AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RPPL Karting SuperSeries: ‘ಕಾರ್ಟಿಂಗ್ ಸೂಪರ್‌ಸೀರೀಸ್’ನಲ್ಲಿ ರಚಿತ್ ಸಿಂಘಾಲ್ ಚಾಂಪಿಯನ್

RPPL's 'Karting SuperSeries': ಭಾರತದಲ್ಲಿ ಮುಂದಿನ ಪೀಳಿಗೆಯ ರೇಸರ್‌ಗಳನ್ನು ಪ್ರೋತ್ಸಾಹಿಸಲು ಆರ್‌ಪಿಪಿಎಲ್ ಬದ್ಧವಾಗಿದೆ. ರಚಿತ್ ಸಿಂಘಾಲ್ ಅವರ ಗೆಲುವು ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ ಎಂಬುದಕ್ಕೆ ಸಾಕ್ಷಿ.

RPPL Karting SuperSeries: 'ಕಾರ್ಟಿಂಗ್ ಸೂಪರ್‌ಸೀರೀಸ್'ನಲ್ಲಿ ರಚಿತ್ ಸಿಂಘಾಲ್ ಚಾಂಪಿಯನ್
RPPL's 'Karting SuperSeries'
TV9 Web
| Edited By: |

Updated on:Jun 04, 2023 | 8:59 PM

Share

ಹೈದರಾಬಾದ್​ನಲ್ಲಿ ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (RPPL) ಆಯೋಜಿಸಿದ್ದ ‘ಕಾರ್ಟಿಂಗ್ ಸೂಪರ್‌ಸೀರೀಸ್’ ನಲ್ಲಿ ಯುವ ರೇಸರ್ ರಚಿತ್ ಸಿಂಘಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾರತದಲ್ಲಿನ ಯುವ ರೇಸಿಂಗ್ ಪ್ರತಿಭೆಯನ್ನು ಗುರುತಿಸಿ ಪೋತ್ಸಾಹಿಸುವ ಗುರಿ ಹೊಂದಿರುವ ಆರ್​ಪಿಪಿಎಲ್​  14 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ರೇಸಿಂಗ್ ಟೂರ್ನಿಗಳನ್ನು ಆಯೋಜಿಸುತ್ತಿದೆ. ಈಗಾಗಲೇ ನರೇನ್ ಕಾರ್ತಿಕೇಯನ್, ಅರ್ಮಾನ್ ಇಬ್ರಾಹಿಂ ಮತ್ತು ಜೆಹಾನ್ ದಾರುವಾಲಾ ಅವರು ಮೋಟಾರ್ ಸ್ಪೋರ್ಟ್ಸ್​ನಲ್ಲಿ ಭಾರತ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದರೂ, ದೇಶದಲ್ಲಿ ರೇಸಿಂಗ್ ಕ್ರೀಡೆಯು ಇನ್ನೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ. ಇದಕ್ಕಾಗಿ ಯುವ ರೇಸರ್‌ಗಳಿಗೆ ವೇದಿಕೆ ಕಲ್ಪಿಸಲು ಆರ್‌ಪಿಪಿಎಲ್ ಮುಂದಾಗಿದೆ.

ದೇಶದಲ್ಲಿ ರೇಸಿಂಗ್ ಅನ್ನು ಉತ್ತೇಜಿಸಲು, ಐದು ಸುತ್ತಿನ ನಾಲ್ಕು-ಸ್ಟ್ರೋಕ್ ಕಾರ್ಟಿಂಗ್ ಪಂದ್ಯಾವಳಿಯನ್ನು ದೇಶದ ವಿವಿಧ ನಗರಗಳಲ್ಲಿ ಆಯೋಜಿಸಲಾಗಿತ್ತು. ಹೈದರಾಬಾದ್‌ನ ಪ್ರಸಿದ್ಧ ‘ಚಿಕನ್ ಸರ್ಕ್ಯೂಟ್’ನಲ್ಲಿ ನಡೆದ ಫೈನಲ್ ರೇಸ್​​ ರೋಚಕ ಪೈಪೋಟಿಗೆ ಸಾಕ್ಷಿಯಾಯಿತು.

ಮೊದಲ 5 ಹಂತಗಳಲ್ಲಿ ಕಂಡುಬಂದ ರೋಚಕತೆ ಮತ್ತು ಕಠಿಣ ಪೈಪೋಟಿ ಫೈನಲ್‌ನಲ್ಲಿಯೂ ಕಂಡು ಬಂತು. ಇದಾಗ್ಯೂ ಕೊನೆಯ ಹಂತದಲ್ಲಿ ರಚಿತ್ ಸಿಂಘಾಲ್ ವೇಗದ ಜೊತೆಗೆ ಸಮರ್ಥ ರೇಸಿಂಗ್ ತಂತ್ರವನ್ನೂ ಅನುಸರಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.

5 ನಗರಗಳಲ್ಲಿ ರೇಸಿಂಗ್ ಪೈಪೋಟಿ:

ರಚಿತ್ ಸಿಂಘಾಲ್ ಅವರ ಗೆಲುವು ಮೋಟಾರ್‌ ಸ್ಪೋರ್ಟ್‌ನಲ್ಲಿ ಭಾರತದ ಹೆಸರನ್ನು ಉತ್ತೇಜಿಸುವ ಮತ್ತು ಯುವ ಭಾರತೀಯರನ್ನು ಕ್ರೀಡೆಯತ್ತ ಆಕರ್ಷಿಸುವ ಮೊದಲ ಮತ್ತು ಪ್ರಮುಖ ಹೆಜ್ಜೆಯಾಗಿದೆ. ಆರ್‌ಪಿಪಿಎಲ್‌ನ ಈ ಸೂಪರ್‌ಸಿರೀಸ್​ನ ಫೈನಲ್‌ಗೂ ಮುನ್ನ, ದೇಶದ 5 ದೊಡ್ಡ ನಗರಗಳಲ್ಲಿ ವಿವಿಧ ರೀತಿಯ ಟ್ರ್ಯಾಕ್‌ಗಳಲ್ಲಿ ರೇಸಿಂಗ್ ನಡೆಸಲಾಗಿತ್ತು. ಕಾರ್ಟಿಂಗ್ ಸೂಪರ್ ಸಿರೀಸ್ ನಲ್ಲಿ 14 ವರ್ಷಕ್ಕಿಂತ ಮೇಲ್ಪಟ್ಟ ರೇಸರ್ ಗಳು ಭಾಗವಹಿಸಿದ್ದರು.

ಚೆನ್ನೈ, ಬೆಂಗಳೂರು, ತ್ರಿಶೂರ್ (ಕೇರಳ), ಮುಂಬೈ ಮತ್ತು ದೆಹಲಿಯಲ್ಲೂ ಈ ರೇಸಿಂಗ್​ ಪೈಪೋಟಿ ನಡೆದಿದೆ. ಇಲ್ಲಿ ಅದ್ಭುತ ಪ್ರದರ್ಶನ ನೀಡಿದ ರೇಸರ್​ಗಳು ಹೈದರಾಬಾದ್‌ನ ಚಿಕನ್ ಸರ್ಕ್ಯೂಟ್‌ನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ್ದರು.

RPPL ​ನ ನಿರ್ದಿಷ್ಟ ಗುರಿ:

ಕಾರ್ಟಿಂಗ್ ಸೂಪರ್‌ ಸಿರೀಸ್​ನ ಯಶಸ್ಸಿನಿಂದ ಹಾಗೂ ರೋಚಕತೆಯಿಂದ ಕೂಡಿ ಫೈನಲ್‌ನಿಂದ ಆರ್‌ಪಿಪಿಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲ್ ರೆಡ್ಡಿ ಅವರು ಪ್ರಭಾವಿತರಾಗಿದ್ದಾರೆ. ಇದು ಯುವ ರೇಸರ್‌ಗಳಿಗೆ ಚಾಂಪಿಯನ್‌ಶಿಪ್ ಅತ್ಯಂತ ಪ್ರಮುಖ ಮತ್ತು ಸೂಕ್ತ ವೇದಿಕೆ ಎಂದು ಅಖಿಲ್ ರೆಡ್ಡಿ ಬಣ್ಣಿಸಿದರು.

“ಭಾರತದಲ್ಲಿ ಮುಂದಿನ ಪೀಳಿಗೆಯ ರೇಸರ್‌ಗಳನ್ನು ಪೋಷಿಸಲು ಮತ್ತು ಪ್ರೋತ್ಸಾಹಿಸಲು ಆರ್‌ಪಿಪಿಎಲ್ ಬದ್ಧವಾಗಿದೆ. ರಚಿತ್ ಸಿಂಘಾಲ್ ಅವರ ಗೆಲುವು ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ ಎಂಬುದಕ್ಕೆ ಸಾಕ್ಷಿ” ಎಂದು ಇದೇ ವೇಳೆ ಅಖಿಲ್ ರೆಡ್ಡಿ ಅಭಿಪ್ರಾಯಪಟ್ಟರು.

ಇನ್ನು ಈ ರೇಸ್​ನಲ್ಲಿ ಭಾಗವಹಿಸಿದ ಮತ್ತು ಪ್ರಾಯೋಜಕತ್ವ ನೀಡಿದ ಕಂಪೆನಿಗಳಿಗೆ ಇದೇ ವೇಳೆ ಆರ್‌ಪಿಪಿಎಲ್‌ನ ಅಧ್ಯಕ್ಷ ಧನ್ಯವಾದ ಹೇಳಿದರು.

ಆ ಬಳಿಕ ಮಾತನಾಡಿದ RPPL ಸಹ-ಸಂಸ್ಥಾಪಕ ಮತ್ತು ಅನುಭವಿ ಭಾರತೀಯ ರೇಸರ್ ಅರ್ಮಾನ್ ಇಬ್ರಾಹಿಂ, ಕಾರ್ಟಿಂಗ್ ಸೂಪರ್‌ ಸಿರೀಸ್​ ಯುವ ರೇಸರ್‌ಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆ. ಭಾರತದಲ್ಲಿ ಮೋಟಾರ್‌ಸ್ಪೋರ್ಟ್ ಅನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಲು ಮತ್ತು ಅಭಿವೃದ್ಧಿಪಡಿಸಲು RPPL ಶ್ರಮಿಸುತ್ತಿದೆ. ಇದನ್ನು ಮುಂದಿನ ದಿನಗಳಲ್ಲೂ ಮುಂದುವರೆಸುತ್ತೇವೆ ಎಂದು ಇಬ್ರಾಹಿಂ ಭರವಸೆ ನೀಡಿದರು.

Published On - 8:56 pm, Sun, 4 June 23

Follow Us