Infinix Note 30 5G: ಭಾರತದಲ್ಲಿಂದು 108MP ಕ್ಯಾಮೆರಾದ ಇನ್ಫಿನಿಕ್ಸ್ ನೋಟ್ 30 5G ಸ್ಮಾರ್ಟ್‌ಫೋನ್ ಬಿಡುಗಡೆ
ಇನ್ಫಿನಿಕ್ಸ್ ಕಂಪನಿ ತನ್ನ ಹೊಸ ಇನ್ಫಿನಿಕ್ಸ್ ನೋಟ್ 30 5G (Infinix Note 30 5G ) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಜೂನ್ 14 ಇಂದು ಮಧ್ಯಾಹ್ನ 12 ಗಂಟೆಗೆ ಲಾಂಚ್ ಆಗಲಿದೆ.
ಭಾರತದಲ್ಲಿ ಕ್ಯಾಮೆರಾ ಸ್ಮಾರ್ಟ್ಫೋನ್ಗಳ (Smartphones) ಹಾವಳಿ ಭರ್ಜರಿ ಆಗಿದೆ. ನಿರಂತರವಾಗಿ ಆಕರ್ಷಕ ಕ್ಯಾಮೆರಾ ಫೋನ್ಗಳು ಬಿಡುಗಡೆ ಆಗುತ್ತಿದೆ. ಇದೀಗ ಇನ್ಫಿನಿಕ್ಸ್ (Infinix) ಸರದಿ. ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್ಗಳನ್ನು ಬಿಡುಗಡೆ ಮಾಡಿ ಹೆಸರುವಾಸಿ ಆಗಿರುವ ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ತನ್ನ ಹೊಸ ಇನ್ಫಿನಿಕ್ಸ್ ನೋಟ್ 30 5G (Infinix Note 30 5G ) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಜೂನ್ 14 ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್ಕಾರ್ಟ್ನಲ್ಲಿ ಲಾಂಚ್ ಆಗಲಿದೆ. ಈ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ಹೊರಹಾಕಿದೆ. ವಿಶೇಷ ಎಂದರೆ, ಈ ಫೋನ್ ಬರೋಬ್ಬರಿ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಆಯ್ಕೆಯನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಕೂಡ ನೀಡಲಾಗಿದೆ.
ಈ ಸ್ಮಾರ್ಟ್ಫೋನ್ನ ಬೆಲೆ ಎಷ್ಟಿರಬಹುದು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 15,000 ರೂ. ಆಸುಪಾಸಿನಲ್ಲಿ ಇರಬಹುದು. 4GB RAM + 128GB ಹಾಗೂ 8GB RAM + 256GB ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಳ್ಳಲಿದೆ. ಇದು ನೀಲಿ, ಕಪ್ಪು ಮತ್ತು ಗೋಲ್ಡ್ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ.
Time to be the soul of every party with the all-new Infinix Note 30 5G. Featuring JBL Tuned Dual Stereo Speakers for loud and crisp sound quality. The #InfinixNOTE305G is launching on 14th June, 12 noon, only on Flipkart. Know more: https://t.co/1jcK1oMWHf#ChangeTheGame pic.twitter.com/DIvOWxgpe8
— Infinix India (@InfinixIndia) June 13, 2023
ಫೀಚರ್ಸ್ ಏನಿದೆ?:
ಇನ್ಫಿನಿಕ್ಸ್ ನೋಟ್ 30 5G ಸ್ಮಾರ್ಟ್‌ಫೋನ್ 1,080×2,460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240Hz ಟಚ್ ಸ್ಯಾಪ್ಲಿಂಗ್ ರೇಟ್ ಮತ್ತು 580 ನಿಟ್ಸ್ ಗರಿಷ್ಠ ಬ್ರೈಟ್ನೆಸ್ನಿಂದ ಕೂಡಿದೆ. ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್ ವೇಗವನ್ನು ಹೊಂದಿರಲಿದ್ದು, ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಈ ಸ್ಮಾರ್ಟ್ಫೋನ್ನ ಮತ್ತೊಂದು ಹೈಲೇಟ್ ಕ್ಯಾಮೆರಾ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ನಿಂದ ಕೂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸೆನ್ಸಾರ್ನದ್ದಾಗಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು AI ಕ್ಯಾಮರಾ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇನ್ಫಿನಿಕ್ಸ್ ನೋಟ್ 30 5G ಸ್ಮಾರ್ಟ್‌ಫೋನ್ 45W ವೈರ್ಡ್ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಕಂಪನಿ ಹೇಳುವ ಪ್ರಕಾರ ಇದು ಕೇವಲ 30 ನಿಮಿಷಗಳಲ್ಲಿ 1% ಯಿಂದ 75% ಬ್ಯಾಟರಿ ಚಾರ್ಜ್ ಮಾಡುತ್ತಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5ಜಿ ಬೆಂಬಲ ಪಡೆದುಕೊಂಡಿದೆ. ಇದರೊಂದಿಗೆ JBL ಸ್ಟಿರಿಯೊ ಸ್ಪೀಕರ್‌ಗಳು, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, 3.55 ಎಂಎಂ ಆಡಿಯೋ ಜ್ಯಾಕ್ ನೀಡಲಾಗಿದೆ.