Oppo A78 4G: ಸಿಂಪಲ್-ಸೂಪರ್: ಒಪ್ಪೋದಿಂದ ಆಕರ್ಷಕವಾದ ಒಪ್ಪೋ A78 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ಒಪ್ಪೋ A78 4G ಸದ್ಯಕ್ಕೆ ಒಂದು ವೇರಿಯೆಂಟ್​ನಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ ಇಂಡೊನೇಷ್ಯಾದಲ್ಲಿ IDR 35,99,000, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 20,000 ರೂ.

Oppo A78 4G: ಸಿಂಪಲ್-ಸೂಪರ್: ಒಪ್ಪೋದಿಂದ ಆಕರ್ಷಕವಾದ ಒಪ್ಪೋ A78 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Oppo A78 4G
Follow us
Vinay Bhat
|

Updated on: Jul 11, 2023 | 4:25 PM

ಕ್ಯಾಮೆರಾ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ (Smartphone) ಬ್ರ್ಯಾಂಡ್ ಒಪ್ಪೋ ಇದೀಗ ಹೊಸ ಫೋನಿನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ತನ್ನ ಒಪ್ಪೋ A78 5G ಆವೃತ್ತಿಯಲ್ಲಿ ಮಾರುಕಟ್ಟೆಯನ್ನು ಅಲುಗಾಡಿಸಿದ್ದ ಒಪ್ಪೋ ಇದೀಗ ಒಪ್ಪೋ A78 4G (Oppo A78 4G) ಆವೃತ್ತಿಯನ್ನು ಪರಿಚಯಿಸಿದೆ. ಸದ್ಯಕ್ಕೆ ಈ ಫೋನ್ ವಿದೇಶದಲ್ಲಿ ಬಿಡುಗಡೆ ಆಗಿದೆ. ಮುಂದಿನ ತಿಂಗಳು ಭಾರತಕ್ಕೂ ಕಾಲಿಡುವ ನಿರೀಕ್ಷಿಯಿದೆ. 5ಜಿ ಆವೃತ್ತಿಗೆ ಹೋಲಿಸಿದರೆ ನೂತನ 4ಜಿಯಲ್ಲಿ ಸಾಕಷ್ಟು ಬದಲಾವಣೆಯ ಫೀಚರ್​ಗಳಿವೆ. ಆಕರ್ಷಕ ಕ್ಯಾಮೆರಾ (Camera), ಬ್ಯಾಟರಿ, ಪ್ರೊಸೆಸರ್ ನೀಡಲಾಗಿದೆ. ಹಾಗಾದರೆ, ಒಪ್ಪೋ A78 4ಜಿಯ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಒಪ್ಪೋ A78 4G ಸದ್ಯಕ್ಕೆ ಒಂದು ವೇರಿಯೆಂಟ್​ನಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ ಇಂಡೊನೇಷ್ಯಾದಲ್ಲಿ IDR 35,99,000, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 20,000 ರೂ. ಇರಬಹುದು. ಇಂಡೊನೇಷ್ಯಾದ ಒಪ್ಪೋ ಆನ್​ಲೈನ್ ಸ್ಟೋರ್​ನಲ್ಲಿ ಈ ಫೋನ್ ಸೇಲ್ ಆಗುತ್ತಿದೆ. ಬ್ಲಾಕ್ ಮಿಂಟ್ ಮತ್ತು ಸಿಯಾ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ. ಇದರ 5ಜಿ ಆವೃತ್ತಿಗೆ ಭಾರತದಲ್ಲಿ 18,999 ರೂ. ಇದೆ.

ಇದನ್ನೂ ಓದಿ
Image
iPhone 14: ಶಾಕಿಂಗ್: ಪ್ರೈಮ್ ಡೇ ಸೇಲ್​ನಲ್ಲಿ ಐಫೋನ್ 14 ಕೇವಲ 66,499 ರೂ. ಗೆ ಮಾರಾಟ
Image
Galaxy S21 FE 5G 2023: ಸ್ಯಾಮ್​ಸಂಗ್ ಪ್ರಿಯರಿಗೆ ಬಿಗ್ ಸರ್ಪ್ರೈಸ್: ಸದ್ದಿಲ್ಲದೆ ಗ್ಯಾಲಕ್ಸಿ S21 FE 5G ಫ್ಯಾನ್ ಎಡಿಷನ್ ಬಿಡುಗಡೆ
Image
Memory Full: ಮೊಬೈಲ್​ನಲ್ಲಿ ಸ್ಟೊರೇಜ್ ಫುಲ್ ಆದ್ರೆ ಈ ಟ್ರಿಕ್ ಫಾಲೋ ಮಾಡಿ
Image
Realme Narzo 60 Pro 5G: ಗ್ರೇಟ್ ಕ್ಯಾಮೆರಾ ಫೀಚರ್ಸ್ ಜತೆಗೆ ಬರುತ್ತಿದೆ ಹೊಸ ರಿಯಲ್​ಮಿ ಫೋನ್

Nothing Phone 2: ಇಂದು ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ನಥಿಂಗ್ ಫೋನ್ 2 ಬಿಡುಗಡೆ: ಬೆಲೆ ಎಷ್ಟು?

ಫೀಚರ್ಸ್ ಏನಿದೆ?:

ಡ್ಯುಯಲ್ ಸಿಮ್ (ನ್ಯಾನೋ) ಆಯ್ಕೆ ಹೊಂದಿರುವ ಒಪ್ಪೋ A78 4G ಫೋನ್ ಆಂಡ್ರಾಯ್ಡ್ 13-ಆಧಾರಿತ ColorOS 13.1 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.43-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) AMOLED ಡಿಸ್ ಪ್ಲೇ ಹೊಂದಿದ್ದು, 90Hz ವರೆಗೆ ರಿಫ್ರೆಶ್ ದರ ಮತ್ತು ಗರಿಷ್ಠ 180Hz ಟಚ್ ಮಾದರಿ ದರವನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದುಕೊಂಡಿದೆ. ಇದು ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, Adreno 610 GPU ಮತ್ತು 8GB RAM ಅನ್ನು ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್​ನಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಆಯ್ಕೆ ಹೊಂದಿದೆ. ಇದು f/1.8 ದ್ಯುತಿರಂಧ್ರದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು f/2.4 ದ್ಯುತಿರಂಧ್ರದೊಂದಿಗೆ 2-ಮೆಗಾಪಿಕ್ಸೆಲ್ ಲೆನ್ಸ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ f/2.0 ದ್ಯುತಿರಂಧ್ರದೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾದಲ್ಲಿ ಸಾಕಷ್ಟು ಆಯ್ಕೆಗಳನ್ನು ನೀಡಲಾಗಿದೆ.

ಒಪ್ಪೋ A78 4G ಯ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.3, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ. ಆನ್‌ಬೋರ್ಡ್‌ನಲ್ಲಿ ಅಕ್ಸೆಲೆರೊಮೀಟರ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಗ್ರಾವಿಟಿ ಸೆನ್ಸಾರ್, ಗೈರೊಸ್ಕೋಪ್, ಇನ್-ಡಿಸ್ಪ್ಲೇ ಆಪ್ಟಿಕಲ್ ಸೆನ್ಸರ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ ಇದೆ. ಇದು ದೃಢೀಕರಣಕ್ಕಾಗಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. 5,000mAh ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಜೊತೆಗೆ 67W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ