Bollywood
ಭಾರತದ ಸಮೃದ್ಧ ಚಲನಚಿತ್ರೋದ್ಯಮಗಳಲ್ಲಿ ಬಾಲಿವುಡ್ ಕೂಡ ಒಂದು. ಈವರೆಗೆ ಹಲವು ಸೂಪರ್ ಹಿಟ್ ಚಿತ್ರಗಳು ಇಲ್ಲಿ ಸಿದ್ಧಗೊಳ್ಳುತ್ತವೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಆಗುತ್ತದೆ. 1930ರ ಸಂದರ್ಭದಲ್ಲಿ ಬಾಲಿವುಡ್ ಆರಂಭ ಆಯಿತು. ನಂತರ ಜಾಗತಿಕವಾಗಿ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಚಿತ್ರರಂಗವಾಗಿ ಬೆಳೆಯಿತು. ಬಾಲಿವುಡ್ನಲ್ಲಿ ಈವರೆಗೆ ಎಲ್ಲಾ ರೀತಿಯ ಸಿನಿಮಾಗಳು ಸಿದ್ಧಗೊಂಡಿವೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್ ಅವರಂತಹ ಅಪ್ರತಿಮ ನಟರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ನಲ್ಲಿ ರೊಮ್ಯಾಂಟಿಕ್ ಡ್ರಾಮಾದಿಂದ ಹಿಡಿದು ಆ್ಯಕ್ಷನ್ ಪ್ಯಾಕ್ಡ್ ಬ್ಲಾಕ್‌ಬಸ್ಟರ್‌ಗಳವರೆಗೆ ವೈವಿಧ್ಯಮಯ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಾಲಿವುಡ್‌ನ ಪ್ರಭಾವವು ಮನರಂಜನೆಯನ್ನು ಮೀರಿ ವಿಸ್ತರಿಸಿದೆ.
‘ಹೌದು, ನಾನು ಬಾದ್‌ಶಾ ಪತ್ನಿ’: ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ
ಇಶಾ ರಿಖಿ ಅವರೊಂದಿಗೆ ಮದುವೆಯಾಗುವ ಮುನ್ನ ಬಾದ್‌ಶಾ ಅವರು ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2020ರಲ್ಲಿ ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರಾಗಿದ್ದರು. ಈ ಮಾಜಿ ದಂಪತಿಗೆ ಜೆಸ್ಸೆಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದು, ಬಾದ್‌ಶಾ ಮತ್ತು ಜಾಸ್ಮಿನ್ ಇಬ್ಬರೂ ಸೇರಿ ಮಗಳನ್ನು ಪೋಷಿಸುತ್ತಿದ್ದಾರೆ.
- Madan Kumar
- Updated on: Jun 11, 2026
- 3:19 pm
‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಗೆದ್ದಾಗ ಶಾರುಖ್ ಖಾನ್ ಮೌನ ತಾಳಿದ್ದರು. ಆದರೆ ಈಗ ‘ಆಲ್ಫಾ’ ಸಿನಿಮಾದ ಟೀಸರ್ ನೋಡಿ ಹೊಗಳಿದ್ದಾರೆ. ಅವರ ಈ ನಡೆ ಕಂಡು ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ‘ಧುರಂದರ್ ಯಶಸ್ಸಿನ ಬಗ್ಗೆ ನಿಮಗೆ ಅಸೂಯೆ ಇದೆಯೇ’ ಎಂದು ಅನೇಕರು ಪ್ರಶ್ನಿಸಿದ್ದಾರೆ.
- Madan Kumar
- Updated on: Jun 10, 2026
- 10:32 pm
ಗೆಳತಿ ಸಾವಿನ ನೋವಲ್ಲಿ ಸಲ್ಮಾನ್ ಖಾನ್; ಅಂತಿಮ ನಮನ ಸಲ್ಲಿಸಿದ ನಟ
ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಆಪ್ತ ಸ್ನೇಹಿತೆ ಹಾಗೂ ಕೇಶ ವಿನ್ಯಾಸಕಿ ಕುಮುದ್ ರಾಣೆ ನಿಧನದಿಂದ ತೀವ್ರ ದುಃಖಿತರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಮುದ್‌ಗೆ ಸಲ್ಮಾನ್ ಖಾನ್ ಕುಟುಂಬದವರು ಅಂತಿಮ ನಮನ ಸಲ್ಲಿಸಿದ್ದಾರೆ. ಸಲ್ಮಾನ್ ಮತ್ತು ಸೊಹೈಲ್ ಪುತ್ರ ನಿರ್ವಾಣ ಭಾವುಕರಾಗಿ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ಸಲ್ಮಾನ್ ಅವರ ದುಃಖ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಘಟನೆ ಸಲ್ಮಾನ್ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ.
- Shreelaxmi H
- Updated on: Jun 10, 2026
- 8:02 am
ಸನ್ನಿ ಡಿಯೋಲ್, ಪ್ರೀತಿ ಜಿಂಟಾ ನಟನೆಯ ‘ಲಾಹೋರ್ 1947’ ಚಿತ್ರದ ಶೀರ್ಷಿಕೆ ಬದಲು; ಹೊಸ ಟೈಟಲ್ ಏನು?
‘ಲಾಹೋರ್ 1947’ ಚಿತ್ರದ ಟೈಟಲ್ ಬದಲಾವಣೆ ಮಾಡಲಾಗಿದೆ. ಹೊಸ ಶೀರ್ಷಿಕೆಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ಶಬಾನಾ ಅಜ್ಮಿ, ಪ್ರೀತಿ ಜಿಂಟಾ, ಅಲಿ ಫಜಲ್, ಕರಣ್ ಡಿಯೋಲ್ ಮುಂತಾದವರು ನಟಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದು, ಜಾವೇದ್ ಅಖ್ತರ್ ಸಾಹಿತ್ಯ ಬರೆದಿದ್ದಾರೆ.
- Madan Kumar
- Updated on: Jun 9, 2026
- 9:06 pm
ಜೂನ್ 12ರಿಂದ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಅಕ್ಷಯ್ ಕುಮಾರ್ ಸಿನಿಮಾ ‘ಭೂತ್ ಬಂಗ್ಲ’
ನಟ ಅಕ್ಷಯ್ ಕುಮಾರ್ ಅವರು ‘ಭೂತ್ ಬಂಗ್ಲಾ’ ಸಿನಿಮಾ ಮೂಲಕ ಯಶಸ್ಸು ಕಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಬಹುದು. ಜೂನ್ 12ರಿಂದ ಒಟಿಟಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ಪರೇಶ್ ರಾವಲ್, ಟಬು, ರಾಜ್‌ಪಾಲ್ ಯಾದವ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
- Madan Kumar
- Updated on: Jun 9, 2026
- 8:01 pm
ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕವೂ ನನಗೆ ಕೆಲಸ ಸಿಗಲಿಲ್ಲ: ಸತ್ಯ ತೆರೆದಿಟ್ಟ ಕಂಗನಾ ರಣಾವತ್
ಮಧುರ್ ಭಂಡಾರ್ಕರ್ ನಿರ್ದೇಶನದ ‘ಫ್ಯಾಷನ್’ ಚಿತ್ರದ ನಟನೆಗಾಗಿ ಕಂಗನಾ ರಣಾವತ್ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಇದೇ ಚಿತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ನ್ಯಾಷನಲ್ ಅವಾರ್ಡ್ ಸಿಕ್ಕ ಬಳಿಕವೂ ಕಂಗನಾ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ.
- Madan Kumar
- Updated on: Jun 9, 2026
- 3:27 pm
ಸೋಮವಾರದ ಪರೀಕ್ಷೆಯಲ್ಲಿ ಹಿನ್ನಡೆ ಕಂಡ ಬಾಬಿ ಡಿಯೋಲ್ ನಟನೆಯ ‘ಬಂದರ್’ ಸಿನಿಮಾ
‘ಬಂದರ್’ ಸಿನಿಮಾದಲ್ಲಿ ಬಾಬಿ ಡಿಯೋಲ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳು ಸಿಗುತ್ತಿದ್ದರೂ, ಅದು ದೊಡ್ಡ ಮಟ್ಟದ ಕಲೆಕ್ಷನ್ ಆಗಿ ಬದಲಾಗುತ್ತಿಲ್ಲ. ಸೋಮವಾರದ ಪರೀಕ್ಷೆಯಲ್ಲಿ ಈ ಸಿನಿಮಾಗೆ ಹಿನ್ನಡೆ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಕುಸಿತ ಆಗಿದೆ.
- Madan Kumar
- Updated on: Jun 9, 2026
- 3:00 pm
‘ಕ್ರಿಶ್ 4’ ನಿರ್ದೇಶಕ ಹೃತಿಕ್-ನಿರ್ಮಾಣ ಸಂಸ್ಥೆ ಮಧ್ಯೆ ಭಿನ್ನಾಭಿಪ್ರಾಯ? ಸಿಕ್ತು ಸ್ಪಷ್ಟನೆ
'ಕ್ರಿಶ್ 4' ಚಿತ್ರದ ನಿರ್ದೇಶನ ಮತ್ತು ಬಜೆಟ್ ಕುರಿತ ವದಂತಿಗಳಿಗೆ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ. ಹೃತಿಕ್ ರೋಷನ್ ನಿರ್ದೇಶಕರಾಗಿದ್ದು, 500 ಕೋಟಿ ಬಜೆಟ್ ಭಿನ್ನಾಭಿಪ್ರಾಯ ಸುಳ್ಳು ಎಂದಿದ್ದಾರೆ. ಯಾವುದೇ ಕಲಹವಿಲ್ಲ, ಹೃತಿಕ್ ಸದ್ಯ ಸ್ವಂತ ಕೆಲಸಗಳಲ್ಲಿ ನಿರತರಾಗಿದ್ದು, ಚಿತ್ರೀಕರಣ ಈ ವರ್ಷದ ಅಂತ್ಯದ ವೇಳೆಗೆ ಆರಂಭವಾಗುವ ನಿರೀಕ್ಷೆಯಿದೆ. ನಿರ್ದೇಶನದ ಜವಾಬ್ದಾರಿಯನ್ನು ಹೃತಿಕ್‌ಗೆ ವಹಿಸಿರುವುದಕ್ಕೆ ರಾಕೇಶ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
- Rajesh Duggumane
- Updated on: Jun 9, 2026
- 7:32 am
ಮುಖ ವಿಪರೀತ ಊದಿಕೊಂಡಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟಿ ಉರ್ಫಿ ಜಾವೇದ್
ಉರ್ಫಿ ಜಾವೇದ್ ಅವರ ಹೆಲ್ತ್ ಅಪ್‌ಡೇಟ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಮೊದಲು ತಮ್ಮ ಮುಖ ವಿಪರೀತ ಊದಿಕೊಂಡಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ತಾವು ಯಾವುದೇ ಕಾಸ್ಮೆಟಿಕ್ ಫಿಲ್ಲರ್ಸ್ ಮಾಡಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
- Madan Kumar
- Updated on: Jun 8, 2026
- 10:37 pm
1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್
‘ವೆಲ್ಕಮ್’ ಮತ್ತು ‘ವೆಲ್ಕಮ್ ಬ್ಯಾಕ್’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿದ್ದವು. ಹೀಗಾಗಿ ಈ ಫ್ರಾಂಚೈಸಿಯ ಮೂರನೇ ಭಾಗದ ಮೇಲೂ ಪ್ರೇಕ್ಷಕರಿಗೆ ಭಾರಿ ಕ್ರೇಜ್ ಇದೆ. ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ರಿಲೀಸ್‌ಗೆ ಮುನ್ನವೇ 120 ಕೋಟಿ ರೂಪಾಯಿ ಆದಾಯ ಗಳಿಸಿದೆ ಎನ್ನಲಾಗಿದೆ. ಇದರಿಂದಾಗಿ ಚಿತ್ರತಂಡ ಸೇಫ್ ಆಗಿದೆ.
- Madan Kumar
- Updated on: Jun 8, 2026
- 7:21 pm
ಭಾರತದ ಆಹಾರ ಕಲಬೆರಕೆ ದಂಧೆ ಬಿಚ್ಚಿಡಲಿದೆ ‘ದಿ ಇಂಡಿಯಾ ಸ್ಟೋರಿ’; ಗಮನ ಸೆಳೆದ ಟೀಸರ್
ಭಾರತದಲ್ಲಿ ಆಹಾರ ಕಲಬೆರಕೆಯ ಜಾಲ ದೊಡ್ಡದಾಗಿದೆ. ಅದರ ಬಗ್ಗೆ ‘ದಿ ಇಂಡಿಯಾ ಸ್ಟೋರಿ’ ಸಿನಿಮಾದಲ್ಲಿ ತೋರಿಸಲಾಗುವುದು. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಶ್ರೇಯಸ್ ತಲ್ಪಾಡೆ ಮತ್ತು ಕಾಜಲ್ ಅಗರ್ವಾಲ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Jun 8, 2026
- 5:04 pm
ನಷ್ಟದ ಭೀತಿಯಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ನಿರ್ಮಾಪಕರು
ಭಾರಿ ನಿರೀಕ್ಷೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. 55 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿತವಾದ ಈ ಚಿತ್ರ ಕನಿಷ್ಠ 110 ಕೋಟಿ ಗಳಿಸಬೇಕಿತ್ತು. ಆದರೆ, ಕಳಪೆ ಗಳಿಕೆಯಿಂದ ನಿರ್ಮಾಪಕರಿಗೆ ಕೋಟಿಗಟ್ಟಲೆ ನಷ್ಟ ಖಚಿತವಾಗಿದೆ. ದೊಡ್ಡ ತಾರಾಗಣ ಹಾಗೂ ಭರ್ಜರಿ ಪ್ರಚಾರವಿದ್ದರೂ, ಸಿನಿಮಾ ಯಶಸ್ಸಿಗೆ ಗ್ಯಾರಂಟಿ ಇಲ್ಲ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.
- Rajesh Duggumane
- Updated on: Jun 8, 2026
- 10:51 am