Toxic Movie
‘ಕೆಜಿಎಫ್ 2’ ಬಳಿಕ ಯಶ್ ಒಪ್ಪಿಕೊಂಡ ಮೊದಲ ಸಿನಿಮಾ ಇದು. ಯಶ್ ನಟಿಸುತ್ತಿರುವ 19ನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಕೆ.ವೆಂಕಟ್ ನಾರಾಯಣ್ ಅವರು ಇದನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಜೊತೆಗೆ ಮಲಯಾಳಂ, ತಮಿಳು ಮೊದಲಾದ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ನಟಿಸಿದ್ದಾರೆ. ಆಗಸ್ಟ್ 8ರಂದು ಸಿನಿಮಾದ ಮುಹೂರ್ತ ನೆರವೇರಿದೆ. 2026ರ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ಸಿದ್ಧಪಡಿಸಲಾಗಿದೆ. ಯಶ್ ಅವರು ಈ ಚಿತ್ರಕ್ಕಾಗಿ ಬೇರೆ ಅವತಾರ ತಾಳಿದ್ದಾರೆ. ಈ ಸಿನಿಮಾದ ಬಗ್ಗೆ ಕೇವಲ ಕನ್ನಡದವರಿಗೆ ಮಾತ್ರವಲ್ಲದೆ ಪರಭಾಷೆಯ ಸಿನಿ ಪ್ರಿಯರಿಗೂ ನಿರೀಕ್ಷೆ ಸೃಷ್ಟಿ ಆಗಿದೆ ಅನ್ನೋದು ವಿಶೇಷ.
‘ಟಾಕ್ಸಿಕ್’ ಸೆಟ್‌ನಿಂದ ಬಿಗ್ ಅಪ್ಡೇಟ್: ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ಮೇಕಿಂಗ್ ಝಲಕ್ ರಿಲೀಸ್
'ಟಾಕ್ಸಿಕ್' ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ವಿಶೇಷ ಬಿಟಿಎಸ್ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋ, ಚಿತ್ರದ ಬೃಹತ್ ಮೇಕಿಂಗ್, ಅದ್ದೂರಿ ಆಕ್ಷನ್ ಹಾಗೂ ಗೀತು ಮೋಹನ್‌ದಾಸ್ ಅವರ ಅದ್ಭುತ ನಿರ್ದೇಶನ ಶೈಲಿಯನ್ನು ಅನಾವರಣಗೊಳಿಸಿದೆ. ಪ್ಯಾನ್-ಇಂಡಿಯಾ ಪ್ರಾಜೆಕ್ಟ್ 'ಟಾಕ್ಸಿಕ್' ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
- Rajesh Duggumane
- Updated on: Jun 8, 2026
- 11:24 am
‘ಟಾಕ್ಸಿಕ್’ ಚಿತ್ರಕ್ಕೆ ಯೋಗರಾಜ್ ಭಟ್ ಬರೆದ ಹಾಡುಗಳೆಷ್ಟು? ಲೆಕ್ಕ ಕೊಟ್ಟ ನಿರ್ದೇಶಕ
ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾಗಾಗಿ 2-3 ಹಾಡುಗಳನ್ನು ಬರೆದಿದ್ದಾಗಿ ಯೋಗರಾಜ್ ಭಟ್ ಅವರು ಒಪ್ಪಿಕೊಂಡಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಅತೀವ ಸಂಭ್ರಮ ಮೂಡಿಸಿದೆ. ಚಿತ್ರವು ಅಂತರರಾಷ್ಟ್ರೀಯ ತಂತ್ರಜ್ಞರ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ರಿಲೀಸ್‌ಗೆ ಕಾಯುತ್ತಿರುವ ಫ್ಯಾನ್ಸ್, ಚಿತ್ರವು ಅದ್ಭುತ ದೃಶ್ಯಕಾವ್ಯವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
- Rajesh Duggumane
- Updated on: Jun 8, 2026
- 7:40 am
‘ಟಾಕ್ಸಿಕ್’ ರಿಶೂಟ್, ಮುಂದಿನ ವರ್ಷ ರಿಲೀಸ್ ಎಂದು ಹೇಳಿ ಉಲ್ಟಾ ಹೊಡೆದ ಬಾಕ್ಸ್ ಆಫೀಸ್ ಪಂಡಿತ
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮುಂದಕ್ಕೆ ಹೋಗಿದೆ, ರೀಶೂಟ್ ಆಗುತ್ತಿದೆ ಎಂಬ ಕಾಲಿವುಡ್ ವದಂತಿಗಳಿಗೆ ತೆರೆ ಬಿದ್ದಿದೆ. ಕೆಲ ಬಾಕ್ಸ್ ಆಫೀಸ್ ಪಂಡಿತರು ಹಬ್ಬಿಸಿದ 2027 ರಿಲೀಸ್ ಸುದ್ದಿ ಸುಳ್ಳು ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟಪಡಿಸಿದೆ. ಕನ್ನಡ ಚಿತ್ರರಂಗದ ಬೆಳೆಯುತ್ತಿರುವ ಜನಪ್ರಿಯತೆ ನೋಡಿ ಕಾಲಿವುಡ್ ಮಂದಿ ಹೊಟ್ಟೆ ಉರಿದುಕೊಂಡು ಇಂತಹ ತಂತ್ರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
- Rajesh Duggumane
- Updated on: Jun 4, 2026
- 2:51 pm
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಜೂನ್ 8ರಂದು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಜನ್ಮದಿನದಂದು ಪ್ರಮುಖ ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. 'ಕೆಜಿಎಫ್' ನಂತರ ಯಶ್ ಅವರ ಈ ಜಾಗತಿಕ ಯೋಜನೆ ಕುತೂಹಲ ಮೂಡಿಸಿದ್ದು, ಅಂದೇ ಹೊಸ ಪೋಸ್ಟರ್ ಅಥವಾ ಖಚಿತ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವ ಸಾಧ್ಯತೆಯಿದೆ.
- Rajesh Duggumane
- Updated on: Jun 3, 2026
- 1:21 pm
ಅಲಿಬಾಗ್ನಲ್ಲಿ 24 ಕೋಟಿ ರೂಪಾಯಿ ಆಸ್ತಿ ಖರೀದಿಸಿದ ಯಶ್, ರಾಧಿಕಾ ಪಂಡಿತ್
ಬಹುನಿರೀಕ್ಷಿತ ಸಿನಿಮಾಗಳಾದ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಬಿಡುಗಡೆಯ ಕೆಲಸಗಳಲ್ಲಿ ನಟ ಯಶ್ ಅವರು ಬ್ಯುಸಿಯಾಗಿದ್ದಾರೆ. ಅದರ ನಡುವೆ ಅವರು ಖರೀದಿಸಿರುವ ಹೊಸ ಆಸ್ತಿಯ ಬಗ್ಗೆ ಸುದ್ದಿ ಆಗಿದೆ. ಬಾಲಿವುಡ್ ಸೆಲೆಬ್ರಿಟಿಗಳ ರೀತಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಅಲಿಬಾಗ್ನಲ್ಲಿ ಆಸ್ತಿ ಖರೀದಿಸಿದ್ದಾರೆ.
- Madan Kumar
- Updated on: Jun 2, 2026
- 9:40 pm
‘ರಾಕಿಂಗ್ ಸ್ಟಾರ್ ಯಶ್ ಕೇವಲ ನಟನಲ್ಲ..’; ರಾಮಾಯಣ ನಿರ್ಮಾಪಕನ ಮೆಚ್ಚುಗೆ
ರಾಕಿಂಗ್ ಸ್ಟಾರ್ ಯಶ್ ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರದ ಜೊತೆಗೆ ಸಹ-ನಿರ್ಮಾಪಕರಾಗಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ರಕಾರ, ಯಶ್ ಕೇವಲ ನಟರಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ವಿಶ್ವದರ್ಜೆಯ ಚಿತ್ರವನ್ನು ನಿರ್ಮಿಸುವ ದೃಷ್ಟಿಕೋನ ಹೊಂದಿದ್ದಾರೆ. ಭಾರತದಿಂದ ವಿಶ್ವಕ್ಕೆ ಅನನ್ಯ ಸಿನಿಮಾ ನೀಡುವ ಅವರ ಬದ್ಧತೆಯನ್ನು ನಮಿತ್ ಶ್ಲಾಘಿಸಿದ್ದಾರೆ.
- Rajesh Duggumane
- Updated on: Jun 2, 2026
- 12:13 pm
‘ಟಾಕ್ಸಿಕ್’ ಚಿತ್ರವನ್ನು ಹಾಡಿಹೊಗಳಿದ ಕಿಯಾರಾ ಅಡ್ವಾಣಿ; ಹೆಚ್ಚಿತು ನಿರೀಕ್ಷೆ
ಕಿಯಾರಾ ಅಡ್ವಾಣಿ 'ಟಾಕ್ಸಿಕ್' ಚಿತ್ರದ ಕುರಿತು ಮಾತನಾಡಿ, ಅದು ಸಂಬಂಧಗಳ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಎಂದಿದ್ದಾರೆ. ಯಶ್ ನಟನೆಯ ಈ ಸಿನಿಮಾದ ದ್ವಿಭಾಷಾ (ಕನ್ನಡ-ಇಂಗ್ಲಿಷ್) ಚಿತ್ರೀಕರಣ ತಮಗೆ ಸವಾಲಾಗಿತ್ತೆಂದು ಅವರು ವಿವರಿಸಿದರು. ತಮ್ಮ ವೃತ್ತಿಪರತೆಯಿಂದ ಕನ್ನಡ ಸಂಭಾಷಣೆಗಳನ್ನು ಕಂಠಪಾಠ ಮಾಡಿದ ಅನುಭವ ಹಂಚಿಕೊಂಡ ಕಿಯಾರಾ, 'ಟಾಕ್ಸಿಕ್' ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
- Rajesh Duggumane
- Updated on: May 29, 2026
- 7:40 am
ಮಗ ಯಶ್ ಪರ ನಿಂತ ಯಶ್ ತಾಯಿ ಪುಷ್ಪಾ: ‘ಟಾಕ್ಸಿಕ್’ ಬಗ್ಗೆ ಹೇಳಿದ್ದಿಷ್ಟು
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ, 'ಟಾಕ್ಸಿಕ್' ಟೀಸರ್‌ನ ಬೋಲ್ಡ್ ದೃಶ್ಯ ಮತ್ತು ಚಿತ್ರದ ವಿಳಂಬದ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಕೇವಲ ಟೀಸರ್ ನೋಡಿ ನಿರ್ಧರಿಸಬೇಡಿ, ದೊಡ್ಡ ಬಜೆಟ್ ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಹೆಮ್ಮೆಯ ವಿಷಯ ಎಂದಿದ್ದಾರೆ. ತಮ್ಮ ಮಗ ಯಶ್ ಮಾಡುವ ಸಿನಿಮಾಗಳಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
- Rajesh Duggumane
- Updated on: May 25, 2026
- 11:36 am
‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್
ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಲ್ಲಿ ಅನೇಕ ಮಹಿಳೆಯರು ಕೆಲಸ ಮಾಡಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಯಶ್ ಜೊತೆಗೆ ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮುಂತಾದ ನಟಿಯರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
- Madan Kumar
- Updated on: May 24, 2026
- 11:25 am
‘ಟಾಕ್ಸಿಕ್’ ಸಿನಿಮಾ ಪದೇ ಪದೇ ಪೋಸ್ಟ್‌ಪೋನ್; ಅಭಿಮಾನಿಗಳ ಬೇಸರದ ಬಗ್ಗೆ ಯಶ್ ಮಾತು
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಪದೇ ಪದೇ ಮುಂದೂಡಲ್ಪಟ್ಟಿದೆ. ಇದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಯಶ್ ಈ ವಿಳಂಬಕ್ಕೆ ಜಾಗತಿಕ ಮಾರುಕಟ್ಟೆ ಮತ್ತು ಚಿತ್ರದ ಗುಣಮಟ್ಟವನ್ನು ಕಾರಣವೆಂದು ಸ್ಪಷ್ಟಪಡಿಸಿದ್ದಾರೆ. ಅಂತರಾಷ್ಟ್ರೀಯ ಸವಾಲುಗಳ ಮಧ್ಯೆಯೂ ಜಾಗತಿಕ ಮಟ್ಟದಲ್ಲಿ ದೊಡ್ಡ ಪರಿಣಾಮ ಬೀರಲು ಈ ಕಠಿಣ ನಿರ್ಧಾರ ಅನಿವಾರ್ಯ ಎಂದು ಅವರು ವಿವರಿಸಿದ್ದಾರೆ.
- Rajesh Duggumane
- Updated on: May 18, 2026
- 9:01 am
‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ಹಲವು ಬಲವಾದ ಕಾರಣಗಳಿವೆ: ನಟಿ ತಾರಾ ಸುತಾರಿಯಾ
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ 2 ಬಾರಿ ಮುಂದೂಡಿಕೆ ಆಯಿತು. ಆ ಬಗ್ಗೆ ನಟಿ ತಾರಾ ಸುತಾರಿಯಾ ಅವರು ಮಾತನಾಡಿದ್ದಾರೆ. ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದಕ್ಕೆ ಅಭಿಮಾನಿಗಳಿಗೆ ಬೇಸರ ಇದೆ ಎಂಬುದು ನಿಜ. ಆದರೆ ಆ ಕಾಯುವಿಕೆಗೆ ಫಲ ಸಿಗಲಿದೆ ಎಂಬ ನಂಬಿಕೆ ತಾರಾ ಸುತಾರಿಯಾ ಅವರಿಗೆ ಇದೆ.
- Madan Kumar
- Updated on: May 17, 2026
- 8:06 am
‘ಟಾಕ್ಸಿಕ್’ ಶೂಟಿಂಗ್ ವೇಳೆ ವ್ಯಾನ್ ಅಲ್ಲಿ ಕುಳಿತು ಹೊಟ್ಟೆಯಲ್ಲಿರೋ ಮಗು ಜೊತೆ ಮಾತನಾಡುತ್ತಿದ್ದ ಕಿಯಾರಾ
Kiara Advani: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಾಯ್ತನದ ನಂತರದ ಸವಾಲುಗಳು, ದೈಹಿಕ-ಮಾನಸಿಕ ಬದಲಾವಣೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. 7 ತಿಂಗಳ ಗರ್ಭಿಣಿಯಾಗಿದ್ದಾಗಲೂ ಯಶ್ ಅವರ 'ಟಾಕ್ಸಿಕ್' ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಮಗುವಿನೊಂದಿಗೆ ಮಾತನಾಡಿದ್ದನ್ನು ನೆನೆದಿದ್ದಾರೆ. ಪತಿ ಸಿದ್ಧಾರ್ಥ್ ಬೆಂಬಲದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
- Rajesh Duggumane
- Updated on: May 11, 2026
- 8:49 am