AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಸ್ಮಾರ್ಟ್​ಫೋನ್ ಒಮ್ಮೆ ಚಾರ್ಜ್ ಮಾಡಲು ಎಷ್ಟು ಯೂನಿಟ್ ವಿದ್ಯುತ್ ಬೇಕಾಗುತ್ತದೆ ಗೊತ್ತೇ?

Electricity bill: ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಲು ಎಷ್ಟು ವಿದ್ಯುತ್ ವೆಚ್ಚವಾಗುತ್ತದೆ?. ಫೋನ್ ಅನ್ನು ಚಾರ್ಜ್ ಮಾಡಿದಾಗ ಎಷ್ಟು ಹಣ ಖರ್ಚು ಆಗುತ್ತದೆ?. ಇದು ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.

Tech Tips: ಸ್ಮಾರ್ಟ್​ಫೋನ್ ಒಮ್ಮೆ ಚಾರ್ಜ್ ಮಾಡಲು ಎಷ್ಟು ಯೂನಿಟ್ ವಿದ್ಯುತ್ ಬೇಕಾಗುತ್ತದೆ ಗೊತ್ತೇ?
Smartphone Charging
Vinay Bhat
|

Updated on: Jul 28, 2023 | 12:49 PM

Share

ಸ್ಮಾರ್ಟ್​ಫೋನ್ (Smartphone) ಇಂದು ಜೀವನದ ಪ್ರಮುಖ ಅಂಗವಾಗಿ ಬಿಟ್ಟಿದೆ. ದಿನದ ಅನೇಕ ಕೆಲಸಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ಮಾಡಲಾಗುತ್ತದೆ. ಫೋನ್ ಇಲ್ಲದೆ ಜೀವನವೇ ಅಪೂರ್ಣ ಎಂಬ ಸ್ಥಿತಿ ಉಂಟಾಗಿದೆ. ಆದರೆ ಈ ಫೋನ್‌ ಕಾರ್ಯನಿರ್ವಹಿಸಲು ಬ್ಯಾಟರಿ ಚಾರ್ಜ್ ಮಾಡಬೇಕು. ಬ್ಯಾಟರಿ ಚಾರ್ಜ್ ಆಗಲು ವಿದ್ಯುತ್ (Electricity) ಬೇಕೇಬೇಕು. ಸ್ಮಾರ್ಟ್​ಫೋನ್ ಚಾರ್ಜ್ ಮಾಡದಿದ್ದರೆ ಅದು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಸಾಮಾನ್ಯವಾಗಿ ಎಲ್ಲರು ಚಾರ್ಜರ್ ಮೂಲಕ ಬ್ಯಾಟರಿ ಫುಲ್ ಮಾಡುತ್ತಾರೆ. ಆದರೆ, ನೀವು ಎಂದಾದರೂ ಸ್ಮಾರ್ಟ್​ಫೋನ್ ಒಮ್ಮೆ ಚಾರ್ಜ್ (Charge) ಮಾಡಲು ಎಷ್ಟು ಯೂನಿಟ್ ವಿದ್ಯುತ್ ಬೇಕಾಗುತ್ತದೆ ಎಂದು ಯೋಚಿಸಿದ್ದೀರಾ?.

ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಲು ಎಷ್ಟು ವಿದ್ಯುತ್ ವೆಚ್ಚವಾಗುತ್ತದೆ?. ಫೋನ್ ಅನ್ನು ಚಾರ್ಜ್ ಮಾಡಿದಾಗ ಎಷ್ಟು ಹಣ ಖರ್ಚು ಆಗುತ್ತದೆ?. ಇದು ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ನಿಮ್ಮ ಫೋನ್ ಅನ್ನು ಪ್ರತಿದಿನ ಚಾರ್ಜ್ ಮಾಡಿದಾಗ ಇದರಿಂದ ಇಡೀ ತಿಂಗಳು ಅಥವಾ ವರ್ಷದಲ್ಲಿ ಎಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

Samsung Galaxy Z Flip 5: ಸ್ಯಾಮ್​ಸಂಗ್ ಸ್ಟೈಲಿಶ್ ಫ್ಲಿಪ್​ ಫೋನ್​ ನೋಡಿ..

ಇದನ್ನೂ ಓದಿ
Image
Amazon Great Freedom Festival sale: ಅಮೆಜಾನ್​ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್: ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40 ರಷ್ಟು ಡಿಸ್ಕೌಂಟ್
Image
WhatsApp Video Message: ವಾಟ್ಸ್​ಆ್ಯಪ್ ಚಾಟ್​ನಲ್ಲಿ ಬಂದಿದೆ ಹೊಸ ಫೀಚರ್: ಈಗ ವಿಡಿಯೋ ಮೂಲಕ ಮೆಸೇಜ್ ಕಳುಹಿಸಿ
Image
Sony WF-1000XM5 TWS: ಸ್ಪಷ್ಟ ಮತ್ತು ಆರಾಮದಾಯಕ ಮ್ಯೂಸಿಕ್ ಆಲಿಸಲು ಬೆಸ್ಟ್ ಸೋನಿ ಬಡ್ಸ್
Image
Samsung Galaxy Z Fold 5: ಸ್ಯಾಮ್​ಸಂಗ್ ಮತ್ತೊಂದು ಫೋಲ್ಡಿಂಗ್ ಸ್ಮಾರ್ಟ್​ಫೋನ್ ಬಿಡುಗಡೆ

ಮೊಬೈಲ್ ಚಾರ್ಜಿಂಗ್‌ನಿಂದ ಎಷ್ಟು ವಿದ್ಯುತ್ ಖರ್ಚಾಗುತ್ತದೆ?:

ನಿಮ್ಮ ಸ್ಮಾರ್ಟ್​ಫೋನ್ ಯಾವುವು?, ಅದರ ಬ್ಯಾಟರಿ ಎಷ್ಟು ಎಂಬುದರ ಮೇಲೆ ವಿದ್ಯುತ್ ಬಳಕೆ ಬದಲಾಗುತ್ತದೆ. ಆದರೆ ಫಲಿತಾಂಶಗಳು ಹೆಚ್ಚು ಭಿನ್ನವಾಗಿರುವುದಿಲ್ಲ. ಚಾರ್ಜಿಂಗ್‌ನಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂದು ನೀವು ತಿಳಿದುಕೊಳ್ಳಬೇಕಾದರೆ, ನೀವು ಎಷ್ಟು ಬಾರಿ, ಎಷ್ಟು ಸಮಯ ಫೋನ್ ಚಾರ್ಜ್ ಮಾಡುತ್ತೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸರಾಸರಿ ಗಮನಿಸಿದರೆ ಪ್ರತಿಯೊಬ್ಬರೂ ತಮ್ಮ ಫೋನ್ ಅನ್ನು ದಿನಕ್ಕೆ 3 ಗಂಟೆಗಳ ಕಾಲ ಚಾರ್ಜ್ ಮಾಡುತ್ತಾರೆ. ಫಾಸ್ಟ್ ಚಾರ್ಜರ್ ನಿಂದ ಚಾರ್ಜ್ ಮಾಡುವವರು ಕಡಿಮೆ ಸಮಯದಲ್ಲಿ ಅಷ್ಟೇ ಪ್ರಮಾಣದ ವಿದ್ಯುತ್ ಬಳಸುತ್ತಾರೆ. ಇಷ್ಟು ದೀರ್ಘ ಕಾಲ ಫೋನ್ ಚಾರ್ಜ್ ಮಾಡುವುದರಿಂದ 0.15 KWH ವಿದ್ಯುತ್ ಖರ್ಚಾಗುತ್ತದೆ. ಇದಲ್ಲದೆ, ಹೆಚ್ಚಿನ mAh ಬ್ಯಾಟರಿ ಹೊಂದಿರುವ ಫೋನ್ ಹೆಚ್ಚು ಶಕ್ತಿಯನ್ನು ಬಳಸುತ್ತದೆ. ಇದು 0.115 KWH ವರೆಗೆ ಇರುತ್ತದೆ.

ಉದಾಹರಣೆಗೆ, ಐಫೋನ್ ಅಡಾಪ್ಟರ್ 5W ಆಗಿದೆ, ನೀವು ಅದನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಇದು 0.005KWh ವಿದ್ಯುತ್ ಅನ್ನು ಬಳಸುತ್ತದೆ. ಅದೇ 3 ಗಂಟೆಗಳ ಕಾಲ ಬಳಸಿದರೆ 0.015 KWH ವಿದ್ಯುತ್ ಅನ್ನು ಬಳಸುತ್ತದೆ. ಯೂನಿಟ್ ವಾರು ನೋಡಿದರೆ ಒಂದು ವರ್ಷದಲ್ಲಿ ಸುಮಾರು 5 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಅಂದರೆ ಒಂದು ವರ್ಷದಲ್ಲಿ ಕೇವಲ 5 ಯೂನಿಟ್ ವಿದ್ಯುತ್ ಕೇವಲ ಫೋನ್ ಚಾರ್ಜ್​ಗೆ ಖರ್ಚಾದಂತಾಯಿತು. ಅತ್ಯಂತ ಶಕ್ತಿಶಾಲಿ ಬ್ಯಾಟರಿಗಳಾದರೆ ಹೆಚ್ಚು ಸಮಯ ಫೋನ್ ಚಾರ್ಜ್ ಮಾಡಬೇಕಾಗುತ್ತದೆ. ಇದರಿಂದಾಗಿ ಒಮ್ಮೆಲೇ ವಿದ್ಯುತ್ ಖರ್ಚಾಗುತ್ತದೆ. 3000 ರಿಂದ 5000 MAH ಬ್ಯಾಟರಿ ಹೊಂದಿರುವ ಫೋನ್ ಆದರೆ ಇದು ವರ್ಷಕ್ಕೆ 4-6 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ.

ನಿಮ್ಮ ರಾಜ್ಯದ ಪ್ರತಿ ಯೂನಿಟ್ ವಿದ್ಯುತ್ ದರದಿಂದ ಒಂದು ವರ್ಷದಲ್ಲಿ ಫೋನ್ ಶುಲ್ಕಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂದು ನೀವು ಅಂದಾಜು ಮಾಡಬಹುದು. ಉದಾಹರಣೆಗೆ ಒಂದು ಯೂನಿಟ್ ವಿದ್ಯುತ್ ಶುಲ್ಕ 8 ರೂಪಾಯಿಗಳಾಗಿದ್ದರೆ, ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ವರ್ಷಕ್ಕೆ 40 ರೂಪಾಯಿ ವೆಚ್ಚ ಮಾಡುತ್ತೀರಿ. ಇಡೀ ತಿಂಗಳು ಲೆಕ್ಕ ಹಾಕಿದರೆ ಈ ವೆಚ್ಚ ಸುಮಾರು 3.5 ರೂಪಾಯಿ ಆಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ