Air Conditioner: ನಿಮ್ಮ ಮನೆಯ AC ಪಕ್ಕದಲ್ಲೇ ಟಿವಿ ಕೂಡ ಇದೆಯಾ?: ಹಾಗಾದರೆ ಕೂಡಲೇ ಸ್ಥಳ ಬದಲಾಯಿಸಿ

|

Updated on: Jul 01, 2023 | 12:16 PM

ಎಸಿ ಬಳಿ ಯಾವುದೇ ಬಿಸಿಯನ್ನು ಉತ್ಪಾದಿಸುವ ಎಲೆಕ್ಟ್ರಾನಿಕ್ ಅಥವಾ ಉಪಕರಣವನ್ನು ಇಡಬಾರದು ಎಂದು ಅನೇಕರಿಗೆ ತಿಳಿದಿಲ್ಲ. ಎಸಿ ಬಳಿ ಎಲ್ಇಡಿ ಟಿವಿ, ಕಂಪ್ಯೂಟರ್ ನಂತಹ ಬಿಸಿ ಆಗುವ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಮತ್ತು ವಿದ್ಯುತ್ ಮೂಲಕ ಕೆಲಸ ಮಾಡುವ ಉಪಕರಣಗಳನ್ನು ಇಡಬೇಡಿ.

Air Conditioner: ನಿಮ್ಮ ಮನೆಯ AC ಪಕ್ಕದಲ್ಲೇ ಟಿವಿ ಕೂಡ ಇದೆಯಾ?: ಹಾಗಾದರೆ ಕೂಡಲೇ ಸ್ಥಳ ಬದಲಾಯಿಸಿ
AC and Smart TV
Follow us on

ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ತಣ್ಣನೆಯ ಗಾಳಿಯಲ್ಲೇ ಜನರು ಕುಳಿತುಕೊಳ್ಳ ಬೇಕಾದ ಪರಿಸ್ಥಿತಿ ಬಂದೊದಗಿದೆ. ಇದಕ್ಕಾಗಿ ಕೇವಲ ದೊಡ್ಡ ದೊಡ್ಡ ನಗರಗಳಲ್ಲಿ (City) ಮಾತ್ರವಲ್ಲದೆ ಈಗೀಗ ಹಳ್ಳಿಗಳ ಬಹುತೇಕ ಎಲ್ಲರ ಮನೆಯಲ್ಲೂ ಎಸಿ (Air Conditioner) ಅಳವಡಿಸಲಾಗಿದೆ. ಆದರೆ ಮನೆಯಲ್ಲಿರುವ ಎಸಿ ಬಗ್ಗೆ ಕಾಳಜಿ ವಹಿಸದಿದ್ದರೆ, ಕೂಲಿಂಗ್ ಕಡಿಮೆಯಾಗುತ್ತದೆ. ಹೀಗಾಗಿ ಎಸಿ (AC) ಸರಿಯಾಗಿ ಕಾರ್ಯನಿರ್ವಹಿಸಲು ಅದರ ಬಗ್ಗೆ ಗಮನ ಹಿರುಸುವುದು ಬಹಳ ಮುಖ್ಯ. ನಿಮ್ಮ ಮನೆಯಲ್ಲೂ ಎಸಿ ಅಳವಡಿಸಿದ್ದರೆ ಕೆಲವು ವಿಷಯಗಳನ್ನು ತಿಳಿದುಕೊಳ್ಳಿ.

ಎಸಿ ಬಳಿ ಯಾವುದೇ ಬಿಸಿಯನ್ನು ಉತ್ಪಾದಿಸುವ ಎಲೆಕ್ಟ್ರಾನಿಕ್ ಅಥವಾ ಉಪಕರಣವನ್ನು ಇಡಬಾರದು ಎಂದು ಅನೇಕರಿಗೆ ತಿಳಿದಿಲ್ಲ. ಎಸಿ ಬಳಿ ಎಲ್ಇಡಿ ಟಿವಿ, ಕಂಪ್ಯೂಟರ್ ನಂತಹ ಬಿಸಿ ಆಗುವ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಮತ್ತು ವಿದ್ಯುತ್ ಮೂಲಕ ಕೆಲಸ ಮಾಡುವ ಉಪಕರಣಗಳನ್ನು ಇಡಬೇಡಿ. ಇದು ಎಸಿಯ ಕಾರ್ಯಕ್ಷಮತೆಯನ್ನು ಕುಗ್ಗಿಸಬಹುದು. ಇದರಿಂದ ಎಸಿಯ ಒಳಾಂಗಣ ಮತ್ತು ಹೊರಾಂಗಣ ಎರಡರ ಮೇಲೂ ಪರಿಣಾಮ ಬೀರುತ್ತದೆ.

Amazon Prime Day: ವಾರ್ಷಿಕ ವಿಶೇಷ ಮಾರಾಟದ ದಿನಾಂಕ ಪ್ರಕಟಿಸಿದ ಅಮೆಜಾನ್

ಇದನ್ನೂ ಓದಿ
Sony Bravia XR X90L: ಟಿವಿ ಪ್ರಿಯರಿಗಾಗಿ ಹೊಸ ಮಾದರಿ ಪರಿಚಯಿಸಿದೆ ಸೋನಿ
Noise ColorFit Vision 3: ನಾಯ್ಸ್ ಸ್ಮಾರ್ಟ್​ವಾಚ್ ಸರಣಿಯಲ್ಲಿ ಬಂತು ಮತ್ತೊಂದು ಸ್ಟೈಲಿಶ್ ವಾಚ್
Tecno Camon 20 Pro 5G: ವಿಶೇಷ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಟೆಕ್ನೋ ಫೋನ್
WhatsApp Videos: ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಹಂಚಿಕೊಳ್ಳಲು WhatsAppನಲ್ಲಿ ಬರುತ್ತಿದೆ ಹೊಸ ವೈಶಿಷ್ಟ್ಯ

ಅಂತೆಯೆ ಕಿಟಕಿಗಳು ಅಥವಾ ಹೊರಗಿನ ಬಾಗಿಲುಗಳು ತೆರೆದು ಎಸಿ ಅನ್ನು ಬಳಸಬಾರದು. ಮಳೆಗಾಲದಲ್ಲಿ ನೆನಪಿನಲ್ಲಿಡಬೇಕಾದ ಪ್ರಮುಖ ಅಂಶವೆಂದರೆ ಎಸಿ ಫಿಲ್ಟರ್ ಅನ್ನು ಎರಡು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಇದನ್ನು ನೀವು ಮಾಡದಿದ್ದರೆ, ನಿಮ್ಮ ಫಿಲ್ಟರ್‌ನಲ್ಲಿ ಧೂಳಿನಿಂದ ಕೆಟ್ಟು ಹೋಗುತ್ತದೆ. ಓವರ್ಲೋಡ್ ಆಗುತ್ತದೆ.

ಎಸಿ ಸರ್ವಿಸ್ ಮಾಡಿಸುವುದು ಮುಖ್ಯ:

ಸಮಯಕ್ಕೆ ತಕ್ಕಂತೆ ನೀವು ಎಸಿಯನ್ನು ಸರಿಯಾಗಿ ಸರ್ವಿಸ್ ಮಾಡಿಸುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಅದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಅಗತ್ಯವಿದ್ದಾಗ ಮಾತ್ರ ಎಸಿ ಬಳಸಬೇಕು. ಬಳಕೆ ಹೆಚ್ಚಾದರೆ ನಿಮ್ಮ ಎಸಿ ಗ್ಯಾಸ್ ಸೋರಿಕೆಯಾಗಬಹುದು. ಕೆಲವೊಮ್ಮೆ ಎಸಿಯಲ್ಲಿರುವ ಕಾರ್ಬನ್ ಅನಿಲ ಸೋರಿಕೆಗೆ ಕಾರಣವಾಗಬಹುದು. ಎಷ್ಟೋ ಬಾರಿ ಎಸಿಯ ಕಂಡೆನ್ಸರ್ ಪೈಪುಗಳೂ ತುಕ್ಕು ಹಿಡಿಯುತ್ತವೆ. ಇದರಿಂದ ಅನಿಲ ಸೋರಿಕೆ ಆಗುವ ಸಾಧ್ಯತೆ ಇರುತ್ತದೆ. ಹೀಗಿದ್ದಾಗ ಎಸಿ ಸರಿಯಾಗಿ ಕೆಲಸ ನಿರ್ವಹಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ನಾವು ಆಕಸ್ಮಿಕವಾಗಿ ಅನೇಕ ಬಾರಿ ಎಸಿ ಮೇಲೆ ವಸ್ತುಗಳನ್ನು ಇಡುತ್ತೇವೆ. ತಪ್ಪಿಯೂ ಹೀಗೆ ಮಾಡಬೇಡಿ. ಎಸಿ ಮುಂಭಾಗದಿಂದ ತಂಪಾದ ಗಾಳಿ ಬೀಸುತ್ತದೆ. ಆದರೆ ಹಿಂಭಾಗದಿಂದ ಬಿಸಿ ಗಾಳಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ವಸ್ತುಗಳನ್ನು ಎಸಿ ಮೇಲೆ ಇರಿಸಿದರೆ ಬಿಸಿ ಗಾಳಿಯು ಹೊರಬರುವುದಿಲ್ಲ. ಇದು ಎಸಿ ಹಾಳಾಗಿ, ಗ್ಯಾಸ್ ಸೋರಿಕೆಯಾಗಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ