
ಮದ್ವೆ (marriage) ಆದ ಗಂಡಸರ ಕಷ್ಟ ಕೇಳೋರು ಯಾರು. ಹೆಂಡ್ತಿಯನ್ನು ಶಾಂತವಾಗಿ ಇಟ್ಟುಕೊಳ್ಳುವುದರಲ್ಲೇ ಗಂಡು ಮಕ್ಕಳ ಅರ್ಧ ಜೀವನ ಕಳೆದು ಹೋಗುತ್ತದೆ. ಹೆಂಡ್ತಿಗೆ ಟೈಮ್ ಕೊಡ್ಲಿಲ್ಲ ಅಂದ್ರೆ ಮುಗಿದೇ ಹೋಯ್ತು. ಮನೆಯಲ್ಲಿ ದೊಡ್ಡ ಯುದ್ಧನೇ ನಡೆದು ಬಿಡುತ್ತೆ. ಇಲ್ಲೊಬ್ಬ ವ್ಯಕ್ತಿಯ ಪರಿಸ್ಥಿತಿಯೂ ಇದೇ ಆಗಿದೆ. 72 ಗಂಟೆಗಳ ಕಾಲ ಕೆಲಸ ಮಾಡಿ ಮನೆಗೆ ಬಂದಿದ್ದು, ಟೈಮ್ ಕೊಡದ ಪತಿಯ ವಿರುದ್ಧ ಪತ್ನಿಯೂ ಗರಂ ಆಗಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
indians ಹೆಸರಿಗೆ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಟೈಮ್ ಕೊಡದ ಗಂಡನ ಮೇಲೆ ಹೆಂಡತಿ ಅಸಮಾಧಾನ ಹೊರಹಾಕುತ್ತಿರುವುದನ್ನು ಕಾಣಬಹುದು. 72 ಗಂಟೆಗಳ ಕಾಲ ಕೆಲಸ ಮಾಡಿ ಮನೆಗೆ ಮರಳಿರುವ ಪತಿಯ ಮೇಲೆ ಗರಂ ಪತ್ನಿಯೂ ಆಗಿದ್ದಾಳೆ. ಪತಿಯೂ ಆಗಷ್ಟೇ ಮನೆಗೆ ಬಂದಿದ್ದು, ಫಾರ್ಮಲ್ ಉಡುಪಿನಲ್ಲೇ ಇದ್ದಾನೆ. ಐಡಿ ಕಾರ್ಡನ್ನು ಕತ್ತಿನಿಂದ ತೆಗೆಯುತ್ತಿದ್ದಾನೆ. ಈ ವೇಳೆ ಪತ್ನಿಯೂ, ತನ್ನ ಪತಿ ಮನೆಯಲ್ಲಿ 16 ಗಂಟೆಗಳ ಕಾಲ ಮಾತ್ರ ಇರುತ್ತಾನೆ..ನಾನು ಹೇಗೆ ಒಬ್ಬಳೇ ಮನೆಯನ್ನು ಮ್ಯಾನೇಜ್ ಮಾಡಲಿ ಎಂದು ಪ್ರಶ್ನೆ ಮಾಡಿದ್ದಾಳೆ. ಆದರೆ ಈ ವ್ಯಕ್ತಿಯೂ ದಣಿದಿದ್ದು ಹೆಂಡ್ತಿಯ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೆ ಇರುವುದನ್ನು ಕಾಣಬಹುದು.
ಇದನ್ನೂ ಓದಿ:Video: ಹೆಂಡ್ತಿ ಬಾಯ್ ಫ್ರೆಂಡ್ ಜೊತೆಯಲ್ಲಿರುವಾಗಲೇ ಪ್ರತ್ಯಕ್ಷನಾದ ಗಂಡ, ಮುಂದೇನಾಯ್ತು ನೋಡಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ನೀವು ಕೆಲಸ ಮುಗಿಸಿ ಮನೆಗೆ ಬರುವಾಗ ಕಿವಿಗೆ ಹತ್ತಿ ಇಟ್ಟುಕೊಂಡು ಬರುವುದು ಒಳ್ಳೆಯದು ಎಂದಿದ್ದಾರೆ. ಮತ್ತೊಬ್ಬರು ಹೀಗೆ ಮಾಡಿದ್ರೆ ಮತ್ತೆ ಆಫೀಸಿಗೆ ಹೋಗುವುದು ಪಕ್ಕಾ ಎಂದು ಕಾಮೆಂಟ್ ಮಾಡಿದ್ದಾರೆ. ಈಕೆ ತನ್ನ ಪತಿಯ ಬಳಿ ತನಗೆ ಸಮಯ ಕೊಡಿ ಎಂದಷ್ಟೇ ಹೇಳಿದ್ದಾಳೆ. ಆಕೆ ಮಾಡಿದ್ದು ತಪ್ಪಲ್ಲ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ