ್-ಗ್ಯಾರೋಸ್​ನಲ್ಲಿ ನಡೆಯಲಿರುವ ಪುರುಷರ ಡಬಲ್ಸ್​ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಶ್ರೀರಾಮ್ ಬಾಲಾಜಿ ಕಣಕ್ಕಿಳಿಯಲಿದ್ದಾರೆ. ವಿಶೇಷ ಎಂದರೆ ಒಲಿಂಪಿಕ್ಸ್​ಗೆ ರೋಹನ್ ಬೋಪಣ್ಣ ನೇರ ಅರ್ಹತೆ ಪಡೆದರೆ, ಜೋಡಿಯಾಗಿ ಕೊಯಮತ್ತೂರು ಮೂಲದ ಶ್ರೀರಾಮ್ ಅವರನ್ನು ಆಯ್ಕೆ ಮಾಡಿದ್ದಾರೆ.

ಇಲ್ಲಿ ಶ್ರೀರಾಮ್ ಅವರ ಆಯ್ಕೆ ಏಕೆ ಎಂಬುದೇ ಕುತೂಹಲ. ಏಕೆಂದರೆ ಮೇ ತಿಂಗಳಲ್ಲೇ ರೋಹನ್ ಬೋಪಣ್ಣ ತಮಿಳುನಾಡು ಮೂಲದ ಆಟಗಾರನೊಂದಿಗೆ ಒಲಿಂಪಿಕ್ಸ್ ಆಡುವುದನ್ನು ಖಚಿತಪಡಿಸಿಕೊಂಡಿದ್ದರು. ಆದರೆ ಒಲಿಂಪಿಕ್ಸ್ ಕಟ್​ ಆಫ್ ದಿನಾಂಕದ (ಜೂ.10) ವೇಳೆಗೆ ಶ್ರೀರಾಮ್ ವಿಶ್ವ ಶ್ರೇಯಾಂಕದಲ್ಲಿ ಟಾಪ್-50 ಯಲ್ಲೂ ಕಾಣಿಸಿಕೊಂಡಿರಲಿಲ್ಲ.

ಅದರಲ್ಲೂ ಭಾರತದ ಮತ್ತೋರ್ವ ಟೆನಿಸ್ ತಾರೆ ಯೂಕಿ ಭಾಂಬ್ರಿಗಿಂತ ಹಿಂದಿದ್ದರು. ಶ್ರೀರಾಮ್ ಬಾಲಾಜಿ ವಿಶ್ವ ಶ್ರೇಯಾಂಕದಲ್ಲಿ 67ನೇ ಸ್ಥಾನದಲ್ಲಿದ್ದರೆ, ಯೂಕಿ ಭಾಂಬ್ರಿ 54ನೇ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ 34 ವರ್ಷದ ಶ್ರೀರಾಮ್ ಜೊತೆ ಕಣಕ್ಕಿಳಿಯಲು ರೋಹನ್ ಬೋಪಣ್ಣ ನಿರ್ಧರಿಸಿದ್ದರು.

ಕನ್ನಡಿಗನ ನಿರ್ಧಾರಕ್ಕೆ ಕಾರಣವೇನು?

ರೋಹನ್ ಬೋಪಣ್ಣ ಶ್ರೇಯಾಂಕದಲ್ಲಿ ಮೇಲಿರುವ ಯೂಕಿ ಭಾಂಬ್ರಿ ಅವರನ್ನು ಕೈಬಿಟ್ಟು ಶ್ರೀರಾಮ್ ಬಾಲಾಜಿ ಅವರನ್ನು ಆಯ್ಕೆ ಮಾಡಲು ಕಾರಣವೇನು ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಮುಖ್ಯ ಕಾರಣ ಶ್ರೀರಾಮ್ ಅವರ ಇತ್ತೀಚಿನ ಪ್ರದರ್ಶನಗಳು.

ಶ್ರೀರಾಮ್ ಬಾಲಾಜಿ ಎಟಿಪಿ ಚಾಲೆಂಜರ್ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇಟಲಿಯ ಸರ್ಡೆಗ್ನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಅಲ್ಲದೆ ಪೆರುಗಿಯಾ ಚಾಲೆಂಜರ್​ನಲ್ಲಿ ಶ್ರೀರಾಮ್ ರನ್ನರ್ ಅಪ್ ಆಗಿದ್ದರು.

ಅದರಲ್ಲೂ ಕಳೆದ ಫ್ರೆಂಚ್ ಓಪನ್​ನಲ್ಲಿ ರೋಹನ್ ಬೋಪಣ್ಣ ಹಾಗೂ ಶ್ರೀರಾಮ್ ಡಬಲ್ಸ್​ನಲ್ಲಿ ಮುಖಾಮುಖಿಯಾಗಿದ್ದರು. ರೋಲ್ಯಾಂಡ್-ಗ್ಯಾರೋಸ್​ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬೋಪಣ್ಣ- ಎಬ್ಡೆನ್ ಜೊತೆಗೂಡಿ ಆಡಿದರೆ, ಶ್ರೀರಾಮ್ ಮತ್ತು ಮಿಗುಯೆಲ್ ಅವರೊಂದಿಗೆ ಕಣಕ್ಕಿಳಿದಿದ್ದರು.

ಮೂರನೇ ಸುತ್ತಿನಲ್ಲಿ ಭಾರತೀಯರಿಬ್ಬರು ಎದುರು ಬದುರಾಗಿದ್ದು ವಿಶೇಷವಾಗಿತ್ತು. ಅದರಲ್ಲೂ ಅನುಭವಿ ಬೋಪಣ್ಣ-ಎಬ್ಡೆನ್ ಜೋಡಿ ವಿರುದ್ಧ ಶ್ರೀರಾಮ್ ಮತ್ತು ಮಿಗುಯೆಲ್ ಪ್ರಚಂಡ ಹೋರಾಟ ನಡೆಸಿದ್ದರು. ಪರಿಣಾಮ ಬೋಪಣ್ಣ ಜೋಡಿಯು ಗೆಲುವು ಖಚಿತಪಡಿಸಿಕೊಳ್ಳಲು ಸಾಕಷ್ಟು ಬೆವರಿಳಿಸಬೇಕಾಯಿತು. ಅಂತಿಮವಾಗಿ 7-6 (7-2), 3-6 ಮತ್ತು 6-7 (8-10) ಅಂತರದಿಂದ ಗೆಲ್ಲುವಲ್ಲಿ ರೋಹನ್ ಬೋಪಣ್ಣ ಹಾಗೂ ಎಡ್ಡೆನ್ ಜೋಡಿಯು ಯಶಸ್ವಿಯಾಗಿತ್ತು.

ಈ ವೇಳೆ ಶ್ರೀರಾಮ್ ಬಾಲಾಜಿ ಅವರ ಪ್ರಬಲವಾದ ಸರ್ವ್​ಗಳನ್ನು ರೋಹನ್ ಬೋಪಣ್ಣ ಗಮನಿಸಿದ್ದರು. ಅಲ್ಲದೆ ಫುಟ್​ವರ್ಕ್​ಗಳ ಮೂಲಕ ಎದುರಾಳಿಗಳನ್ನು ಬೆವರಿಳಿಸಿದ ಪರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕ್ಲೇ ಕೋರ್ಟ್​ನಲ್ಲಿ ಇಂತಹ ಫುಟ್​ವರ್ಕ್​ ಆಟಗಳು ಮುಖ್ಯವಾಗುತ್ತದೆ.

ಇದೀಗ ಟೆನಿಸ್ ಅಂಗಳದ ಸರ್ವ ಶ್ರೇಷ್ಠ ಕ್ಲೇ ಕೋರ್ಟ್ ಎಂ​ದೇ ಗುರುತಿಸಿಕೊಂಡಿರುವ ರೋಲ್ಯಾಂಡ್-ಗ್ಯಾರೋಸ್​ನಲ್ಲೇ ಒಲಿಂಪಿಕ್ಸ್ ಟೆನಿಸ್ ಪಂದ್ಯಗಳು ನಡೆಯುತ್ತಿದೆ. ಅದಗಾಗಲೇ ಪ್ಯಾರಿಸ್​ನ ಕ್ಲೇ ಕೋರ್ಟ್​ನಲ್ಲಿ ಶ್ರೀರಾಮ್ ಬಾಲಾಜಿ ಅವರ ಅದ್ಭುತ ಆಟವನ್ನು ಎದುರಾಳಿಯಾಗಿ ಕಣ್ಣಾರೆ ಕಂಡಿದ್ದ ರೋಹನ್ ಬೋಪಣ್ಣ ನೇರವಾಗಿ ದಕ್ಷಿಣ ಭಾರತದ ಟೆನಿಸ್ ತಾರೆಯನ್ನೇ ತಮ್ಮ ಜೋಡಿಯಾಗಿ ಒಲಿಂಪಿಕ್ಸ್​ಗೆ ಆಯ್ಕೆ ಮಾಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಯೂಕಿ ಭಾಂಬ್ರಿ ಇದುವರೆಗೆ ರೋಹನ್ ಬೋಪಣ್ಣ ಜೊತೆ ಜೋಡಿಯಾಗಿ ಕಣಕ್ಕಿಳಿದಿಲ್ಲ ಎಂಬುದು. ಅತ್ತ ಬೋಪಣ್ಣ-ಶ್ರೀರಾಮ್ ನಡುವೆ ಉತ್ತಮ ಹೊಂದಾಣಿಕೆಯಿದೆ. ಅಲ್ಲದೆ ರೋಹನ್ ಬೋಪಣ್ಣ ಅವರ ಬಾಲ್ಯದ ಕೋಚ್ ಬಾಲಚಂದ್ರನ್ ಮನ್ನಿಕತ್ ಅವರು ಈಗ ಶ್ರೀರಾಮ್ ಬಾಲಜಿ ಅವರ ಕೋಚ್.  ಹಾಗೆಯೇ ಪ್ಯಾರಿಸ್ ಒಲಿಂಪಿಕ್ಸ್ ತಂಡದ ತರಬೇತುದಾರರಾಗಿ ಮನ್ನಿಕತ್ ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ 10 ಸ್ಪರ್ಧಿಗಳು

ಈ ಎಲ್ಲಾ ಕಾರಣಗಳಿಂದಾಗಿ ಕಡಿಮೆ ಶ್ರೇಯಾಂಕ ಹೊಂದಿದ್ದರೂ ಶ್ರೀರಾಮ್ ಬಾಲಜಿ ಅವರನ್ನು ರೋಹನ್ ಬೋಪಣ್ಣ, ತಮ್ಮ ಜೊತೆಗಾರನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಎಲ್ಲಾ ಲೆಕ್ಕಾಚಾರಗಳೊಂದಿಗೆ ಅನುಭವಿ ರೋಹನ್ ಬೋಪಣ್ಣ ಭರ್ಜರಿ ಪ್ಲ್ಯಾನ್ ರೂಪಿಸಿರುವ ಕಾರಣ ರೋಲ್ಯಾಂಡ್-ಗ್ಯಾರೋಸ್​ನಲ್ಲಿ ಭಾರತವು ಪದಕವನ್ನು ನಿರೀಕ್ಷಿಸಬಹುದು.

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ