Viral Video: ಏನಿದು ಆಶ್ಚರ್ಯ; ಶನಿ ದೇವರಿಗೆ ಪ್ರದಕ್ಷಿಣೆ ಹಾಕಿದ ಬೆಕ್ಕಣ್ಣ…

ಸಾಮಾನ್ಯವಾಗಿ ದೇವಾಲಯಕ್ಕೆ ಹೋದಾಗ ದೇವರಿಗೆ ಪ್ರದಕ್ಷಿಣೆ ಹಾಕಿ ದೇವರಲ್ಲಿ ಇಷ್ಟಾರ್ಥಗಳನ್ನು ಪೂರೈಸುವಂತೆ ಬೇಡಿಕೊಳ್ಳುತ್ತೇವೆ. ಆದರೆ ನೀವು ಎಂದಾದರೂ ಪ್ರಾಣಿಗಳು ದೇವರಿಗೆ ಪ್ರದಕ್ಷಿಣೆ ಹಾಕೋದನ್ನು ನೋಡಿದ್ದೀರಾ? ಪ್ರಾಣಿಗಳಿಗೆ ಇದೆಲ್ಲಾ ಹೇಗೆ ಗೊತ್ತಿರಲು ಸಾಧ್ಯ ಅಂತ ನೀವು ಯೋಚ್ನೆ ಮಾಡ್ಬೋದಲ್ವಾ. ಆದರೆ ಇಲ್ಲೊಂದು ಬೆಕ್ಕು ಶನಿ ದೇವರಿಗೆ ಭಕ್ತಪೂರ್ವಕವಾಗಿ ಪ್ರದಕ್ಷಿಣೆಯನ್ನು ಹಾಕುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ.

Viral Video: ಏನಿದು ಆಶ್ಚರ್ಯ; ಶನಿ ದೇವರಿಗೆ ಪ್ರದಕ್ಷಿಣೆ ಹಾಕಿದ ಬೆಕ್ಕಣ್ಣ…
Edited By:

Updated on: Mar 17, 2024 | 3:45 PM

ಮನುಷ್ಯ ಮನಸ್ಸಿಗೆ ನೆಮ್ಮದಿ ಸಿಗಲೆಂದು ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತೇವೆ. ದೇವರಿಗೆ ಪ್ರದಕ್ಷಿಣೆಯನ್ನು ಹಾಕಿ ಸಕಲ ಇಷ್ಟಾರ್ಥಗಳನ್ನು ಪೂರೈಸುವಂತೆ ಬೇಡಿಕೊಳ್ಳುತ್ತೇವೆ. ನಾವೆಲ್ಲರೂ ದೇವಾಲಕ್ಕೆ ಭೇಟಿ ನೀಡುವಂತಹದ್ದು, ಭಕ್ತಿ ಪೂರ್ವಕವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಆದರೆ ನೀವು ಎಂದಾದರೂ ಪ್ರಾಣಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸುವುದನ್ನಾಗಲಿ ಅಥವಾ ದೇವರಿಗೆ ಪ್ರದಕ್ಷಿಣೆ ಹಾಕುವುದನ್ನಾಗಲಿ ನೋಡಿದ್ದೀರಾ? ಅರೇ ಪ್ರಾಣಿಗಳಿಗಳಿಗೆ ಅದೆಲ್ಲಾ ಹೇಗೆ ಗೊತ್ತಾಗುತ್ತೆ ಅಂತ ನೀವು ಅಂದುಕೊಳ್ಳಬಹುದಲ್ವಾ? ಆದರೆ ಇಲ್ಲೊಂದು ಬೆಕ್ಕು ಶನಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಭಕ್ತಿ ಪೂರ್ವಕವಾಗಿ ಪ್ರದಕ್ಷಿಣೆಯನ್ನು ಹಾಕಿದೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಹಿಂದೆ ಶ್ವಾನವೊಂದು ದೇವಾಲಯದಲ್ಲಿ ಪ್ರದಕ್ಷಿಣೆ ಹಾಕಿದಂತಹ ಹಾಗೂ ಹಸುವೊಂದು ಅಯ್ಯಪ್ಪ ದೇಗುಲಕ್ಕೆ ಪ್ರದಕ್ಷಿಣೆ ಹಾಕಿದ ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಅದೇ ರೀತಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಇಲ್ಲಿನ ಶನಿ ದೇವಾಲಯಕ್ಕೆ ಭೇಟಿ ನೀಡಿದಂತಹ ಬೆಕ್ಕೊಂದು ಶನಿ ದೇವರ ವಿಗ್ರಹದ ಸುತ್ತ ಭಕ್ತಿ ಪೂರ್ವಕವಾಗಿ ಪ್ರದಕ್ಷಿಣೆ ಹಾಕಿದೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮಂಜುನಾಥ್ ಹೆಚ್.ಸಿ (@manjunath HC) ಎಂಬವರು ಈ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಾಯಿ ಇಲ್ಲದ ಮೂಕ ಜೀವಿ ಬೆಕ್ಕು, ಆದರೂ ಹಿಂದಿನ ಜನ್ಮದ ಸಂಸ್ಕಾರದಿಂದ ದೈವತ್ವವನ್ನು ಗುರುತಿಸಿ ಈ ರೀತಿ ಶನಿ ದೇವರಿಗೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಾರಾಷ್ಟ್ರದಲ್ಲಿನ ಶನಿ ದೇವಾಲಯಕ್ಕೆ ಭೇಟಿ ನೀಡಿದಂತಹ ಬೆಕ್ಕೊಂದು ಶನಿ ದೇವರ ವಿಗ್ರಹದ ಸುತ್ತ ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಹಾಕುತ್ತಿರುವಂತಹ ದೃಶ್ಯವನ್ನು ಕಾಣಬಹುದು. ದೇವಾಲಯಕ್ಕೆ ಬಂದಂತಹ ಭಕ್ತರೆಲ್ಲರೂ ಬೆಕ್ಕಿನ ಭಕ್ತಿಯನ್ನು ಕಂಡು ಆಶ್ಚರ್ಯಚಕಿತರಗಿದ್ದಾರೆ. ಅಲ್ಲದೆ ಹಲವರು ಈ ಅಚ್ಚರಿಯ ದೃಶ್ಯವನ್ನು ಕಂಡು ವಿಡಿಯೋ ಚಿತ್ರೀಕರಣ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ಇದನ್ನೂ ಓದಿ: ನಾಲ್ಕು ಇಂಚಿನ ಬಾಲದೊಂದಿಗೆ ಜನಿಸಿದ ಮಗು; ಬೆರಗಾದ ವೈದ್ಯ ಲೋಕ 

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 18 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು “ಬೆಕ್ಕು ಸಾಕಿದರೆ ಅನಿಷ್ಟ ಅಂತಾರೆ ಆದರೆ ಈ ಬೆಕ್ಕು ಭಕ್ತಿಯಿಂದ ಪ್ರದಕ್ಷಿಣೆ ಹಾಕೋದು ನೋಡಿದ್ರೆ ಬೆಕ್ಕು ಸಾಕ್ಬೇಕು ಅಂತ ಅನ್ಸುತ್ತೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಈ ದೃಶ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಬೆಕ್ಕು ದೇವರಿಗೆ ಪ್ರದಕ್ಷಿಣೆ ಹಾಕುವ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us