Virat Kohli
ಟೀಂ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ನಾಯಕರ ಪೈಕಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಕೊಹ್ಲಿ ನಾಯಕತ್ವದಲ್ಲಿ ತಂಡ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರಬಹುದು. ಆದರೆ ಅವರ ನಾಯಕತ್ವದಲ್ಲಿ ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ನ ಐಸಿಸಿ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನಕ್ಕೇರಿತ್ತು. ತಂಡದ ಪರ ಇದುವರೆಗೆ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 27 ಶತಕ, 7 ಅರ್ಧಶತಕ ಹಾಗೂ 30 ಅರ್ಧಶತಕ ಸೇರಿದಂತೆ ಒಟ್ಟು 8848 ರನ್ ಸಿಡಿಸಿದ್ದಾರೆ. ಹಾಗೆಯೇ ಏಕದಿನದಲ್ಲಿ 292 ಪಂದ್ಯಗಳನ್ನಾಡಿರುವ ವಿರಾಟ್ 50 ಶತಕ ಹಾಗೂ 72 ಅರ್ಧಶತಕ ಒಳಗೊಂಡಂತೆ 13838 ರನ್ ಕಲೆಹಾಕಿದ್ದರು. ಟಿ20 ಕ್ರಿಕೆಟ್ನಲ್ಲೂ ಛಾಪು ಮೂಡಿಸಿರುವ ವಿರಾಟ್ 117 ಪಂದ್ಯಗಳಲ್ಲಿ 1 ಹಾಗೂ 37 ಅರ್ಧಶತಕ ಸೇರಿದಂತೆ 4037 ರನ್ ಕಲೆಹಾಕಿದ್ದಾರೆ. ಐಪಿಎಲ್ನಲ್ಲೂ ತನ್ನ ಪಾರುಪತ್ಯ ಸೃಷ್ಟಿಸಿರುವ ವಿರಾಟ್ ಆರ್‌ಸಿಬಿ ಪರ ಕಣಕ್ಕಿಳಿಯುತ್ತಿದ್ದು, ಇಲ್ಲಿಯವರೆಗೆ 237 ಪಂದ್ಯಗಳನ್ನಾಡಿದ್ದು, 7 ಶತಕ ಹಾಗೂ 50 ಅರ್ಧಶತಕ ಸೇರಿದಂತೆ 7263 ರನ್ ಕಲೆಹಾಕಿದ್ದಾರೆ.
ಒಲಿಂಪಿಕ್ಸ್ಗೆ ಕೊಹ್ಲಿಯನ್ನು ಆಯ್ಕೆ ಮಾಡಿ: ಮಾಜಿ ಆಟಗಾರನ ಸಲಹೆ!
Los Angeles Olympics 2028: ಲಾಸ್ ಏಂಜಲೀಸ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಕೂಡ ಆಡಲಾಗುತ್ತದೆ. ಇದಕ್ಕಾಗಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಖಚಿತಪಡಿಸಿದೆ. ಈ ಆರು ತಂಡಗಳಲ್ಲಿ ಟೀಮ್ ಇಂಡಿಯಾ ಕೂಡ ಕಾಣಿಸಿಕೊಳ್ಳಲಿದೆ.
- Zahir Yusuf
- Updated on: Jun 11, 2026
- 10:31 am
ವಿರಾಟ್ ಕೊಹ್ಲಿ ದಾಖಲೆ ಉಡೀಸ್: ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ
Ruturaj Gaikwad World Record: ಏಕದಿನ ಕ್ರಿಕೆಟ್‌ನಲ್ಲಿ ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 96 ಇನಿಂಗ್ಸ್ ಗಳ ಮೂಲಕ. ಅಂದರೆ ಈವರೆಗೆ 96 ಲಿಸ್ಟ್ ಎ ಇನಿಂಗ್ಸ್ ಆಡಿರುವ ರುತುರಾಜ್ ಗಾಯಕ್ವಾಡ್ ಅತ್ಯುತ್ತಮ ಸರಾಸರಿಯೊಂದಿಗೆ 5 ಸಾವಿರ ರನ್ ಪೂರೈಸಿದ್ದಾರೆ. ಈ ಐದು ಸಾವಿರ ರನ್ ಗಳೊಂದಿಗೆ ವರ್ಲ್ಡ್ ರೆಕಾರ್ಡ್ ಗೆ ಕೊರೊಳೊಡ್ಡಿದ್ದಾರೆ.
- Zahir Yusuf
- Updated on: Jun 10, 2026
- 2:51 pm
ಅನ್ಫಿಟ್… ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?
Virat Kohli: ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಜೂನ್ 13 ರಿಂದ ಶುರುವಾಗಲಿದೆ. ಧರ್ಮಶಾಲಾ, ಲಕ್ನೋ ಹಾಗೂ ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯಗಳಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. ಅಲ್ಲದೆ ಅವರ ಬದಲಿಗೆ ಯುವ ದಾಂಡಿಗನನ್ನು ಆಯ್ಕೆ ಮಾಡಲಾಗಿದೆ.
- Zahir Yusuf
- Updated on: Jun 9, 2026
- 10:10 am
ಬರೋಬ್ಬರಿ 3,542 ಕೋಟಿ ರೂ! ಕಿಂಗ್ ಖಾನ್ನ ಹಿಂದಿಕ್ಕಿದ ಕಿಂಗ್ ಕೊಹ್ಲಿ
ಭಾರತೀಯ ಮಾರುಕಟ್ಟೆಯಲ್ಲಿ ಸೆಲೆಬ್ರಿಟಿಗಳ ಪ್ರಭಾವ ಕೇವಲ ಸಿನಿಮಾ ಮತ್ತು ಕ್ರೀಡಾಂಗಣಕ್ಕೆ ಸೀಮಿತವಾಗಿಲ್ಲ. ಅವರು ಪ್ರಮುಖ ವಾಣಿಜ್ಯ ಬ್ರಾಂಡ್‌ಗಳ ಯಶಸ್ಸನ್ನು ನಿರ್ಧರಿಸುವ ಶಕ್ತಿಯಾಗಿದ್ದಾರೆ. ಇದೇ ಮೊದಲ ಬಾರಿಗೆ, ಜಾಗತಿಕ ಬ್ರಾಂಡ್ ಕನ್ಸಲ್ಟೆನ್ಸಿ ಸಂಸ್ಥೆ 'ಇಂಟರ್‌ಬ್ರಾಂಡ್' ಮತ್ತು ಪ್ರಖ್ಯಾತ ಉದ್ಯಮ ನಿಯತಕಾಲಿಕೆ 'ಫಾರ್ಚೂನ್ ಇಂಡಿಯಾ' ಜಂಟಿಯಾಗಿ ಆರ್ಥಿಕ ಮಾನದಂಡಗಳ ಅಡಿಯಲ್ಲಿ ಭಾರತದ ಅತ್ಯಮೂಲ್ಯ ಸೆಲೆಬ್ರಿಟಿಗಳ ಪಟ್ಟಿಯನ್ನು ಸಿದ್ಧಪಡಿಸಿವೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಟಾಪ್-10 ಸೆಲೆಬ್ರಿಟಿಗಳ ಲಿಸ್ಟ್ ಇಲ್ಲಿದೆ.
- Zahir Yusuf
- Updated on: Jun 9, 2026
- 8:25 am
IND vs AFG: ಏಕದಿನ ಸರಣಿಯಿಂದ ಕೊಹ್ಲಿ ಔಟ್..! ಬದಲಿ ಆಟಗಾರನನ್ನು ಘೋಷಿಸಿದ ಬಿಸಿಸಿಐ
BCCI Confirms Kohli Out of IND vs AFG ODI Series: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಗೆ ಬಿಸಿಸಿಐ ತಂಡ ಪ್ರಕಟಿಸಿದ್ದು, ವಿರಾಟ್ ಕೊಹ್ಲಿ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕೊಹ್ಲಿ ಚೇತರಿಕೆಗೆ ಸಮಯಾವಕಾಶ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಇದು ಜೈಸ್ವಾಲ್‌ಗೆ ಉತ್ತಮ ಅವಕಾಶವಾಗಿದೆ.
- pruthvi Shankar
- Updated on: Jun 6, 2026
- 4:23 pm
IND vs AFG: ಏಕದಿನ ಸರಣಿಯಿಂದ ಕೊಹ್ಲಿ ಜೊತೆಗೆ ರೋಹಿತ್ ಕೂಡ ಔಟ್?
India vs Afghanistan Series: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಕ್ರಿಕೆಟ್ ಸರಣಿ ಜೂನ್ 6 ರಿಂದ ಪ್ರಾರಂಭವಾಗಲಿದೆ. ಆದರೆ, ಈ ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದು, ಮಂಡಿರಜ್ಜು ಗಾಯದಿಂದ ರೋಹಿತ್ ಶರ್ಮಾ ಆಡುವುದು ಅನುಮಾನವಾಗಿದೆ. ಈ ದಿಗ್ಗಜರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಜೂನ್ 6 ರಂದು ಆಯ್ಕೆದಾರರು ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರಂತಹ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
- pruthvi Shankar
- Updated on: Jun 4, 2026
- 7:36 pm
IND vs AFG: ಕೊಹ್ಲಿ ಬದಲು ಯಾರಿಗೆ ಅವಕಾಶ? ಹೇಗಿರಲಿದೆ ಪ್ಲೇಯಿಂಗ್ 11?
Virat Kohli Injury: ವಿರಾಟ್ ಕೊಹ್ಲಿ ಗಾಯದ ಕಾರಣ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಆದ ಮಂಡಿರಜ್ಜು ಗಾಯದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ, ಇದು ವಿಶ್ವಕಪ್ ಸಿದ್ಧತೆಗಳಿಗೆ ಹಿನ್ನಡೆಯಾಗಿದೆ. ಅವರ ಬದಲಿಗೆ ಇಶಾನ್ ಕಿಶನ್ ಆಡುವ ಸಾಧ್ಯತೆಯಿದೆ. ಟೀಂ ಇಂಡಿಯಾದಲ್ಲಿ ರೋಹಿತ್, ಗಿಲ್, ಶ್ರೇಯಸ್, ರಾಹುಲ್ ಮತ್ತು ಆಲ್‌ರೌಂಡರ್‌ಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
- pruthvi Shankar
- Updated on: Jun 4, 2026
- 4:01 pm
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ?
Rohit Sharma and Virat Kohli Practice: ಐಪಿಎಲ್ ನಂತರ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧದ ಸರಣಿಯೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೂನ್ 9 ರಿಂದ ಮುಲ್ಲನ್‌ಪುರದಲ್ಲಿ ಅಭ್ಯಾಸ ನಡೆಸಲಿದ್ದು, ಜೂನ್ 13 ರಂದು ಧರ್ಮಶಾಲಾದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಸರಣಿಯು 2027ರ ವಿಶ್ವಕಪ್‌ಗೆ ಪ್ರಮುಖ ಸಿದ್ಧತೆಯಾಗಿದ್ದು, ಇಬ್ಬರೂ ಆಟಗಾರರ ಫಿಟ್‌ನೆಸ್ ಮತ್ತು ಫಾರ್ಮ್ ನಿರ್ಣಾಯಕವಾಗಿದೆ.
- pruthvi Shankar
- Updated on: Jun 3, 2026
- 7:13 pm
IPL 2026: ಈ ಐಪಿಎಲ್ನಲ್ಲೂ ಈ 5 ದಾಖಲೆಗಳನ್ನು ಮುರಿಯಲಾಗಲಿಲ್ಲ..!
5 Historic Unbroken Records: 2026ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಸೀಸನ್‌ನಲ್ಲೂ ಕ್ರಿಸ್ ಗೇಲ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ (175 ರನ್), ವಿರಾಟ್ ಕೊಹ್ಲಿ ಅವರ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ (973 ರನ್) ಸೇರಿದಂತೆ ಐಪಿಎಲ್ ಇತಿಹಾಸದ 5 ಪ್ರಮುಖ ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ವೈಭವ್ ಸೂರ್ಯವಂಶಿ, ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದರೂ, ಗೇಲ್, ಕೊಹ್ಲಿ, ಪಟೇಲ್, ಬ್ರಾವೋ ಅವರ ದಾಖಲೆಗಳು ಅಚಲವಾಗಿ ಉಳಿದವು.
- pruthvi Shankar
- Updated on: Jun 3, 2026
- 6:29 pm
IPL 2026: ಅತ್ಯಧಿಕ ವೀಕ್ಷಣೆ ಕಂಡ 7 ಪಂದ್ಯಗಳಲ್ಲಿ ಆರ್ಸಿಬಿಯದ್ದೇ 6 ಪಂದ್ಯಗಳು ..!
Most Watched IPL 2026 Matches: 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟ ಗೆದ್ದಿದೆ. ಸತತ ಎರಡನೇ ಬಾರಿಗೆ ಕಪ್ ಎತ್ತಿ ಹಿಡಿದ ಆರ್‌ಸಿಬಿ, ತನ್ನ ಭರ್ಜರಿ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದ್ದಿದೆ. ಜಿಯೋಹಾಟ್‌ಸ್ಟಾರ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳಲ್ಲಿ 6 ಪಂದ್ಯಗಳು ಆರ್‌ಸಿಬಿ ಆಡಿದ ಪಂದ್ಯಗಳಾಗಿವೆ. ಇದು ಆರ್‌ಸಿಬಿ ತಂಡದ ಅಗಾಧ ಜನಪ್ರಿಯತೆ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಅದರ ಪ್ರಭಾವವನ್ನು ಸ್ಪಷ್ಟಪಡಿಸುತ್ತದೆ.
- pruthvi Shankar
- Updated on: Jun 3, 2026
- 5:04 pm
Spiritual Journey: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ?
ಸತತ ಎರಡನೇ ಭಾರೀ ಕಪ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಪ್ರೇಮಾನಂದ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಮೈದಾನದಲ್ಲಿ ವಿರಾಟ್ ಅಬ್ಬರಿಸಿದರೆ, ಬೆಳ್ಳಿ ಪರದೆಯ ಮೇಲೆ ಸಾಕಷ್ಟು ಖ್ಯಾತಿಗಳಿಸಿದವರು ಅನುಷ್ಕಾ. ಆದರೆ, ಇವರಿಬ್ಬರ ಗ್ಲಾಮರಸ್ ಬದುಕಿನ ಆಚೆಗೊಂದು ಶಾಂತ, ಆಧ್ಯಾತ್ಮಿಕ ಪ್ರಪಂಚವಿದೆ. ಈ ಹೈ-ಪ್ರೊಫೈಲ್ ಜೋಡಿ ಪ್ರೇಮಾನಂದ್ ಗುರೂಜಿಯವರ ಸನ್ನಿಧಿಗೆ ಪದೇ ಪದೇ ಭೇಟಿ ನೀಡಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Jun 2, 2026
- 5:05 pm
IPL 2026: ಅತಿ ಹೆಚ್ಚು ಪಂದ್ಯ ಶ್ರೇಷ್ಠ; ಅಗ್ರಸ್ಥಾನಕ್ಕೇರಿದ ವಿರಾಟ್ ಕೊಹ್ಲಿ
Virat Kohli most MoM awards: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2026 ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಅಜೇಯ 75 ರನ್ ಗಳಿಸಿ ಆರ್‌ಸಿಬಿಗೆ ಸತತ 2ನೇ ಟ್ರೋಫಿ ಗೆಲ್ಲಿಸಿಕೊಟ್ಟರು. ಈ ಅದ್ಭುತ ಆಟಕ್ಕಾಗಿ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದ ಕೊಹ್ಲಿ, ತಮ್ಮ 22ನೇ MoM ಪ್ರಶಸ್ತಿಯೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿದರು.
- pruthvi Shankar
- Updated on: Jun 1, 2026
- 10:40 pm