RCB vs KKR IPL 2026 Highlights: ಕೊಹ್ಲಿಗೆ ಜೀವದಾನ ನೀಡಿ ಸೋತ ಕೆಕೆಆರ್
Royal Challengers Bengaluru vs Kolkata Knight Riders, IPL 2026 Highlights: ವಿರಾಟ್ ಕೊಹ್ಲಿಯ ಅಜೇಯ ಶತಕದ ಬಲದಿಂದ ಆರ್‌ಸಿಬಿ, ಕೆಕೆಆರ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯಕ್ಕೂ ಮೊದಲು, ಕೊಹ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು, ಆದರೆ ಈ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಶತಕ ಬಾರಿಸುವುದರ ಜೊತೆಗೆ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ವಿರಾಟ್ ಕೊಹ್ಲಿಯ ಅಜೇಯ ಶತಕದ ಬಲದಿಂದ ಆರ್‌ಸಿಬಿ, ಕೆಕೆಆರ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯಕ್ಕೂ ಮೊದಲು, ಕೊಹ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು, ಆದರೆ ಈ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಿ ಶತಕ ಬಾರಿಸುವುದರ ಜೊತೆಗೆ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಇದು ಆರ್‌ಸಿಬಿಯ ಸತತ ಎರಡನೇ ಗೆಲುವಾದರೆ, ಇತ್ತ ಕೆಕೆಆರ್ ಸತತ ನಾಲ್ಕು ಗೆಲುವುಗಳ ನಂತರ ಸೋಲಿಗೆ ಕೊರಳೊಡ್ಡಿತು.
LIVE NEWS & UPDATES
-
RCB vs KKR IPL 2026: 6 ವಿಕೆಟ್‌ಗಳ ಜಯ
ವಿರಾಟ್ ಕೊಹ್ಲಿ ಅವರ ಅಜೇಯ ಶತಕದ ನೆರವಿನಿಂದ ಆರ್‌ಸಿಬಿ, ಕೆಕೆಆರ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ 8ನೇ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರೆ, ಇತ್ತ ಆರ್‌ಸಿಬಿ ವಿರುದ್ಧ ಸೋತ ಕೆಕೆಆರ್ ಮೂರನೇ ತಂಡವಾಗಿ ಪ್ಲೇಆಫ್‌ನಿಂದ ಹೊರಬಿದ್ದಿದೆ.
-
RCB vs KKR IPL 2026: ಕೊಹ್ಲಿ 58 ಎಸೆತಗಳಲ್ಲಿ ಶತಕ
ಕೊಹ್ಲಿ ಕೆಕೆಆರ್ ವಿರುದ್ಧ 58 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಈ ಆವೃತ್ತಿಯಲ್ಲಿ ಅವರ ಮೊದಲ ಶತಕ, ಐಪಿಎಲ್ ವೃತ್ತಿಜೀವನದಲ್ಲಿ 9 ನೇ ಮತ್ತು ಟಿ20 ವೃತ್ತಿಜೀವನದಲ್ಲಿ 10 ನೇ ಶತಕವಾಗಿದೆ.
-
-
RCB vs KKR IPL 2026: ಪಾಟಿದಾರ್ ಔಟ್
ರಜತ್ ಪಟಿದಾರ್ 8 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 157 ರನ್ ಗಳಿಸುವಷ್ಟರಲ್ಲಿ ಈ ವಿಕೆಟ್ ಕಳೆದುಕೊಂಡಿತು.
-
RCB vs KKR IPL 2026: ಪಡಿಕ್ಕಲ್ ಔಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 129 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. 27 ಎಸೆತಗಳಲ್ಲಿ 39 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ದೇವದತ್ ಪಡಿಕ್ಕಲ್ ಔಟಾದರು.
-
RCB vs KKR IPL 2026: 120 ರನ್ ಪೂರ್ಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12.1 ಓವರ್ ಗಳಲ್ಲಿ 120 ರನ್ ಗಳ ಗಡಿ ದಾಟಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ.
-
-
RCB vs KKR IPL 2026: ಕೊಹ್ಲಿ ಅರ್ಧಶತಕ
ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಿಂದಿನ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ ಈ ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡುತ್ತಿದ್ದಾರೆ.
-
RCB vs KKR IPL 2026: 7 ಓವರ್ ಪೂರ್ಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ. ವಿರಾಟ್ ಕೊಹ್ಲಿ 34 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ದೇವದತ್ ಪಡಿಕ್ಕಲ್ 17 ರನ್ ಗಳಿಸಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ.
-
RCB vs KKR IPL 2026: 50 ರನ್ ಪೂರ್ಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಓವರ್‌ಗಳಲ್ಲಿ 1 ವಿಕೆಟ್‌ಗೆ 56 ರನ್ ಗಳಿಸಿದೆ. ವಿರಾಟ್ ಕೊಹ್ಲಿ 21 ಮತ್ತು ದೇವದತ್ ಪಡಿಕ್ಕಲ್ 16 ರನ್ ಗಳಿಸಿದ್ದಾರೆ.
-
RCB vs KKR IPL 2026: 3 ಓವರ್‌ಗಳಲ್ಲಿ 36 ರನ್
ಆರ್‌ಸಿಬಿ ವೇಗದ ಆರಂಭ ಪಡೆದಿದ್ದು, ತಂಡವು ಮೂರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ.
-
RCB vs KKR IPL 2026: 193 ರನ್ ಗುರಿ
46 ಎಸೆತಗಳಲ್ಲಿ 71 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ ಅಂಗ್ಕ್ರಿಶ್ ರಘುವಂಶಿ ರನೌಟ್ ಆದರು. ಕೆಕೆಆರ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ರಿಂಕು ಸಿಂಗ್ ಕೂಡ 29 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಕ್ಯಾಮರೂನ್ ಗ್ರೀನ್ ಕೂಡ 32 ರನ್ ಗಳಿಸಿದರು.
-
RCB vs KKR IPL 2026: 18 ಓವರ್‌ಗಳು ಪೂರ್ಣ
ಕೋಲ್ಕತ್ತಾ ನೈಟ್ ರೈಡರ್ಸ್ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 172 ರನ್ ಗಳಿಸಿದೆ. ಅಂಗ್‌ಕ್ರಿಶ್ ರಘುವಂಶಿ (68) ಮತ್ತು ರಿಂಕು ಸಿಂಗ್ (32) ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುತ್ತಿದ್ದಾರೆ.
-
RCB vs KKR IPL 2026: 150 ರನ್ ಪೂರ್ಣ
ಕೋಲ್ಕತ್ತಾ ನೈಟ್ ರೈಡರ್ಸ್ 16 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್ ಗಳಿಸಿದೆ. ಅಂಗ್‌ಕ್ರಿಶ್ ರಘುವಂಶಿ 62 ಮತ್ತು ರಿಂಕು ಸಿಂಗ್ 19 ರನ್ ಗಳಿಸಿದ್ದಾರೆ.
-
RCB vs KKR IPL 2026: ರಘುವಂಶಿ ಅರ್ಧಶತಕ
ಅಂಗ್‌ಕ್ರಿಶ್ ರಘುವಂಶಿ ಅದ್ಭುತ ಇನ್ನಿಂಗ್ಸ್ ಆಡಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರೊಂದಿಗೆ, ಕೆಕೆಆರ್ 14 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 131 ರನ್ ಗಳಿಸಿದೆ.
-
RCB vs KKR IPL 2026: ಗ್ರೀನ್ ಔಟ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 116 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು. 24 ಎಸೆತಗಳಲ್ಲಿ ನಿರ್ಣಾಯಕ 32 ರನ್ ಗಳಿಸಿದ ನಂತರ ಕ್ಯಾಮರೂನ್ ಗ್ರೀನ್ ಔಟಾದರು.
-
RCB vs KKR IPL 2026: 7 ಓವರ್‌ಗಳು ಪೂರ್ಣ
ಕೋಲ್ಕತ್ತಾ ನೈಟ್ ರೈಡರ್ಸ್ 7 ಓವರ್‌ಗಳಲ್ಲಿ 2 ವಿಕೆಟ್‌ಗೆ 64 ರನ್ ಗಳಿಸಿದೆ. ಕ್ಯಾಮರೂನ್ ಗ್ರೀನ್ 9 ರನ್ ಮತ್ತು ಅಂಗ್‌ಕ್ರಿಶ್ ರಘುವಂಶಿ 17 ರನ್ ಗಳಿಸಿದ್ದಾರೆ.
-
RCB vs KKR IPL 2026: ಅಲೆನ್ ಔಟ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ 23 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಭುವನೇಶ್ವರ್ 8 ಎಸೆತಗಳಲ್ಲಿ 18 ರನ್ ಬಾರಿಸಿದ್ದ ಫಿನ್ ಅಲೆನ್ ಅವರನ್ನು ಔಟ್ ಮಾಡಿದರು.
-
RCB vs KKR IPL 2026: ಕೆಕೆಆರ್‌ಗೆ ಉತ್ತಮ ಆರಂಭ
ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಆರಂಭ ನೀಡಿದೆ. ಮೊದಲ ಎರಡು ಓವರ್ ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 18 ರನ್ ಗಳಿಸಿದೆ. ಫಿನ್ ಅಲೆನ್ ಒಂದೇ ಓವರ್ ನಲ್ಲಿ 14 ರನ್ ಬಾರಿಸಿದರು.
-
RCB vs KKR IPL 2026: ಕೆಕೆಆರ್
ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ರಿಂಕು ಸಿಂಗ್, ಸುನಿಲ್ ನರೈನ್, ಅನುಕುಲ್ ರಾಯ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.
-
RCB vs KKR IPL 2026: ಆರ್‌ಸಿಬಿ
ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ವೆಂಕಟೇಶ್ ಅಯ್ಯರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಾಸಿಖ್ ಸಲಾಮ್ ದಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್‌ವುಡ್.
-
RCB vs KKR IPL 2026: ಟಾಸ್ ಗೆದ್ದ ಆರ್‌ಸಿಬಿ
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
-
RCB vs KKR IPL 2026: ಮಳೆ ನಿಂತಿದೆ
ರಾಯ್‌ಪುರದಲ್ಲಿ ಪ್ರಸ್ತುತ ಮಳೆಯಾಗುತ್ತಿಲ್ಲ, ಆದರೆ ನೆಲ ಒದ್ದೆಯಾಗಿರುವುದರಿಂದ ರಾತ್ರಿ 8.15 ಕ್ಕೆ ನೆಲವನ್ನು ಪರಿಶೀಲಿಸಲಾಗುವುದು.
-
RCB vs KKR IPL 2026: ಮಳೆಯಿಂದಾಗಿ ಟಾಸ್ ವಿಳಂಬ
ಮಳೆಯಿಂದಾಗಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ
Published On - May 13,2026 6:58 PM




