Video: ಮಹಿಳೆಯ ಮುಖಕ್ಕೆ ನೀರು ಎರಚಿ ತುಂಟಾಟ ಆಡಿದ ಮರಿಯಾನೆ

ಮರಿಯಾನೆಗಳ ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಖುಷಿ. ಕೆಲವೊಮ್ಮೆ ಅವುಗಳು ಮಕ್ಕಳಂತೆ ಆಡುತ್ತವೆ. ಇದೀಗ ಪುಟಾಣಿ ಆನೆಯೊಂದು ಮಹಿಳೆ ಜತೆಗೆ ತುಂಟಾಟಕ್ಕಿಳಿಗಿದೆ. ಸೊಂಡಿಲಿನಿಂದ ಆಕೆಯ ಮುಖಕ್ಕೆ ನೀರು ಎರಚಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮಹಿಳೆಯ ಮುಖಕ್ಕೆ ನೀರು ಎರಚಿ ತುಂಟಾಟ ಆಡಿದ ಮರಿಯಾನೆ
ವೈರಲ್‌ ವಿಡಿಯೋ
Image Credit source: Instagram

Updated on: Nov 20, 2026 | 5:33 PM

ಮರಿಯಾನೆಗಳು (elephants) ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಈ ಪುಟಾಣಿ ಆನೆಗಳ ಆಟ ತುಂಟಾಟ, ತಾಯಾನೆ ತನ್ನ ಮರಿಗಳ ಮೇಲೆ ತೋರುವ ಪ್ರೀತಿಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ಮಹಿಳೆ ಮುಖಕ್ಕೆ ನೀರು ಎರಚಿದೆ. ಪುಟಾಣಿ ಆನೆಯ ತುಂಟಾಟಕ್ಕೆ ಮಹಿಳೆ ಕ್ಯೂಟ್ ರಿಯಾಕ್ಷನ್ ಕೊಟ್ಟಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ನೀರು ಎರಚಿ ತುಂಟಾಟ ಆಡಿದ ಮರಿಯಾನೆ

ವಿಮೆನ್ ವೈಲ್ಡಿಂಗ್ (womenrewilding) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಟ್ಯಾಂಕ್ ನಲ್ಲಿದ್ದ ನೀರನ್ನು ಸೊಂಡಿಲಿನಿಂದ ತೆಗೆದು ಅಲ್ಲೇ ನಿಂತಿದ್ದ ಮಹಿಳೆಯ ಮುಖಕ್ಕೆ ಎರಚಿದೆ. ಪುಟಾಣಿ ಆನೆಯ ತುಂಟಾಟಕ್ಕೆ ಶಾಕ್ ಆದ ಮಹಿಳೆ ಅದರ ಮೈ ಮೇಲೆ ನೀರು ಎರಚಿ ತುಂಟಾಟ ಆಡಿರುವುದನ್ನು ಕಾಣಬಹುದು.

Loading...

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸಿದ ಮರಿಯಾನೆ, ವೈರಲ್‌ ಆಯ್ತು ಕ್ಯೂಟ್‌ ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಮಾರ್ನಿಂಗ್ ವಾಶ್ ಆಪ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:31 pm, Fri, 20 November 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us