Kaviya Maran: ಹೈದರಾಬಾದ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಸುಂದರಿ ಯಾರು?

ಈ ಮೊದಲು ಕೂಡ ಕವಿಯಾ ಸಾಕಷ್ಟು ಬಾರಿ ಹೈಲೈಟ್​ ಆಗಿದ್ದಾರೆ. 2021ರ ಐಪಿಎಲ್​ ಹರಾಜಿನ ವೇಳೆಯೂ ಕವಿಯಾ ಕ್ಯಾಮೆರಾ ಕಣ್ಣಿಗೆ ಬಿದ್ದು ಸಾಕಷ್ಟು ವೈರಲ್​ ಆಗಿದ್ದರು.

Kaviya Maran: ಹೈದರಾಬಾದ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಸುಂದರಿ ಯಾರು?
ಎಸ್​ಆರ್​ಎಚ್​ನ ಕವಿಯಾ ಮಾರನ್
Edited By:

Updated on: Apr 15, 2021 | 4:03 PM

ಸನ್​ರೈಸರ್ಸ್​ ಹೈದರಾಬಾದ್ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವಿನ ಮ್ಯಾಚ್​ ವೇಳೆ ಹೆಚ್ಚು ಗಮನ ಸೆಳೆದಿದ್ದು ಪೆವಿಲಿಯನ್​ನಲ್ಲಿ ಕುಳಿತು ಸನ್​​ ರೈಸರ್ಸ್​ ಹೈದರಾಬಾದ್​ ತಂಡವನ್ನು ಬೆಂಬಲಿಸುತ್ತಿದ್ದಈ ಸುಂದರಿ. ಪ್ರತೀ ಬಾರಿ ಎಸ್​ಆರ್​ಎಚ್​ ಪಂದ್ಯದ ವೇಳೆ ಇವರು ಹೆಚ್ಚು ಗಮನ ಸೆಳೆಯುತ್ತಾರೆ. ಕ್ಯಾಮೆರಾ ಕಣ್ಣಿಗೂ ಬೀಳುತ್ತಾರೆ. ಅಷ್ಟಕ್ಕೂ ಯಾರು ಇವರು? ಇವರ ಹಿನ್ನೆಲೆ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಇವರ ಹೆಸರು ಕವಿಯಾ ಮಾರನ್​. ಇವರು ಸನ್​​ ರೈಸರ್ಸ್​ ಹೈದರಾಬಾದ್ ತಂಡದ ಸಿಇಒ! ವಯಸ್ಸು 29 ವರ್ಷ. ಕವಿಯಾ ಸನ್​ ನೆಟ್ವರ್ಕ್​ ಮಾಲೀಕ ಕಲಾನಿಧಿ ಮಾರನ್​ ಅವರ ಮಗಳು. ಸನ್​ ರೈಸರ್ಸ್​ ಹೈದರಾಬಾದ್ ತಂಡದ ಮಾಲಿಕತ್ವವನ್ನು ಸನ್​ ನೆಟ್ವರ್ಕ್​ ಹೊಂದಿದೆ. ಹೀಗಾಗಿ, ತಮ್ಮ ತಂಡವನ್ನು ಬೆಂಬಲಿಸೋಕೆ ಪ್ರತಿ ಪಂದ್ಯಕ್ಕೂ ಕವಿಯಾ ಆಗಮಿಸುತ್ತಾರೆ.

ಆರ್​ಸಿಬಿ ಹಾಗೂ ಎಸ್​ಆರ್​ಎಚ್​ ನಡುವಣ ಪಂದ್ಯದ 16ನೇ ಓವರ್​ ವರೆಗೂ ಗೆಲುವು ಹೈದರಾಬಾದ್ ಕಡೆಗೇ ಇತ್ತು. ಹೈದರಾಬಾದ್ ತಂಡದ ನಾಯಕ ಡೇವಿಡ್​ ವಾರ್ನರ್​ ಬೌಂಡರಿ ಬಾರಿಸಿದಾಗೆಲ್ಲ ಕವಿಯಾ ಮೊಗದಲ್ಲಿ ಮಂದಹಾಸ ಮೂಡುತ್ತಿತ್ತು. ಆದರೆ, 17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್​ ಮೂರು ವಿಕೆಟ್​ ಕೀಳುವ ಮೂಲಕ ಎಸ್​ಆರ್​ಎಚ್​ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆಗ ಕವಿಯಾ ಬೇಸರ ಹೊರ ಹಾಕಿದ್ದರು. ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.‘

ಅಂದಹಾಗೆ, ಈ ಮೊದಲು ಕೂಡ ಕವಿಯಾ ಸಾಕಷ್ಟು ಬಾರಿ ಹೈಲೈಟ್​ ಆಗಿದ್ದಾರೆ. 2021ರ ಐಪಿಎಲ್​ ಹರಾಜಿನ ವೇಳೆಯೂ ಕವಿಯಾ ಕ್ಯಾಮೆರಾ ಕಣ್ಣಿಗೆ ಬಿದ್ದು ಸಾಕಷ್ಟು ವೈರಲ್​ ಆಗಿದ್ದರು. ನಿನ್ನೆಯ ಪಂದ್ಯದಲ್ಲೂ ಅವರು ಸಾಕಷ್ಟು ಹೈಲೈಟ್​ ಆಗಿದ್ದಾರೆ.

ಇದನ್ನೂ ಓದಿ: SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್​ ನೀಡಿದ್ದು ಶಹಬಾಜ್​ ಮಾಡಿದ ಆ ಒಂದು ಓವರ್​!

Published On - 3:53 pm, Thu, 15 April 21

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us