AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ತಪ್ಪಾಗಿ ಬೇರೆಯವರ ನಂಬರ್​ಗೆ ರೀಚಾರ್ಜ್ ಮಾಡಿದ್ರೆ ಹಣ ವಾಪಸ್ ಪಡೆಯೋದು ಹೇಗೆ?

ನೀವು ತಪ್ಪಾಗಿ ರೀಚಾರ್ಜ್ ಮಾಡಿದ ಬಗ್ಗೆ ಸಂಪೂರ್ಣ ವಿವರಗಳನ್ನು ಇಮೇಲ್ ಮೂಲಕ ಸಂಬಂಧಪಟ್ಟ ಕಂಪನಿಗೆ ಕಳುಹಿಸಬಹುದು. ಈ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಭಾರತದಲ್ಲಿ ಹೆಚ್ಚಿನ ಜನರು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ ಕಾರ್ಡ್‌ಗಳನ್ನು ಬಳಸುತ್ತಾರೆ. ನೀವು ಈ ಟೆಲಿಕಾಂ ಕಂಪನಿಯ ಇಮೇಲ್ ಐಡಿಯನ್ನು ಸುಲಭವಾಗಿ ಪಡೆಯಬಹುದು.

Tech Tips: ತಪ್ಪಾಗಿ ಬೇರೆಯವರ ನಂಬರ್​ಗೆ ರೀಚಾರ್ಜ್ ಮಾಡಿದ್ರೆ ಹಣ ವಾಪಸ್ ಪಡೆಯೋದು ಹೇಗೆ?
Wrong Recharge'
ಮಾಲಾಶ್ರೀ ಅಂಚನ್​
| Edited By: |

Updated on: Jan 23, 2025 | 12:41 PM

Share

ಈ ಹಿಂದೆ ಮೊಬೈಲ್ ರೀಚಾರ್ಜ್‌ಗಾಗಿ ಜನರು ಅಂಗಡಿಗಳಿಗೆ ಹೋಗಿ ಟಾಪ್ ಅಪ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದ ಕಾಲವಿತ್ತು. ಆ ಸಮಯದಲ್ಲಿ ಇಂಟರ್‌ನೆಟ್ ಕೂಡ ತುಂಬಾ ದುಬಾರಿಯಾಗಿತ್ತು. ಆದರೀಗ ಕಾಲ ಬದಲಾಗಿದೆ. ತಂತ್ರಜ್ಞಾನ ಮಾರುಕಟ್ಟೆ ಸಾಕಷ್ಟು ಬೆಳವಣಿಗೆ ಕಂಡಿದ್ದು ಇಂದು ಮನೆಯಲ್ಲಿಯೇ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಅನೇಕ ಅಪ್ಲಿಕೇಷನ್​ಗಳಿಗೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಅನೇಕ ಆ್ಯಪ್​ಗಳು ಬಳಸುತ್ತೀರಿ. ಆದರೆ ಕೆಲವು ಬಾರಿ ನಿಮಗಾಗಿ ಅಥವಾ ಕುಟುಂಬದ ಸದಸ್ಯರಿಗೆ ನೀವು ರೀಚಾರ್ಜ್ ಮಾಡುವಾಗ ಅದು ತಪ್ಪಿ ಬೇರೆಯವರ ನಂಬರ್​ಗೆ ಹೋಗುತ್ತದೆ. ಈ ರೀತಿ ನಿಮಗೆ ಎಂದಾದರೂ ಸಂಭವಿಸಿದೆಯೇ?.

ಅದು ಸಣ್ಣ ಮೊತ್ತದ ರೀಚಾರ್ಜ್ ಆಗಿದ್ದರೆ ನಿರ್ಲಕ್ಷಿಸುತ್ತಾರೆ, ಅದೇ ದೊಡ್ಡ ಮೊತ್ತ ರಾಂಗ್ ನಂಬರ್​ಗೆ ರೀಚಾರ್ಜ್ ಆಗಿದ್ದರೆ ಟೆನ್ಶನ್ ಆಗುತ್ತದೆ. ಆದರೆ, ರಾಂಗ್ ನಂಬರ್​ಗೆ ರೀಚಾರ್ಜ್ ಮಾಡಿದರೆ ಈ ಹಣ ಹಿಂಪಡೆಯಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ನೀವು ತಪ್ಪು ಸಂಖ್ಯೆ ನಮೂದಿಸಿದರೆ ಏನು ಮಾಡಬೇಕು?:

ನೀವು ತಪ್ಪಾಗಿ ಅಥವಾ ತರಾತುರಿಯಲ್ಲಿ ರಾಂಗ್ ನಂಬರ್‌ಗೆ ರೀಚಾರ್ಜ್ ಮಾಡಿದ್ದರೆ, ನೀವು ಸಿಮ್ ಕಾರ್ಡ್ ಬಳಸುತ್ತಿರುವ ಟೆಲಿಕಾಂ ಆಪರೇಟರ್‌ನ ಕಸ್ಟಮರ್ ಕೇರ್‌ಗೆ ತಕ್ಷಣ ಕರೆ ಮಾಡಿ ಮತ್ತು ಅವರಿಗೆ ಎಲ್ಲಾ ಮಾಹಿತಿಯನ್ನು ನೀಡಿ. ಅಂದರೆ ನೀವು ಎಷ್ಟು ಮೊತ್ತ ರೀಚಾರ್ಜ್ ಮಾಡಿದ್ದೀತಿ, ಯಾವ ಕಂಪನಿಯ ನಂಬರ್ ರೀಚಾರ್ಜ್ ಮಾಡಲಾಗಿದೆ ಹಾಗೂ ಯಾವ ಆ್ಯಪ್​ ಅನ್ನು ರೀಚಾರ್ಜ್ ಮಾಡಲು ಬಳಸಿದ್ದೀರಿ, ಹೀಗೆ ಎಲ್ಲ ಮಾಹಿತಿಯನ್ನು ಟೆಲಿಕಾಂ ಆಪರೇಟರ್‌ಗೆ ನೀಡಬೇಕು.

ಇದಲ್ಲದೆ, ನೀವು ತಪ್ಪಾಗಿ ರೀಚಾರ್ಜ್ ಮಾಡಿದ ಬಗ್ಗೆ ಸಂಪೂರ್ಣ ವಿವರಗಳನ್ನು ಇಮೇಲ್ ಮೂಲಕ ಸಂಬಂಧಪಟ್ಟ ಕಂಪನಿಗೆ ಕಳುಹಿಸಬಹುದು. ಈ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಭಾರತದಲ್ಲಿ ಹೆಚ್ಚಿನ ಜನರು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ ಕಾರ್ಡ್‌ಗಳನ್ನು ಬಳಸುತ್ತಾರೆ. ನೀವು ಈ ಟೆಲಿಕಾಂ ಕಂಪನಿಯ ಇಮೇಲ್ ಐಡಿಯನ್ನು ಸುಲಭವಾಗಿ ಪಡೆಯಬಹುದು. ಹೀಗೆ ಅವರಿಗೆ ಮೇಲ್ ಮೂಲಕ ಸ್ಪಷ್ಟ ಮಾಹಿತಿಯನ್ನು ನೀಡಿ.

Galaxy S25 Ultra: ಭಾರತಕ್ಕೆ ಅಪ್ಪಳಿಸಿತು 200MP ಕ್ಯಾಮೆರಾ ಹೊಸ ಸ್ಮಾರ್ಟ್​ಫೋನ್: ಯಾವುದು, ಬೆಲೆ ಎಷ್ಟು?

ಟೆಲಿಕಾಂ ಕಂಪನಿ ಪ್ರತಿಕ್ರಿಯಿಸದಿದ್ದಲ್ಲಿ ಏನು ಮಾಡುವುದು?:

ಅನೇಕ ಬಾರಿ ಟೆಲಿಕಾಂ ಕಂಪನಿಗಳು ಗ್ರಾಹಕರ ದೂರುಗಳನ್ನು ಸ್ವೀಕರಿಸುವುದಿಲ್ಲ. ದೀರ್ಘಕಾಲದವರೆಗೆ ಕರೆಯಲ್ಲಿ ಕಾದರೂ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಕೆಲವು ಬಾರಿ ಕಾಲ್ ಕನೆಕ್ಟ್ ಕೂಡ ಆಗುವುದಿಲ್ಲ. ಟೆಲಿಕಾಂ ಕಂಪನಿಯು ನಿಮ್ಮ ದೂರಿನ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೂ ಸಹ, ನೀವು ಕಸ್ಟಮರ್ ಕೇರ್ ಪೋರ್ಟಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಬಹುದು. ಅಥವಾ ನಿಮ್ಮ ದೂರನ್ನು ವಾಟ್ಸ್​ಆ್ಯಪ್ ಮೂಲಕವೂ ದಾಖಲಿಸಬಹುದು. ಇದಲ್ಲದೆ, ನೀವು ಪ್ಲೇ ಸ್ಟೋರ್‌ನಿಂದ ಗ್ರಾಹಕ ಸೇವಾ ಪೋರ್ಟಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕವೂ ದೂರು ಸಲ್ಲಿಸಬಹುದು.

ಈ ವಿಚಾರ ನೆನಪಿನಲ್ಲಿಡಿ:

ಆದರೆ ಒಂದು ವಿಷಯ ನೆನಪಿಡಿ, ನೀವು ಸಮಯಕ್ಕೆ ಸರಿಯಾಗಿ ದೂರು ಸಲ್ಲಿಸಿದರೆ ಮಾತ್ರ ನಿಮ್ಮ ಹಣವನ್ನು ನೀವು ಹಿಂಪಡೆಯಬಹುದು. ಅಲ್ಲದೆ ನಿಮ್ಮ ಮೊಬೈಲ್ ಸಂಖ್ಯೆಯು ರೀಚಾರ್ಜ್ ಮಾಡಿದ ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗಬೇಕು. ಅಂದರೆ, ಒಂದು ಅಥವಾ ಎರಡು ಸಂಖ್ಯೆಗಳಿಂದಾಗಿ ರೀಚಾರ್ಜ್ ತಪ್ಪು ಸಂಖ್ಯೆಗೆ ಹೋದರೆ, ಹಣವನ್ನು ಮರಳಿ ಪಡೆಯುವ ಅವಕಾಶವಿದೆ. ಅದೇ ಸಂಪೂರ್ಣ ಸಂಖ್ಯೆ ವಿಭಿನ್ನವಾಗಿದ್ದರೆ, ಅಂತಹ ಸಂದರ್ಭದಲ್ಲಿ ಕಂಪನಿಯು ಪಾವತಿಸಲು ಹಿಂಜರಿಯುತ್ತದೆ. ಏಕೆಂದರೆ ಅನೇಕ ಜನರು ಉದ್ದೇಶಪೂರ್ವಕವಾಗಿ ಈರೀತಿ ಮಾಡುವವರೂ ಇರುತ್ತಾರೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್